Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin health: ಸಣ್ಣ ವಯಸ್ಸಿನಲ್ಲಿ ವಯಸ್ಸಾದವರಂತೆ ಕಾಣುತ್ತಿದ್ದೀರಾ? ಈ ರೀತಿ ಕಾಳಜಿ ವಹಿಸಿ

ಸಣ್ಣ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣಲು ಆಹಾರ ಕ್ರಮ ಹಾಗೂ ಸೌಂದರ್ಯದ ಬಗ್ಗೆ ಕಾಳಜಿ ವಹಿಸದಿರುವುದು ಕಾರಣವಾಗಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸುವುದು ಅವಶ್ಯಕ ಎಂದು ತಜ್ಞರು ಸಲಹೆ ನೀಡುತ್ತಾರೆ.

Skin health: ಸಣ್ಣ ವಯಸ್ಸಿನಲ್ಲಿ ವಯಸ್ಸಾದವರಂತೆ ಕಾಣುತ್ತಿದ್ದೀರಾ? ಈ ರೀತಿ ಕಾಳಜಿ ವಹಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Aug 29, 2022 | 6:00 AM

ಕೆಲವರು ಸಣ್ಣ ವಯಸ್ಸಿನಲ್ಲಿ ವಯಸ್ಸಾದವರಂತೆ ಕಾಣುತ್ತಾರೆ. ಇನ್ನೂ ಕೆಲವರು ವಯಸ್ಸಾಗಿದ್ದರೂ ವಯಸ್ಸಾದಂತೆ ಕಾಣಿಸುವುದಿಲ್ಲ. ಎರಡನೇ ವಿಭಾಗಕ್ಕೆ ಸೇರಿದವರು ತಮ್ಮ ಕಾಂತಿಯುತವಾದ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಿರುತ್ತಾರೆ. ಆದರೆ 20 ಮತ್ತು 30ರ ಹರೆಯದ ಜನರು ಕೆಲವೊಮ್ಮೆ ವಯಸ್ಸಾದವರಂತೆ ಕಾಣಲು ಕಾರಣ ಅವರ ಮುಖ ಮತ್ತು ದೇಹದಲ್ಲಾಗುವ ಬದಲಾವಣೆ. ಚಿಕ್ಕವಯಸ್ಸಿನಲ್ಲಿ ಮುದುಕರಾದಂತೆ ಕಾಣದಿರಲು ಆಹಾರ ಕ್ರಮ ಹಾಗೂ ಸೌಂದರ್ಯದ ಕಾಳಜಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ವಯಸ್ಸಾದಂತೆ ಚರ್ಮದಲ್ಲಿ ಸುಕ್ಕುಗಳು ಬರುವುದು ಸಹಜ, ಆದರೆ ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. 20ರ ಹರೆಯದಲ್ಲಿ ಅವರು 50 ದಾಟಿದವರಂತೆ ಕಾಣುತ್ತಾರೆ. ಇದು ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. ಚರ್ಮದ ಗ್ರಂಥಿಗಳಿಂದ ಬಿಡುಗಡೆಯಾಗುವ ತೈಲವು ಮೊಡವೆ ಮತ್ತು ಕಪ್ಪು ಚುಕ್ಕೆಗಳಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಪ್ರಬುದ್ಧ ವಯಸ್ಸಿನಲ್ಲಿ ಚರ್ಮವು ಪ್ರಕಾಶಮಾನವಾಗಿ, ಸುಂದರವಾಗಿ ಮತ್ತು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ.

ಅದೇ ಸಮಯದಲ್ಲಿ, ನೀವು ಚರ್ಮದ ಆರೈಕೆಯ ಬಗ್ಗೆ ಅಸಡ್ಡೆ ಹೊಂದಿದ್ದರೆ ಅಕಾಲಿಕ ವಯಸ್ಸಾದ ಚಿಹ್ನೆಗಳು ಮುಖದ ಮೇಲೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿಯೇ ತ್ವಚೆಯ ಆರೈಕೆಯ ಜೊತೆಗೆ ಇತರ ಕೆಲವು ಅಭ್ಯಾಸಗಳನ್ನು ಬದಲಾಯಿಸುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ನಮ್ಮ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

  1. ಚರ್ಮದ ಮೇಲೆ ಬರುವ ಸುಕ್ಕುಗಳನ್ನು ಕಡಿಮೆ ಮಾಡಲು ಸುಲಭವಾದ, ನೈಸರ್ಗಿಕ ವಿಧಾನವೆಂದರೆ ಸಾಕಷ್ಟು ನೀರು ಕುಡಿಯುವುದು. ಇದು ಚರ್ಮ ಮತ್ತು ಮುಖದಲ್ಲಿ ತೇವಾಂಶವನ್ನು ಇಡುತ್ತದೆ, ಅಕಾಲಿಕ ಸುಕ್ಕುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದು ದೇಹದಿಂದ ವಿಷಕಾರಿ ತ್ಯಾಜ್ಯವನ್ನು ಕೂಡ ಹೊರಹಾಕಲು ಸಹಕಾರಿಯಾಗಿದೆ.
  2. ನಿದ್ರೆಯ ಕೊರತೆಯು ಮುಖದ ಮೇಲೆ ಅಕಾಲಿಕ ಸುಕ್ಕುಗಳಿಗೆ ಕಾರಣವಾಗಬಹುದು. ನಿದ್ರೆಯ ಕೊರತೆಯು ಮುಖದ ಸ್ನಾಯುಗಳನ್ನು ಕುಗ್ಗಿಸುತ್ತದೆ. ಇದರಿಂದ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿಯೇ ನೀವು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಮಲಗಬೇಕು.
  3. ಹೆಚ್ಚು ಸಕ್ಕರೆ ಮತ್ತು ಸಿಹಿತಿಂಡಿಗಳನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಉತ್ಪಾದಿಸುವ ಚರ್ಮದ ಸಾಮರ್ಥ್ಯವನ್ನು ಕ್ರಮೇಣ ಕಡಿಮೆ ಮಾಡುತ್ತದೆ. ಇದರಿಂದ ಮುಖ, ಕುತ್ತಿಗೆ ಮತ್ತು ಕೈಗಳಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅಂತಹ ತಿಂಡಿಗಳನ್ನು ಸೇವಿಸುವ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳಿ.
  4. ಧೂಮಪಾನವು ಚರ್ಮಕ್ಕೆ ಹಾನಿಕಾರಕವಾಗಿದೆ ಏಕೆಂದರೆ ಇದು ಚರ್ಮದ ಅಂಗಾಂಶವನ್ನು ನಾಶಪಡಿಸುತ್ತದೆ. ಅಂಗಾಂಶ ರಚನೆಯನ್ನು ನಿರ್ಬಂಧಿಸುವುದರ ಜೊತೆಗೆ ಚರ್ಮವನ್ನು ಸಡಿಲವಾಗಿಸುತ್ತದೆ. ಹೆಚ್ಚು ಕಾಲ ಯುವಕರಾಗಿರಲು ಬಯಸುವವರು ಧೂಮಪಾನವನ್ನು ತ್ಯಜಿಸಬೇಕು.
  5. ಕೆಲಸದ ಒತ್ತಡದಿಂದಲೂ ಮುಖದಲ್ಲಿ ಅಕಾಲಿಕ ವಯಸ್ಸಾಗುವಿಕೆ ಆರಂಭವಾಗಬಹುದು. ಅದಕ್ಕಾಗಿಯೇ ಒತ್ತಡವನ್ನು ಸಾಧ್ಯವಾದಷ್ಟು ತಪ್ಪಿಸಿ ಸಂತೋಷದಿಂದ ಇರಲು ಪ್ರಯತ್ನಿಸಿ.

ಮತ್ತಷ್ಟು ಲೈಫ್​ಸ್ಟೈಲ್ ಸುದ್ದಿಗಳನ್ನು ಒದಲು ಇಲ್ಲಿ ಕ್ಲಿಕ್ ಮಾಡಿ

ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ