Dopamine Dating: ಸಂಬಂಧದಲ್ಲಿ ಪ್ರೀತಿ, ಉತ್ಸಾಹವನ್ನು ಉಳಿಸಿಕೊಳ್ಳಲು ಏನು ಮಾಡಬೇಕು? ಡೊಪಮೈನ್ ಡೇಟಿಂಗ್ ಯಾಕೆ ಮುಖ್ಯ? ಇಲ್ಲಿದೆ ಮಾಹಿತಿ
ಡೊಪಮೈನ್ ಡೇಟಿಂಗ್ ಎನ್ನುವಂತಹದ್ದು ಹೊಸ ಡೇಟಿಂಗ್ ಪದ. ಇದು ಪ್ರಣಯ ಸಂಬಂಧ ಅಥವಾ ದಾಂಪತ್ಯದ ಪ್ರಾರಂಭದಲ್ಲಿ ಜನರು ಸಾಮಾನ್ಯವಾಗಿ ಅನುಭವಿಸುವ ಸಂತೋಷ ಮತ್ತು ಉತ್ಸಾಹವನ್ನು ಕಾಲದ ನಂತರವೂ ಕಾಪಾಡಿಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ.
ಡೊಪಾಮೈನ್ (Dopamine Dating) ಒಂದು ಲವ್ ಹಾರ್ಮೋನ್ ಆಗಿದ್ದು, ಅದು ನೈಸರ್ಗಿಕವಾಗಿ ಮಾನವನ ಮೆದುಳಿನಲ್ಲಿ ಉತ್ಪತ್ತಿಯಾಗುತ್ತದೆ ಮತ್ತು ಆ ಹಾರ್ಮೋನ್ ನಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ. ಪ್ರೇಮಿಗಳ ಮತ್ತು ಗಂಡ ಹೆಂಡತಿ ನಡುವೆ ಭಾಂದವ್ಯ ಹೆಚ್ಚಾಗಲು ನಮ್ಮ ದೇಹದಲ್ಲಿನ ಈ ಡೆಪಾಮೈನ್ ಹಾರ್ಮೋನ್ ಪ್ರಮುಖ ಕಾರಣವಾಗಿದೆ. ಸಂಬಂಧದ ಆರಂಭದ ದಿನಗಳಲ್ಲಿ ನಮ್ಮಲ್ಲಿರುವ ಡೊಪಾಮೈನ್ ಮಟ್ಟವು ಹೆಚ್ಚಿರುತ್ತದೆ ಆಗ ಸಂಗಾತಿಗಳಿಬ್ಬರು ಬಹಳ ಅನ್ಯೋನ್ಯವಾಗಿರುತ್ತಾರೆ. ಮತ್ತು ಸಂತೋಷದಿಂದ ಇರುತ್ತಾರೆ. ಸಮಯ ಕಳೆದಂತೆ ಈ ದಂಪತಿಗಳಲ್ಲಿ ತಮ್ಮ ಪ್ರೇಮ ಸಂಬಂಧಕ್ಕೆ ಸಂಬಂಧಿಸಿದ ಸಂತೋಷ ಮತ್ತು ಉತ್ಸಾಹದ ಭಾವನೆ ಕಡಿಮೆಯಾಗುತ್ತದೆ. ಈ ರೀತಿಯಾಗಿ ನಿಮ್ಮ ಸಂಬಂಧದಲ್ಲೂ ಪ್ರೀತಿ ಕಡಿಮೆಯಾದಾಗ ಡೊಪಮೈನ್ ಡೇಟಿಂಗ್ ಮೂಲಕ ಹಿಂದೆ ಇದ್ದ ಪ್ರೀತಿಯ ಭಾವನೆಯನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ.
ಡೊಪಮೈನ್ ಡೇಟಿಂಗ್ ಎನ್ನುವಂತಹದ್ದು, ಹೊಸ ಡೇಟಿಂಗ್ ಪದವಾಗಿದೆ. ಸಂಬಂಧದಲ್ಲಿ ಕಾಲ ಕಳೆದಂತೆ ಪ್ರಾರಂಭದಲ್ಲಿ ಸಾಮಾನ್ಯವಾಗಿ ಅನುಭವಿಸುವ ಸಂತೋಷ ಮತ್ತು ಉತ್ಸಾಹ ಇರುವುದಿಲ್ಲ. ಈ ಪ್ರೀತಿ ಮತ್ತು ಸಂತೋಷವನ್ನು ಮರಳಿ ಪಡೆಯಲು ಡೊಪಮೈನ್ ಡೇಟಿಂಗ್ ಸಹಾಯ ಮಾಡುತ್ತದೆ. ಸಂಬಂಧದಲ್ಲಿ ವಿವಿಧ ಹಂತಗಳಲ್ಲಿ ಸಂಬಂಧದ ಪ್ರೀತಿ ಮತ್ತು ಸಂತೋಷವನ್ನು ಮೊದಲಿನ ಹಾಗೆ ಕಾಪಾಡಿಕೊಳ್ಳಲು ಕೆಲವು ಮಾರ್ಗಗಳು ಇಲ್ಲಿವೆ.
ರಿಲೇಷನ್ ಶಿಪ್ ಎಕ್ಸ್ ಪರ್ಟ್ ಶಾಝೀನ್ ಶಿವದಾಸನಿ ಅವರು ವಿವಿಧ ಹಂತಗಳ ಮೂಲಕ ಸಂಬಂಧದಲ್ಲಿ ಉತ್ಸಾಹವನ್ನು ಉಳಿಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಹನಿಮೂನ್ ಅವಧಿ ಈಗಷ್ಟೇ ಮುಗಿದಿದೆ ಎನ್ನುವ ಹಂತದಲ್ಲಿ:
ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಿ: ಪ್ರಣಯ ಸಂಬಂಧದಲ್ಲಿ ಮುಳುಗುವುದು ಸುಲಭ. ಹಾಗಿದ್ದರೂ, ನಿಮ್ಮಿಬ್ಬರ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವುದು ಸಂಬಂಧವನ್ನು ಉಲ್ಲಾಸದಾಯಕವಾಗಿರಿಸುತ್ತದೆ. ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವ ಮೂಲಕ ನಿಮ್ಮ ಹವ್ಯಾಸಗಳು, ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡಿ.
ತಮಾಷೆಯಾಗಿರಿ: ಸಂಗಾತಿಗಳಿಬ್ಬರ ನಡುವಿನ ಹಾಸ್ಯಮಯವಾದ ಸಂಭಾಷಣೆಗಳು, ಅವರಿಬ್ಬರ ಸಂಭಾಷಣೆಯನ್ನು ಆಸಕ್ತಿದಾಯಕವಾಗಿಸುತ್ತದೆ. ಡೇಟಿಂಗ್ನ ಆರಂಭದ ಕೆಲವು ತಿಂಗಳುಗಳಲ್ಲಿ ನಾವು ಇದನ್ನು ಸಕ್ರಿಯವಾಗಿ ಮಾಡಬಹುದಾದರೂ, ಕೆಲವೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಈ ವಿನೋದಮಯ ಪ್ರವೃತ್ತಿ ಕಡಿಮೆಯಾಗುತ್ತದೆ. ಇಬ್ಬರ ಸಂಬಂಧದ ಉತ್ಸಾಹವನ್ನು ಜೀವಂತವಾಗಿರಿಸಲು ಸಂಗಾತಿಗಳಿಬ್ಬರೂ ತಮಾಷೆಯ ಮನೋಭಾವನೆಯನ್ನು ಇಟ್ಟುಕೊಂಡಿರಬೇಕು.
ಇದನ್ನೂ ಓದಿ: Dating App: ಡೇಟಿಂಗ್ ಆ್ಯಪ್ ಬಳಸುವ ಮುನ್ನ ನಿಮ್ಮ ಸುರಕ್ಷತೆಯ ಬಗ್ಗೆ ಎಚ್ಚರವಹಿಸಿ
ದಾಂಪತ್ಯದಲ್ಲಿ ಎರಡು ವರ್ಷಗಳ ನಂತರ- ಪ್ರತಿದಿನ ಪ್ರೀತಿಯಲ್ಲಿ ಬೀಳುವುದು ಹೇಗೆ?
ಒಬ್ಬರನ್ನೊಬ್ಬರು ಲಘುವಾಗಿ ಪರಿಗಣಿಸಬೇಡಿ: ಸಂಗಾತಿಯ ಪ್ರತಿ ಕಾರ್ಯಗಳಿಗೂ ಕೃತಜ್ಞತೆಯನ್ನು ತೊರಿಸಿ ಮತ್ತು ಸಂಗಾತಿಯನ್ನು ಪ್ರಶಂಸಿಸಲು ಮರೆಯದಿರಿ. ನಿಮ್ಮ ಸಂಗಾತಿ ನಿಮಗಾಗಿ ಏನನ್ನಾದರೂ ಮಾಡಿದಾಗ ಅವರಿಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ತಿಳಿಸಿ. ಈ ರೀತಿಯ ಚಿಕ್ಕ ಚಿಕ್ಕ ವಿಷಯಗಳು ಸಂಗಾತಿಗಳ ನಡುವಿನ ಪ್ರೀತಿಯನ್ನು ಜೀವಂತವಾಗಿಡಲು ಸಹಾಯ ಮಾಡುತ್ತದೆ.
ಸಮಯ ನೀಡಿ: ಸಂಬಂಧದ ಪ್ರಾರಂಭದಲ್ಲಿ ಇದ್ದ ಪ್ರೀತಿಯನ್ನು ಹಾಗೆಯೆ ಉಳಿಸಬೇಕು ಎಂದು ಬಯಸಿದರೆ, ಯಾವುದೇ ಹಿಂಜರಿಕೆಯಿಲ್ಲದೆ, ಸಂಗಾತಿಗೆ ಪ್ರೇಮ ಪತ್ರವನ್ನು ಬರೆಯುವುದೋ, ಸಂಗಾತಿಯನ್ನು ಡಿನ್ನರ್ ಡೇಟ್ ಅಥವಾ ಫಿಲ್ಮ್ಗೆ ಕರೆದುಕೊಂಡು ಹೋಗುವುದು ಈ ರೀತಿಯಾಗಿ ಮಾಡುವುದರಿಂದ ಸಂಬಂಧದ ಉತ್ಸಾಹವನ್ನು ಉಳಿಸಿಕೊಳ್ಳಬಹುದು.
ಅನ್ಯೋನ್ಯತೆಗೆ ಆದ್ಯತೆ ನೀಡಿ: ಭಾವನಾತ್ಮಕ, ಬೌದ್ಧಿಕ ಮತ್ತು ದೈಹಿಕ ಅನ್ಯೋನ್ಯತೆ ಯಾವಾಗಲೂ ಸಂಬಂಧದ ಪ್ರಮುಖ ಭಾಗವಾಗಿ ಉಳಿಯುತ್ತದೆ. ಅನ್ಯೋನ್ಯತೆಯು ಸಂಬಂಧದಲ್ಲಿ ಪ್ರೀತಿಯನ್ನು ಜೀವಂತವಾಗಿರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:49 pm, Wed, 26 April 23