ಸೊಳ್ಳೆಗಳ ಕಾಟಕ್ಕೆ ಮುಕ್ತಿ ಈ ಗಿಡಮೂಲಿಕೆಗಳು, ಇಲ್ಲಿದೆ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 21, 2023 | 6:43 PM

ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಸೊಳ್ಳೆಗಳ ಕಾಟ ತಪ್ಪಿದ್ದಲ್ಲ. ಈ ಸೊಳ್ಳೆ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ನಮ್ಮನ್ನು ಭಾದಿಸಬಹುದು. ಈ ಕಾಯಿಲೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಮಾರಣಾಂತಿಕವಾಗಿ ಪರಿಣಾಮಿಸಬಹುದು. ಆದ್ದರಿಂದ ಮನೆಯೊಳಗೆ ಸೊಳ್ಳೆಗಳು ಬಾರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ನೀವು ಏನೇ ಮಾಡಿದರೂ ಸೊಳ್ಳೆಯ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ, ಹಾಗಿದ್ದರೆ ಈ ಕೆಲವು ಗಿಡಮೂಲಿಕೆಗಳು ನಿಮ್ಮ ಮನೆಯನ್ನು ಸೊಳ್ಳೆಯ ಕಾಟದಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ಸೊಳ್ಳೆಗಳ ಕಾಟಕ್ಕೆ ಮುಕ್ತಿ ಈ ಗಿಡಮೂಲಿಕೆಗಳು, ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
Follow us on

ಎಲ್ಲಾ ಋತುವಿನಲ್ಲೂ ಸೊಳ್ಳೆಗಳ ಕಾಟ ಇದ್ದೇ ಇರುತ್ತದೆ. ಅದರಲ್ಲೂ ಈ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ತುಸು ಹೆಚ್ಚೇ ಇರುತ್ತದೆ. ತೇವಭರಿತವಾದ ವಾತವಾರಣ ಅವುಗಳಿಗೆ ಮೊಟ್ಟೆಯನ್ನು ಇಡಲು ಅನುಕೂಲಕರ ವಾತವಾರಣವನ್ನು ನಿರ್ಮಿಸಿಕೊಡುತ್ತದೆ. ಆದ್ದರಿಂದ ಈ ಋತುವಿನಲ್ಲಿ ಹೆಚ್ಚಾಗಿ ಸೊಳ್ಳೆಗಳ ಕಾಟ ಇರುತ್ತದೆ. ಮಾತ್ರವಲ್ಲದೆ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾ, ಝೀಕಾ, ಚಿಕನ್ ಗೂನ್ಯಾ ಮುಂತಾದ ಕಾಯಿಲೆಗಳು ಉಂಟಾಗುತ್ತವೆ. ಈ ಕಾಯಿಲೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ, ಅದು ಮಾರಕವಾಗಿ ಪರಿಣಾಮಿಸಬಹುದು. ಈ ಕಾರಣಕ್ಕಾಗಿ ಈ ಋತುವಿನಲ್ಲಿ ಸೊಳ್ಳೆಗಳು ಭಾದಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಮನೆಯೊಳಗೆ ಸೊಳ್ಳೆಗಳು ಬಾರದಂತೆ ತಡೆಯುವುದು ಹೇಗೆ ಎಂದು ತಿಳಿಯೋಣ.

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಗಿಡಮೂಲಿಕೆಗಳು:

ಸೊಳ್ಳೆಗಳನ್ನು ಹೋಗಲಾಡಿಸಲು ಪುದೀನಾ: ಪುದೀನಾ ಪರಿಮಳವು ತುಂಬಾ ಪ್ರಬಲವಾಗಿದೆ. ಇದರ ವಾಸನೆ ಸೊಳ್ಳೆಗಳನ್ನು ಹೋಗಲಾಡಿಸುತ್ತದೆ. ಆದ್ದರಿಂದ ಪುದೀನಾ ಎಲೆಗಳನ್ನು ಅಥವಾ ಅದರ ಎಣ್ಣೆಯನ್ನು ಮನೆಯ ವಿವಿಧ ಸ್ಥಳಗಳಲ್ಲಿ ಇರಿಸಿ. ಅಲ್ಲದೆ ಪುದೀನಾ ಗಿಡಗಳನ್ನು ಮನೆಯಲ್ಲಿ ನೆಡುವುದರಿಂದಲೂ ಸೊಳ್ಳೆಗಳು ಬಾರದಂತೆ ನೋಡಿಕೊಳ್ಳಬಹುದು.

ಸೊಳ್ಳೆಗಳನ್ನು ಹೋಗಲಾಡಿಸಲು ಲ್ಯಾವೆಂಡರ್ ಎಣ್ಣೆ: ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಲ್ಯಾವೆಂಡರ್ ಎಣ್ಣೆ ಕೂಡಾ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಇದರ ವಾಸನೆ ಸೊಳ್ಳೆಗಳನ್ನು ಓಡಿಸುತ್ತದೆ. ಲ್ಯಾವೆಂಡರ್ ಎಣ್ಣೆಯು ಸೊಳ್ಳೆಗಳನ್ನು ಮಾತ್ರವಲ್ಲದೆ ಇತರ ಕೀಟಗಳಿಂದ ಕೂಡಾ ಮನೆಯನ್ನು ರಕ್ಷಿಸುತ್ತವೆ.. ಈ ಎಣ್ಣೆಯನ್ನು ನಿಮ್ಮ ತ್ವಚೆಯ ಮೇಲೂ ಹಚ್ಚಿಕೊಳ್ಳಬಹುದು. ಅಥವಾ ಸೊಳ್ಳೆ ಕಚ್ಚಿದ ಜಾಗದಲ್ಲಿ ತುರಿಕೆ ಉಂಟಾದರೆ ಆ ಜಾಗಕ್ಕೆ ಸ್ವಲ್ಪ ಲ್ಯಾವೆಂಡರ್ ಎಣ್ಣೆ ಹಚ್ಚುವುದರಿಂದ ತುರಿಕೆಯಿಂದ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಡೆಂಗ್ಯೂ: ಈ ಸರಳ ಅಡುಗೆ ಪದಾರ್ಥವು ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸುತ್ತದೆ

ಸೊಳ್ಳೆಗಳನ್ನು ತೊಡೆದು ಹಾಕಲು ಟೀ ಟ್ರೀ ಆಯಿಲ್: ಟೀ ಟ್ರೀ ಆಯಿಲ್ ಎಂಬ ಸಾರಭೂತ ತೈಲವು ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೊಳ್ಳೆಗಳನ್ನು ತೊಡೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೆ ಈ ಸಾರಭೂತ ತೈಲವು ಕೀಟ ನಿವಾರಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಸ್ಪ್ರೇ ಬಾಟಲಿಯಲ್ಲಿ ಸ್ವಲ್ಪ ನೀರು ಮತ್ತು ಕೆಲವು ಹನಿ ಟೀ ಟ್ರೀ ಎಣ್ಣೆಯನ್ನು ಮಿಶ್ರಣ ಮಾಡಿ ಸಂಜೆಯ ವೇಳೆಯಲ್ಲಿ ಮನೆಗಳಲ್ಲಿ ಸಿಂಪಡಿಸಿ. ಇದರಿಂದ ಮನೆಯೊಳಗೆ ಸೊಳ್ಳೆಗಳು ಪ್ರವೇಶಿಸುವುದಿಲ್ಲ.

ಸೊಳ್ಳೆಗಳನ್ನು ಹೋಗಲಾಡಿಸಲು ಲವಂಗ: ಲವಂಗದ ವಾಸೆಯು ಎಷ್ಟು ಪ್ರಬಲವಾಗಿದೆ ಎಂದರೆ ಇದರಿಂದ ಸೊಳ್ಳೆಗಳ ಭಾದೆ ಇರವುದಿಲ್ಲ. ಇದರ ಬ್ಯಾಕ್ಟೀರಿಯಾ ವಿರೋಧಿ ವಾಸನೆಯು ಸೊಳ್ಳೆಗಳನ್ನು ದೂರವಿಡುತ್ತದೆ, ನೀವು ಅದರ ಎಣ್ಣೆಯನ್ನು ನಿಮ್ಮ ದೇಹಕ್ಕೆ ಹಚ್ಚಬಹುದು ಅಥವಾ ಸಂಜೆ ವೇಳೆಯಲ್ಲಿ ಬೇವಿನ ಎಲೆಗಗಳೊಂದಿಗೆ ಲವಂಗವನ್ನು ಸುಟ್ಟು ಹೊಗೆಯಾಡಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: