
ಒಡ ಹುಟ್ಟಿದವರ (Siblings) ಸಂಬಂಧ ತುಂಬಾನೇ ವಿಶೇಷವಾದದ್ದು. ಅಲ್ಲಿ ಪ್ರೀತಿ, ಜಗಳ, ಅಸೂಯೆ ಎಲ್ಲವೂ ಇದೆ. ಒಡಹುಟ್ಟಿದವರ ನಡುವೆ ಎಷ್ಟೇ ಪ್ರೀತಿ ಇದ್ದರೂ ಅವರು ಜಗಳವಾಡಿಕೊಳ್ಳುವುದನ್ನು ಬಿಡುವುದಿಲ್ಲ. ಸಣ್ಣ ವಯಸ್ಸಿನಿಂದಲೇ ಅಣ್ಣ-ತಂಗಿ, ಅಕ್ಕ-ತಂಗಿ, ಅಣ್ಣ-ತಮ್ಮ ಹೀಗೆ ಒಡಹುಟ್ಟಿದವರು ಕಿರಿಕ್ (siblings rivalry) ಮಾಡಿಕೊಳ್ಳುತ್ತಾರೆ. ಹೌದು ಬಟ್ಟೆ, ತಿಂಡಿ, ಊಟ, ಟಿವಿ ರಿಮೋಟ್, ಆಟಿಕೆ ಹೀಗೆ ಪ್ರತಿಯೊಂದು ವಿಷಯಕ್ಕೂ ಕಿತ್ತಾಡಿಕೊಂಡು, ಜಗಳವಾಡುತ್ತಾ ಮನೆಯವರಿಗೆ ಟೆನ್ಷನ್ ಕೊಡುತ್ತಿರುತ್ತಾರೆ. ಪ್ರತಿ ಮನೆಯಲ್ಲೂ ಇದು ತುಂಬಾನೇ ಕಾಮನ್ ಬಿಡಿ. ನೀವು ಸಹ ನಿಮ್ಮ ಒಡ ಹುಟ್ಟಿದವರೊಂದಿಗೆ ಇದೇ ರೀತಿ ಕಿತ್ತಾಡಿರುತ್ತೀರಿ ಅಲ್ವಾ. ಆದ್ರೆ ಒಡಹುಟ್ಟಿದವರು ಈ ರೀತಿ ಜಗಳವಾಡುವುದರ ಹಿಂದಿನ ಕಾರಣ ಏನೆಂಬುದು ನಿಮಗೆ ಗೊತ್ತಾ? ಇದಕ್ಕೂ ಒಂದಷ್ಟು ಕಾರಣಗಳಿವೆಯಂತೆ, ಅದರ ಸಂಪೂರ್ಣ ವಿವರ ಇಲ್ಲಿದೆ.
ಒಡಹುಟ್ಟಿದವರು ತಾವು ದೊಡ್ಡವರದಾ ಬಳಿಕವೂ ಟಾಮ್ ಆಂಡ್ ಜೆರ್ರಿ ತರಹ ಜಗಳವಾಡುತ್ತಲೇ ಇರುತ್ತಾರೆ. ಸಹೋದರ-ಸಹೋದರಿಯರು ಎಷ್ಟೇ ಪ್ರೀತಿಯಿಂದ ಇದ್ದರೂ, ಕೆಲವೊಂದು ಬಾರಿ ಸಿಕ್ಕಾಪಟ್ಟೆ ಜಗಳವಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಏನೆಂಬುದನ್ನು ನೋಡೋಣ.
ಇದನ್ನೂ ಓದಿ: 10 ವರ್ಷ ತುಂಬುವ ಮೊದಲೇ ಮಕ್ಕಳಿಗೆ ಪೋಷಕರು ತಪ್ಪದೆ ಈ ವಿಚಾರಗಳನ್ನು ಕಲಿಸಬೇಕಂತೆ
ಹೀಗೆ ಒಡಹುಟ್ಟಿದವರು ಜಗಳವಾಡುವಾಗ, ಪೋಷಕರು ಅವರನ್ನು ಸಮಾನವಾಗಿ ನಡೆಸಿಕೊಳ್ಳುವತ್ತ ಗಮನ ಹರಿಸಬೇಕು. ಒಬ್ಬರದ್ದೇ ತಪ್ಪು ಎಂದು ಒಂದು ಮಗುವಿಗೆ ಬೈದು, ಇನ್ನೊಂದು ಮಗುವನ್ನು ವಹಿಸಿ ಮಾತನಾಡಿದರೆ, ಆ ಮಗು ಮತ್ತಷ್ಟು ಕೋಪಗೊಳ್ಳುತ್ತದೆ. ಹಾಗಾಗಿ ಪೋಷಕರು ಇಬ್ಬರು ಮಕ್ಕಳನ್ನು ಸಮಾನವಾಗಿ ನಡೆಸಿಕೊಳ್ಳಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:24 pm, Tue, 5 August 25