ಹಳ್ಳಿ ಕಡೆಗಳಲ್ಲಿ ರಾತ್ರಿ ಊಟವಾದ ಬಳಿಕ ಎಲೆಯಡಿಕೆಯನ್ನು ತಿಂದರೇನೇ ತೃಪ್ತಿ. ಹೀಗಾಗಿ ಅನೇಕರಲ್ಲಿ ಊಟದ ಬಳಿಕ ಎಲೆಯಡಿಕೆಯನ್ನು ಮೆಲ್ಲುವ ಅಭ್ಯಾಸವು ಇದೆ. ಇತ್ತೀಚೆಗಿನ ದಿನಗಳಲ್ಲಿ ವಿವಿಧ ಪಾನ್ ಬೀಡಗಳಿಗೆ ಭಾರಿ ಬೇಡಿಕೆಯಿದೆ. ಹೆಚ್ಚಿನವರು ಈ ವೀಳ್ಯದೆಲೆಯಿಂದ ಮಾಡಿದ ಸ್ವೀಟ್ ಪಾನ್ ಅನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ಅನೇಕ ರೋಗ ರುಜಿನಗಳನ್ನು ದೂರ ಮಾಡುವ ಶಕ್ತಿಯು ಈ ವೀಳ್ಯದೆಲೆಯಲ್ಲಿದೆ.
* ವೀಳ್ಯದೆಲೆಯ ಜೊತೆಗೆ ತುಳಸಿ ಎಲೆ, ಲವಂಗ, ಪಚ್ಚಕರ್ಪೂರ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುತ್ತಿದ್ದರೆ ಕಫ ಹಾಗೂ ಕೆಮ್ಮಿನ ಸಮಸ್ಯೆಯು ದೂರವಾಗುತ್ತದೆ.
* ತಲೆ ಹೊಟ್ಟು ಹಾಗೂ ಕೂದಲು ಉದುರುವ ಸಮಸ್ಯೆಯಿರುವವರು ವೀಳ್ಯದೆಲೆಯನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತೆಲೆಗೆ ಹಚ್ಚಿಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.
* ವೀಳ್ಯದೆಲೆಯಲ್ಲಿ ಬೆಳ್ಳುಳ್ಳಿ ಎಸಳು, ಸಣ್ಣ ತುಂಡು ಶುಂಠಿ, ಜೇನುತುಪ್ಪ ಬೆರೆಸಿ ಜಗಿದು ತಿನ್ನುವುರಿಂದ ರಕ್ತನಾಳಗಳಲ್ಲಿ ರಕ್ತ ಸಂಚಾರವು ಚೆನ್ನಾಗಿ ಆಗುತ್ತದೆ.
* ವೀಳ್ಯದೆಲೆಗೆ ಸ್ವಲ್ಪ ಅರಿಶಿನ ಹಾಕಿ ಮಗುವಿನ ತಲೆಗೆ ತಿಕ್ಕುವುದರಿಂದ ಶೀತದ ಸಮಸ್ಯೆಯು ಕಡಿಮೆಯಾಗುತ್ತದೆ.
* ಎದೆಹಾಲು ಹೆಚ್ಚಾಗಲು ಬಾಣಂತಿಯರು ವೀಳ್ಯದೆಲೆಯನ್ನು ಸೇವಿಸುವುದು ಉತ್ತಮ.
* ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿದ್ದರೆ ವೀಳ್ಯದೆಲೆಗಳನ್ನು ಅರೆದು ಗಾಯವಾದಲ್ಲಿಗೆ ಹಚ್ಚಿ ಒತ್ತಿ ಹಿಡಿಯುವುದರಿಂದ ರಕ್ತ ಬರುವುದು ನಿಲ್ಲುತ್ತದೆ.
* ವೀಳ್ಯದೆಲೆಗೆ ಉಪ್ಪು ಹಾಕಿಕೊಂಡು ಅಗಿದು ರಸವನ್ನು ನುಂಗುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
* ಎಲೆ ಅಡಿಕೆಯನ್ನು ಮೆಲ್ಲುತ್ತಿದ್ದರೆ ಜೊಲ್ಲು ರಸ ಉತ್ಪತ್ತಿಯಾಗಿ ಜೀರ್ಣ ಶಕ್ತಿಯು ಸುಧಾರಿಸುತ್ತದೆ.
* ಊಟವಾದ ಬಳಿಕ ಎಲೆಯಡಿಕೆ ಹಾಕಿಕೊಳ್ಳುವುದರಿಂದ ಬಾಯಿಯ ದುರ್ವಾಸನೆಯು ದೂರವಾಗಿ ಬಾಯಿಯ ಆರೋಗ್ಯವು ಕಾಪಾಡುತ್ತದೆ.
* ಮುಖವು ಮೊಡವೆಗಳಿಂದ ಅಂದ ಕಳೆದುಕೊಂಡಿದ್ದರೆ, ವೀಳ್ಯದೆಲೆಯೊಂದನ್ನು ನುಣ್ಣಗೆ ಅರೆದು ಮೊಡವೆಗಳಿದ್ದಲ್ಲಿ ಹಚ್ಚಿಕೊಂಡರೆ ಮೊಡವೆ ಹಾಗೂ ಮುಖದ ಮೇಲಿನ ಕಲೆಗಳು ಮಾಯಾವಾಗುತ್ತದೆ.
* ನೋವಿರುವ ಜಾಗಕ್ಕೆ ವೀಳ್ಯದೆಲೆಗಳನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಬಿಸಿ ಮಾಡಿ ಹಚ್ಚಿಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.
ಇದನ್ನೂ ಓದಿ: ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ? ತಜ್ಞರು ಏನು ಹೇಳ್ತಾರೆ ಗೊತ್ತಾ?
* ದಿನನಿತ್ಯ ವೀಳ್ಯದೆಲೆಯನ್ನು ಸೇವಿಸುತ್ತಿದ್ದರೆ ವಸಡುಗಳಲ್ಲಿ ರಕ್ತ ಬರುವುದು ನಿಲ್ಲುತ್ತದೆ.
* ತೂಕ ಇಳಿಸಿಕೊಳ್ಳಬೇಕೆನ್ನುವವರು ವೀಳ್ಯದೆಲೆಯ ಕಷಾಯವನ್ನು ಮಾಡಿ ಯಥೇಚ್ಛವಾಗಿ ಸೇವಿಸುತ್ತ ಬಂದರೆ ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ.
* ತುರಿಕೆ ಸಮಸ್ಯೆಗೆ ವೀಳ್ಯದೆಲೆಯ ರಸದ ಜೊತೆಗೆ ಲಿಂಬೆ ರಸವನ್ನು ಸೇರಿಸಿದರೆ ಹಚ್ಚಿದರೆ ಕಡಿಮೆಯಾಗುತ್ತದೆ.
* ತಲೆನೋವು ಸಮಸ್ಯೆಯಿದ್ದರೆ ವೀಳ್ಯದೆಲೆಯ ರಸಕ್ಕೆ ಕರ್ಪೂರ ಹಾಗೂ ತೆಂಗಿನೆಣ್ಣೆ ಬೆರೆಸಿ ಹಣೆಗೆ ಹಚ್ಚುವುದರಿಂದ ಗುಣಮುಖವಾಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ