ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ? ತಜ್ಞರು ಏನು ಹೇಳ್ತಾರೆ ಗೊತ್ತಾ?

ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಹೊಳೆಯುವಂತೆ ಮಾಡಲು, ಸಾಧ್ಯವಾದಷ್ಟೂ ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಚರ್ಮವನ್ನು ತೇವವಾಗಿಡುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ? ತಜ್ಞರು ಏನು ಹೇಳ್ತಾರೆ ಗೊತ್ತಾ?
ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ?
Follow us
ಸಾಧು ಶ್ರೀನಾಥ್​
|

Updated on: Feb 16, 2024 | 2:00 PM

ಬೇಸಿಗೆ ಕಾಲ ಸದ್ದಿಲ್ಲದೆ ಕಾಲೂರುತ್ತಿದೆ.. ಅಂದರೆ ಹೊರಗೆ ಹೆಜ್ಜೆಯಿಟ್ಟರೆ ಬಿರುಬಿಸಿಲು ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮುಖಾರವಿಂದ, ಚರ್ಮದ ಬಗ್ಗೆ ವಿಶೇಷ ಕಾಳಜಿಯ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಸೂರ್ಯನ ಬೆಳಕು, ಶಾಖವು ಚರ್ಮದ ಮೇಲೆ ಬಿದ್ದು ಕೆಲ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬೇಸಿಗೆಯಲ್ಲಿ ಸುಕ್ಕುಗಟ್ಟಿದ, ಕಳೆಗುಂದಿದ ಮುಖವನ್ನು ತಾಜಾ ಆಗಿ ಇಡುವುದು ದುಸ್ತರವೇ ಸರಿ. ಕೆಲವರಿಗೆ ದಿನಕ್ಕೆ ಹಲವಾರು ಬಾರಿ ಮುಖವನ್ನು ಉಜ್ಜುವುದು ಅಭ್ಯಾಸವಾಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಮುಖವನ್ನು ಉಜ್ಜಿದರೆ ಶೆಖೆಯಿಂದ ಮುಕ್ತಿ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ನಿಮ್ಮ ಮುಖವನ್ನು ಉಜ್ಜಿದಷ್ಟೂ ( Face Wash) ನಿಮ್ಮ ಮುಖ ಅರಳುತ್ತದೆ ಎಂದು ಪರಿಭಾವಿಸಿರುತ್ತೀರಿ. ಆದರೆ, ಹೀಗೆ ಮಾಡುವುದು ಕೆಲವೊಮ್ಮೆ ಚರ್ಮಕ್ಕೆ ಹಾನಿಕಾರಕ. ಹಾಗಾದರೆ ದಿನಕ್ಕೆ ಎಷ್ಟು ಬಾರಿ ಮುಖವನ್ನು ತೊಳೆಯಬೇಕು ಎಂಬುದನ್ನು ಕಂಡುಕೊಳ್ಳೋಣ (Dry Face).

ದಿನದಲ್ಲಿ ಮುಖವನ್ನು ಎಷ್ಟು ಬಾರಿ ತೊಳೆಯಬೇಕು?

ಬೆಳಗ್ಗೆ ಎದ್ದಾಗ ಮೊದಲು ಮುಖವನ್ನು ಸ್ಕ್ರಬ್ ಮಾಡಿ. ಇದು ನಿದ್ರಾವಸ್ಥೆಯನ್ನು ನೀಗುವುದರ ಜೊತೆಗೆ, ನಿಮ್ಮ ಮೈಮನ ತಕ್ಷಣವೇ ಉಲ್ಲಾಸಗೊಳ್ಳುತ್ತದೆ. ಮುಖವನ್ನು ಸ್ಕ್ರಬ್ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಸೂಕ್ಷ್ಮ ರಂಧ್ರಗಳು ತೆರವುಗೊಳ್ಳುತ್ತವೆ. ಸೌಮ್ಯವಾದ ಫೇಸ್ ವಾಶ್ ಜೊತೆಗೆ ಸಾಮಾನ್ಯ ನೀರಿನಿಂದ ನಿಮ್ಮ ಮುಖವನ್ನು ಸ್ಕ್ರಬ್ ಮಾಡಲು ಮರೆಯದಿರಿ.

ನಿಮ್ಮ ಚರ್ಮವು ಗಡುಸಾಗಿ, ಜಿಡ್ಡುಗಟ್ಟಿದ್ದರೆ ಮಧ್ಯಾಹ್ನ ಒಮ್ಮೆ ಮುಖವನ್ನು ಸ್ಕ್ರಬ್ ಮಾಡಬಹುದು. ಜಿಡ್ಡು ಚರ್ಮ ಹೊಂದಿರುವವರು ವೈದ್ಯರ ಸಲಹೆಯಂತೆ ಸೋಪು ಅಥವಾ ಫೇಸ್ ವಾಶ್ ಬಳಸಬೇಕು. ಬೆಳಿಗ್ಗೆ ಮುಖವನ್ನು ಸ್ಕ್ರಬ್ ಮಾಡಿದ ನಂತರ, ಜಿಡ್ಡು ತ್ವಚೆ ಹೊಂದಿರುವ ಜನರ ಮುಖದ ಮೇಲೆ ಮಧ್ಯಾಹ್ನದ ನಂತರ ಎಣ್ಣೆಯು ಸಂಗ್ರಹವಾಗುತ್ತದೆ. ಆದ್ದರಿಂದ, ಅವರು ತಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಬಹುದು ಅಥವಾ ಮಧ್ಯಾಹ್ನದ ನಂತರವೂ ಫೇಸ್ ವಾಶ್ ಮಾಡಬಹುದು. Also Read: ಯಾವ ರಾಶಿಯವರು ತುಂಬಾ ಜಗಳವಾಡುತ್ತಾರೆ? ಯಾವ ರಾಶಿಯವರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಗೊತ್ತಾ?

ನೀವು ಕೆಲಸದಿಂದ ಮನೆಗೆ ವಾಪಸಾದಾಗ ನಿಮ್ಮ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ಕಾರಣದಿಂದಾಗಿ, ದೈನಂದಿನ ಆಯಾಸ ದೂರವಾಗುತ್ತದೆ. ಮುಖದಲ್ಲಿರುವ ಕೊಳಕು ಕೂಡ ನಿವಾರಣೆಯಾಗುತ್ತದೆ. ಕೆಲವರು ಬೇಸಿಗೆ ಕಾಲದಲ್ಲಿ ಸಂಜೆ ವೇಳೆಯೂ ಸ್ನಾನ ಮಾಡುತ್ತಾರೆ. ನಿಮಗೆ ಅದು ಸಾಧ್ಯವಾಗದಿದ್ದರೆ, ದಿನಕ್ಕೆ ಒಮ್ಮೆಯಾದರೂ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ.

ಆದರೆ, ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಹೊಳೆಯುವಂತೆ ಮಾಡಲು, ಸಾಧ್ಯವಾದಷ್ಟೂ ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಚರ್ಮವನ್ನು ತೇವವಾಗಿಡುತ್ತದೆ.

Also Read: ಹೀರೆಕಾಯಿಯಲ್ಲಿ ನೀರಿನಾಂಶ, ನಾರಿನಂಶ ಜೊತೆಗೆ ಅನೇಕ ಪೋಷಕಾಂಶಗಳೂ ಇವೆ!

ಪ್ರತಿದಿನ ನಿಮ್ಮ ಆಹಾರದಲ್ಲಿ ತಾಜಾ ರಸವನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮವು ಹೊಳೆಯುತ್ತಾ ಇರುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ನಿಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಅದರಲ್ಲೂ ಕ್ಯಾರೆಟ್, ಸೌತೆಕಾಯ, ಪಪ್ಪಾಯಿ, ದಾಳಿಂಬೆ, ಕಲ್ಲಂಗಡಿ, ಮೂಸಂಬಿ, ಕಿತ್ತಳೆ ಮುಂತಾದವುಗಳನ್ನು ಸೇವಿಸುವುದರಿಂದ ಮುಖವನ್ನು ತಾಜಾ ಆಗಿ, ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ