ಯಾವ ರಾಶಿಯವರು ತುಂಬಾ ಜಗಳವಾಡುತ್ತಾರೆ? ಯಾವ ರಾಶಿಯವರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಗೊತ್ತಾ?

ಹೆಚ್ಚು‘ವರಿ’ಯಾಗಿ, ಮಂಗಳ ಮತ್ತು ಗುರು ಗ್ರಹಗಳು ನೇರ, ಪ್ರೇರಣಾತ್ಮಕ, ಮಹತ್ವಾಕಾಂಕ್ಷಿ ಮತ್ತು ಸಾಹಸದೊಂದಿಗೆ ಸಂಬಂಧಿಸಿವೆ. ಆದರೆ ಇವು ಕೋಪದೊಂದಿಗೆ ಸಹ ಸಂಬಂಧಿಸಿವೆ. ಮೇಷ ಮತ್ತು ಧನು ರಾಶಿಗಳು ಈ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಹಾಗಾಗಿ ಅದು ಅವರ ಉರಿಯುವ ಸ್ವಭಾವವನ್ನು ವಿವರಿಸುತ್ತದೆ.

ಯಾವ ರಾಶಿಯವರು ತುಂಬಾ ಜಗಳವಾಡುತ್ತಾರೆ? ಯಾವ ರಾಶಿಯವರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಗೊತ್ತಾ?
ಯಾವ ರಾಶಿಯವರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಗೊತ್ತಾ?
Follow us
|

Updated on: Feb 16, 2024 | 9:52 AM

ಇತರ ಭಾವನೆಗಳಂತೆ ಕೋಪ ಅಥವಾ ಉದ್ರೇಕ ಆಗುವುದು ಮನುಷ್ಯರ ಸಹಜ ಗುಣ ಸ್ವಭಾವ. ಆದಾಗ್ಯೂ, ಭಾವನೆಗಳು ಎಲ್ಲವನ್ನೂ ಮೀರಿದಾಗ ಅದು ನಮ್ಮ ದುರ್ಬಲತೆಯನ್ನು ಉಚ್ಚ್ರಾಯಕ್ಕೆ ಕೊಂಡೊಯ್ಯುತ್ತದೆ. ಕೆಲವರು ಚಿಕ್ಕದಕ್ಕೇ ರೇಗಿ ಬೀಳಬಹುದು, ದುಡುಕಿನ ಸನ್ನಿವೇಶಗಳಿಗೆ ವಿಪರೀತವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ಕೆಲವರು ತಮ್ಮ ಮೇಲೆ ಹೆಚ್ಚು ನಿಯಂತ್ರಣವನ್ನು ಹೊಂದಿರುತ್ತಾರೆ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸೂಕ್ತವಾಗಿ ವರ್ತಿಸಲು ಅವರಿಗೆ ಈ ಗುಣ ಸ್ವಭಾವ ಸಹಾಯ ಮಾಡುತ್ತದೆ. ಇದಲ್ಲದೆ, ಭಾವನೆಯ ತೀವ್ರತೆ ಪ್ರಮಾಣ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಹಾಗಿದ್ದಲ್ಲಿ ಯಾರು ತಮ್ಮ ಶಾಂತ ಸ್ವಭಾವವನ್ನು ಸುಲಭವಾಗಿ ಕಳೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವ ಒಂದು ಮಾರ್ಗವೆಂದರೆ ಜ್ಯೋತಿಷ್ಯ. ಶೀಘ್ರವಾಗಿ ಕೋಪಗೊಳ್ಳುವ ರಾಶಿಚಕ್ರದ ಚಿಹ್ನೆಗಳನ್ನು ಶ್ರೇಣೀಕರಿಸಲು ಇದರಿಂದ ಸಾಧ್ಯವಾಗುತ್ತದೆ.

ಕೆಲವು ರಾಶಿಚಕ್ರ ಚಿಹ್ನೆಗಳು ಏಕೆ ಕೋಪದ ಸ್ವಭಾವಗಳನ್ನು ಹೊಂದಿವೆ?

ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ಅಂದರೆ ಆಯಾ ರಾಶಿಯವರ ವಿಶಿಷ್ಟ ಸ್ವಭಾವಗಳು ಮತ್ತು ಗುಣಲಕ್ಷಣಗಳು ಅವರನ್ನು ವಿಶೇಷವಾಗಿಸುತ್ತವೆ. ಇದಂ ಇತ್ಥಂ ಎಂದು ಆದರ್ಶ ರಾಶಿಚಕ್ರ ಚಿಹ್ನೆ ಯಾವುದು ಎಂದು ಹೇಳಲು ಬರುವುದಿಲ್ಲವಾದರೂ ಕೆಲವು ಸೂರ್ಯ ಪ್ರಭಾವಿತ ಚಿಹ್ನೆಗಳು ಉಳಿದವುಗಳಿಗಿಂತ ಹೆಚ್ಚು ಚುರುಕಾದ, ಶಕ್ತಿಯುತ, ಹಠಾತ್ ಕ್ರಿಯಾ ಪ್ರವೃತ್ತಿ, ಉದ್ವೇಗ ಮನೋಧರ್ಮವನ್ನು ಹೊಂದಿವೆ.

ಕರ್ಕಾಟಕ, ವೃಶ್ಚಿಕ ಮತ್ತು ಮೀನ ಮಾದರಿಯ ನೀರಿನ ಚಿಹ್ನೆಗಳು (water signs – Cancer, Scorpio and Pisces) ಧ್ಯಾನಸ್ಥ ಮತ್ತು ಭಾವನಾತ್ಮಕವಾಗಿರುತ್ತವೆ. ಇನ್ನು ಭೂ ಚಿಹ್ನೆಗಳ (ವೃಷಭ, ಕನ್ಯಾ ಮತ್ತು ಮಕರ) ರಾಶಿಯವರನ್ನು ಪ್ರಚೋದಿಸುವುದು ಕಷ್ಟ. ಏಕೆಂದರೆ ಅವರು ತಮ್ಮ ಭಾವನೆಗಳನ್ನು ತರ್ಕ ಮೇಲೆ ಆಳುತ್ತಾರೆ. ಹಾಗೆಯೇ ವಾಯು ಚಿಹ್ನೆಗಳು (ಜೆಮಿನಿ, ತುಲಾ ಮತ್ತು ಕುಂಭ) ಆಕರ್ಷಕ, ಬುದ್ಧಿವಂತ ಮತ್ತು ಸಾಮಾನ್ಯವಾಗಿ ಜಗಳಗಂಟಿ ಅಲ್ಲ. ಏತನ್ಮಧ್ಯೆ, ಬೆಂಕಿಯ ಚಿಹ್ನೆಗಳ (ಮೇಷ, ಸಿಂಹ ಮತ್ತು ಧನು ರಾಶಿ) ರಾಶಿಯವರು ಕೋಪಕ್ಕೆ ಕುಖ್ಯಾತರಾಗಿದ್ದು ತಮ್ಮ ಉದ್ವೇಗದ ಉರಿಯನ್ನು ಸದಾ ಉರಿಯುವಂತೆ ಇಟ್ಟಿರುತ್ತಾರೆ.

ಹೆಚ್ಚು‘ವರಿ’ಯಾಗಿ, ಮಂಗಳ ಮತ್ತು ಗುರು ಗ್ರಹಗಳು ನೇರ, ಪ್ರೇರಣಾತ್ಮಕ, ಮಹತ್ವಾಕಾಂಕ್ಷಿ ಮತ್ತು ಸಾಹಸದೊಂದಿಗೆ ಸಂಬಂಧಿಸಿವೆ. ಆದರೆ ಇವು ಕೋಪದೊಂದಿಗೆ ಸಹ ಸಂಬಂಧಿಸಿವೆ. ಮೇಷ ಮತ್ತು ಧನು ರಾಶಿಗಳು ಈ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ ಮತ್ತು ಅದು ಅವರ ಉರಿಯುವ ಸ್ವಭಾವವನ್ನು ವಿವರಿಸುತ್ತದೆ.

ಈ ಐದು ರಾಶಿಯವರು ಸುಲಭವಾಗಿ ತಮ್ಮ ಶಾಂತ ಸ್ವಭಾವವನ್ನು ಕಳೆದುಕೊಳ್ಳುತ್ತಾರೆ:

ಮೇಷ ರಾಶಿ ಅವರು ಬೆಂಕಿಯ ಚಿಹ್ನೆಗಳಲ್ಲಿ ಮೊದಲಿಗರು ಮತ್ತು ಈ ರಾಶಿಚಕ್ರದ ಶಿಶುಗಳು ಎಂದು ಕರೆಸಿಕೊಳ್ಳುತ್ತಾರೆ. ಇವರು ತಮ್ಮ ವಿಪರೀತ ಭಾವನೆಗಳ ಮೇಲೆ ಹೆಚ್ಚು ನಿಯಂತ್ರಣ ಹೊಂದಿರುವುದಿಲ್ಲ. ಕೋಪಗೊಳ್ಳುವ ರಾಶಿಚಕ್ರ ಚಿಹ್ನೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದಲ್ಲದೆ, ಅವರು ಮುನ್ನುಗ್ಗುವ ಮತ್ತು ಶಕ್ತಿಯುತ ಮಂಗಳ ಗ್ರಹದಿಂದ ಆಳಲ್ಪಡುತ್ತಾರೆ. ಇದರಿಂದ ಅವರು ತಾಳ್ಮೆ ಕಳೆದುಕೊಳ್ಲುವ ಮತ್ತು ಅಸ್ಥಿರತೆಯ ಭಾವಾವೇಶಕ್ಕೆ ಸಿಲುಕುತ್ತಾರೆ.

ಆದರೆ ತಮ್ಮ ಭಾವನೆಗಳನ್ನು ಉತ್ತಮವಾಗಿ ನಿರ್ವಹಿಸಿದರೆ, ಮೇಷ ರಾಶಿಯವರು ತಮ್ಮ ಕೋಪವನ್ನು ರಚನಾತ್ಮಕವಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದ್ದಾರೆ ಮತ್ತು ಅವರ ಎಂದಿಗೂ ಯಾವುದನ್ನೂ ಅಸಾಧ್ಯವೆಂದು ಹೇಳುವ ಛಾತಿ ಹೊಂದಿದ್ದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತಾರೆ.

ಸಿಂಹ ಸೂಚಿಸಲಾದ ಎರಡನೇ ಅಗ್ನಿ ಚಿಹ್ನೆ ಅಂದರೆ ಸಿಂಹ ರಾಶಿಯವರು ವಿಶಾಲ ಹೃದಯವನ್ನು ಹೊಂದಿರುತ್ತಾರೆ ಮತ್ತು ಅವರ ಈ ಸ್ವಭಾವವನ್ನು ಎತ್ತಿ ತೋರಿಸುವ ಅನುಯಾಯಿಗಳನ್ನು ಪ್ರೀತಿಸುತ್ತಾರೆ. ಸೂರ್ಯನಿಂದ ಆಳಲ್ಪಡುವ ಅವರು ಆಶಾವಾದಿ, ಆಕರ್ಷಕ ಮತ್ತು ಗುಂಪುಗುಂಪಾಗಿ ಜನರ ಮಧ್ಯೆ ಇರುತ್ತಾರೆ. ಆದರೆ ಕೆರಳಿಸಿದರೆ, ಮತ್ತಷ್ಟು ಉಲ್ಬಣಗೊಳ್ಳಬಲ್ಲರು. ಅದನ್ನು ನಿಯಂತ್ರಿಸಲು ಇನ್ನೂ ಕಷ್ಟಕರವಾದ ಕೆಟ್ಟ ಕೋಪವನ್ನು ಪ್ರದರ್ಶಿಸಬಹುದು. ಅವರು ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಮೇಲೆ ಅಧಿಕಾರವನ್ನು ಚಲಾಯಿಸಲು ಇಷ್ಟಪಡುತ್ತಾರೆ. ಆದರೆ ಅವರ ಆಲೋಚನೆ/ ಯೋಜನೆಯ ಪ್ರಕಾರ ಸಂಗತಿಗಳು ನಡೆಯದಿದ್ದರೆ ಸಂಕ್ಷೋಭೆಗೊಳಗಾಗುತ್ತಾರೆ. ಸಿಂಹ ರಾಶಿಯವರು ಇತರರಿಂದ ಶಾಂತ ಸ್ವಭಾವಿಗಳಿಂದ ಕಲಿಯಬೇಕು ಮತ್ತು ಕೆಲವು ಸಂದರ್ಭಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಅದನ್ನು ಸುಮ್ಮನೆ ಹಾಗೆಯೇ ಬಿಟ್ಟುಬಿಡಬೇಕು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯು ನೀರಿನ ಚಿಹ್ನೆಯಾಗಿದ್ದರೂ, ಇದು ಅತ್ಯಂತ ಪ್ರತೀಕಾರದ ಮತ್ತು ತೀವ್ರವಾದ ರಾಶಿಚಕ್ರಗಳಲ್ಲಿ ಒಂದಾಗಿದೆ. ಅವರು ಅಂತಃಪ್ರಜ್ಞೆಯ ಅರ್ಥವನ್ನು ಚೆನ್ನಾಗಿ ಅರಿತಿರುತ್ತಾರೆ. ಅವರ ಇಂತಹ ಭಾವನಾತ್ಮಕ ಬುದ್ಧಿವಂತಿಕೆಯು ಅವರ ವ್ಯಕ್ತಿತ್ವದ ಪ್ರಮುಖ ಲಕ್ಷಣವಾಗಿದೆ. ವೃಶ್ಚಿಕದಂತಹ ಚಿಹ್ನೆಯಿಂದ ಪ್ರತಿನಿಧಿಸಲ್ಪಟ್ಟಿದ್ದು ವಿನಾಶ ಮತ್ತು ಪುನರ್ಜನ್ಮದ ಗ್ರಹವಾದ ಪ್ಲುಟೊದಿಂದ ಆಳಲ್ಪಡುತ್ತಾರೆ. ಈ ರಾಶಿಯವರು ತಪ್ಪು ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಣೆ ಮಾಡಿದರೂ ಅದಕ್ಕೆ ಶರಣಾಗದೆ ತಮ್ಮ ಶಾಂತ ಸ್ವಭಾವವನ್ನು ಕಾಪಾಡಿಕೊಂಡು, ಅದರಿಂದ ಅಂತರ ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ದಿಢೀರನೆ ತೂರಿ ಬಂದ ಕೋಪವನ್ನು ಅನಗತ್ಯವಾಗಿ ಪ್ರದರ್ಶಿಸುವುದಿಲ್ಲ. ಅವರು ತಮ್ಮ ಕೋಪವನ್ನು ಒಳಗೇ ಅದುಮಿಟ್ಟುಕೊಂಡು, ದೀರ್ಘಕಾಲದವರೆಗೆ ದ್ವೇಷವನ್ನು ಪೋಷಿಸಿಕೊಂಡುಬರುತ್ತಾರೆ. ವೃಶ್ಚಿಕದವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು. ಇದರಿಂದ ಅವುಗಳನ್ನು ಪೋಷಿಸುವ ಬದಲು ಅವುಗಳನ್ನು ಪರಿಹರಿಸಿಕೊಳ್ಳಬಹುದು.

ಧನು ರಾಶಿ ಅವರು ಬೆಂಕಿಯ ಚಿಹ್ನೆಗಳಲ್ಲಿ ಕೊನೆಯವರು. ಧನು ರಾಶಿಯವರು ಸಾಹಸ ಮತ್ತು ಪ್ರಯಾಣದ ಗ್ರಹವಾದ ಗುರು ಗ್ರಹದಿಂದ ಆಳಲ್ಪಡುವ ವಿನೋದಪ್ರಿಯ ರಾಶಿಚಕ್ರದವರು. ಅವರು ಪ್ರಗತಿ-ಆಧಾರಿತ ಜನರು, ಅವರು ವಿಭಿನ್ನ ವಿಷಯಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ ಮತ್ತು ತಮ್ಮನ್ನು ಯಾವುದೇ ಒಂದು ಉದ್ದೇಶಕ್ಕಷ್ಟೇ ಸೀಮಿತಗೊಳಿಸುವುದಿಲ್ಲ. ಎಲ್ಲವನ್ನೂ ಒಂದೇ ಬಾರಿಗೆ ಮಾಡುವ ಆತುರದವರು, ಅವರು ಬೇಗನೆ ತಾಳ್ಮೆ ಕಳೆದುಕೊಳ್ಳುತ್ತಾರೆ.

ಇವರ ನಿಜವಾದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಆಳವಾದ ಪ್ರಾಮಾಣಿಕತೆ ಹೊಂದಿರುತ್ತಾರೆ. ಅವರು ತಮ್ಮ ಹರಿತವಾದ ನಾಲಿಗೆಗೆ ಖ್ಯಾತರು. ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜಿ ಮಾಡಿಕೊಳ್ಳುವುದಿಲ್ಲ. ಈ ಗುಣವು ಅವರನ್ನು ಕೋಪಿಷ್ಟ ಎಂಬಂತೆ ಬಿಂಬಿಸುತ್ತದೆ. ಏಕೆಂದರೆ ಅವರು ಸತ್ಯಗಳನ್ನು ಹೇಳುತ್ತಿದ್ದರೂ, ಅವರ ಸ್ವರವು ಸೌಮ್ಯವಾಗಿರುವುದಿಲ್ಲ.

ವೃಷಭ ರಾಶಿ

ಖಗೋಳ ಗೂಳಿಯಿಂದ ಸೂಚಿತವಾದ ಸುಸ್ಥಿರ ಭೂ ಚಿಹ್ನೆಯನ್ನು ಹೊಂದಿರುವ ವೃಷಭ ರಾಶಿಯವರನ್ನು ಅಷ್ಟು ಸುಲಭವಾಗಿ ಕೋಪಗೊಳಿಸುವುದು ಕಷ್ಟ. ಆದರೆ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡರೆ, ಅವರನ್ನು ಮತ್ತೆ ಶಾಂತಗೊಳಿಸುವುದು ಅಷ್ಟೇ ಕಷ್ಟದ ಸಂಗತಿಯಾಗಿದೆ. ಪ್ರೀತಿ ಮತ್ತು ಹಣದ ಶುಕ್ರ ಗ್ರಹದಿಂದ ಆಳಲ್ಪಡುತ್ತಾರೆ. ಆದಾಗ್ಯೂ, ಅವರು ತಮ್ಮ ಹಠಮಾರಿ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ತಮ್ಮನ್ನು ಪ್ರಶ್ನಿಸುವುದಕ್ಕೆ ಅವರು ಇಷ್ಟಪಡುವುದಿಲ್ಲ. ಯಾವುದಕ್ಕೂ ಅವರು ಜಗ್ಗುವುದಿಲ್ಲ ಮತ್ತು ಬಗ್ಗುವುದಿಲ್ಲ

ದೈಹಿಕ ಮತ್ತು ಮಾನಸಿಕ ಶಕ್ತಿಯ ಸಾಕಾರ ಇವರು. ಏನನ್ನಾದರೂ ಮನವರಿಕೆ ಮಾಡಿದರೆ, ಅವರ ಮನಸ್ಸನ್ನು ಬದಲಾಯಿಸುವುದು ಕಷ್ಟ. ಇದಕ್ಕೆ ಅವರ ಹೋರಾಟದ ಮನೋಭಾವವೇ ಕಾರಣ. ವೃಷಭ ರಾಶಿಯವರು ತಮ್ಮ ಅಭಿಪ್ರಾಯವನ್ನು ಸಾಬೀತುಪಡಿಸಲು ಈ ಪ್ರಪಂಚದ ತುತ್ತತುದಿಯವರೆಗೂ ಹೋರಾಡುತ್ತಾರೆ.

ನನಗೆ ನಿನ್ನ ಸ್ವಚ್ಚಂದ ಸ್ನೇಹವಷ್ಟೇ ಬೇಕಿರೋದು

ಯಾವ ರಾಶಿಚಕ್ರದವರು ಸುಲಭವಾಗಿ ಕೋಪಗೊಳ್ಳುತ್ತಾರೆ? ಮೇಷ, ವೃಷಭ, ಸಿಂಹ, ಧನು ಮತ್ತು ವೃಶ್ಚಿಕ ರಾಶಿಯವರು ಸುಲಭವಾಗಿ ಕೋಪಗೊಳ್ಳುತ್ತಾರೆ. -ಯಾವ ರಾಶಿಚಕ್ರವು ಆಕ್ರಮಣಕಾರಿಯಾಗಿದೆ? ಮೇಷ ಮತ್ತು ಸಿಂಹ ರಾಶಿಯವರು ಆಕ್ರಮಣಕಾರಿ. -ಯಾವ ರಾಶಿಚಕ್ರದವರು ತುಂಬಾ ಜಗಳವಾಡುತ್ತಾರೆ? ಮೇಷ ರಾಶಿಯು ತನ್ನ ವಾದದ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. -ಯಾವ ರಾಶಿಚಕ್ರದವರು ಜಗಳಗಳನ್ನು ಪ್ರಾರಂಭಿಸಲು ಇಷ್ಟಪಡುತ್ತಾರೆ? ಮೇಷ, ಸಿಂಹ ಮತ್ತು ವೃಶ್ಚಿಕ ರಾಶಿಗಳು ಜಗಳಗಳನ್ನು ಪ್ರಾರಂಭಿಸಲು ಕುಖ್ಯಾತವಾಗಿವೆ.

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ