Wheat Price In 1987: 1987ರಲ್ಲಿ ಒಂದು ಕೆಜಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ?

| Updated By: ಅಕ್ಷತಾ ವರ್ಕಾಡಿ

Updated on: Jan 10, 2023 | 2:16 PM

ಇತ್ತೀಚೆಗೆ ಹಳೆಯ ಬಿಲ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ. ಹಳೆಯ ಸಿನಿಮಾ ಟಿಕೇಟುಗಳು, 1985ರ ರೆಸ್ಟೋರೆಂಟ್ ಬಿಲ್ ಮತ್ತು 1937ರ ಸೈಕಲ್ ಬಿಲ್, 1986 ರ ಬುಲೆಟ್ 350cc ಬಿಲ್​ಗಳು ಸಾಕಷ್ಟು ವೈರಲ್ ಆಗಿತ್ತು. ಇದೇ ರೀತಿ ಈಗ 1987ರಲ್ಲಿ ಖರೀದಿಸಿದ ಗೋಧಿಯ ಬೆಲೆ ಬಿಲ್ ಸಕ್ಕತ್ತ್ ಸುದ್ದಿಯಾಗಿದೆ.

Wheat Price In 1987: 1987ರಲ್ಲಿ ಒಂದು ಕೆಜಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ?
1987ರ ಗೋಧಿ ಬೆಲೆ ಬಿಲ್
Image Credit source: Twitter
Follow us on

ಇತ್ತೀಚೆಗೆ ಹಳೆಯ ಬಿಲ್(Old Bill)​ಗಳನ್ನು ಸಾಮಾಜಿಕ ಜಾಲತಾಣ(Social Media) ದಲ್ಲಿ ಹಂಚಿಕೊಳ್ಳುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ. ಹಳೆಯ ಸಿನಿಮಾ ಟಿಕೇಟುಗಳು, 1985ರ ರೆಸ್ಟೋರೆಂಟ್ ಬಿಲ್ ಮತ್ತು 1937ರ ಸೈಕಲ್ ಬಿಲ್, 1986 ರ ಬುಲೆಟ್ 350cc ಬಿಲ್​ಗಳು ಸಾಕಷ್ಟು ವೈರಲ್ ಆಗಿತ್ತು. ಇದೇ ರೀತಿ ಈಗ 1987ರಲ್ಲಿ ಖರೀದಿಸಿದ ಗೋಧಿಯ ಬೆಲೆ ಬಿಲ್ ಸಕ್ಕತ್ತ್ ಸುದ್ದಿಯಾಗಿದೆ. 1987ರಲ್ಲಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ? ತಿಳಿದುಕೊಳ್ಳಬೇಕಾದರೆ ಈ ಸ್ಟೋರಿನಾ ಪೂರ್ತಿಯಾಗಿ ಓದಿ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಅಜ್ಜನ “ಜೆ ಫಾರ್ಮ್” ನ ಬಿಲ್​ನ್ನು ಟ್ವಿಟರ್​​​ ಮೂಲಕ ಹಂಚಿಕೊಂಡಿದ್ದಾರೆ. ಜೆ ಫಾರ್ಮ್​ ಎಂದರೆ ಧಾನ್ಯ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳ ಮಾರಾಟದ ರಶೀದಿಯಾಗಿದೆ. ಇದರಲ್ಲಿ 1987ರಲ್ಲಿ ಒಂದು ಕೆಜಿ ಗೋಧಿಗೆ 1.6 ರೂಪಾಯಿ ಇತ್ತು ಎಂದು ತೋರಿಸುತ್ತದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು 1987 ರ ಬಿಲ್‌ನ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ. ಗೋಧಿಯ ಬೆಲೆ ಕೆಜಿಗೆ ₹ 1.6 ಆಗಿತ್ತು ಎಂದು ಕೂಡ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.

ಇದನ್ನೂ ಓದಿ: Bullet 350cc Price: 1986ರಲ್ಲಿ ಬುಲೆಟ್ 350cc ಬೆಲೆ ಎಷ್ಟಿತ್ತು ಗೊತ್ತಾ?

ಹಿಂದೆ ಗೋಧಿ ಕೆಜಿಗೆ 1.6 ರೂಪಾಯಿ ಇತ್ತು. ನನ್ನ ಅಜ್ಜ 1987 ರಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾರಾಟ ಮಾಡಿದ ಗೋಧಿ ಬೆಳೆ ಬಿಲ್​​ ಇದು. ಅವರಿಗೆ ಎಲ್ಲಾ ದಾಖಲೆಗಳನ್ನು ಹಾಗೆಯೇ ಸಂಗ್ರಹ ಮಾಡಿ ಇಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗೀನ ವರೆಗೆ 42,900 ಜನ ವೀಕ್ಷಿಸಿದ್ದಾರೆ. ಜೊತೆಗೆ 695 ಲೈಕು ಮತ್ತು ಸಾಕಷ್ಟು ಕಾಮೆಂಟ್​​ಗಳನ್ನು ಕಾಣಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 2:07 pm, Tue, 3 January 23