Relationships: ನಿಮ್ಮ ಸಂಗಾತಿಗಳು ಯಾಕೆ ಮೋಸ ಮಾಡುತ್ತಾರೆ ಗೊತ್ತಾ? ಹೊಸ ಸಂಶೋಧನೆ ಹೇಳಿದ್ದೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2023 | 7:04 PM

ಸಂಬಂಧದಲ್ಲಿ ಹೆಚ್ಚಿನವರು ಯಾವುದೋ ಒಂದು ಕಾರಣಕ್ಕೆ ತಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಾರೆ. ಈ ಕುರಿತು ಜರ್ಮನಿಯಲ್ಲಿ ಒಂದು ಅಧ್ಯಯನವನ್ನು ನಡೆಸಲಾಗಿದೆ. ಜರ್ಮನಿಯಲ್ಲಿ ದಾಂಪತ್ಯದಲ್ಲಿ ಅಥವಾ ಸಂಬಂಧದಲ್ಲಿ ಏಕೆ ಮೋಸ ಮಾಡುತ್ತಾರೆ ಎಂಬ ಕುರಿತು ಹೊಸ ಅಧ್ಯಯನವೊಂದನ್ನು ಮಾಡಲಾಯಿತು.

Relationships: ನಿಮ್ಮ ಸಂಗಾತಿಗಳು ಯಾಕೆ ಮೋಸ ಮಾಡುತ್ತಾರೆ ಗೊತ್ತಾ? ಹೊಸ ಸಂಶೋಧನೆ ಹೇಳಿದ್ದೇನು?
Relationships
Follow us on

ಸಂಬಂಧದಲ್ಲಿ ಹೆಚ್ಚಿನವರು ಯಾವುದೋ ಒಂದು ಕಾರಣಕ್ಕೆ ತಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಾರೆ. ಈ ಕುರಿತು ಜರ್ಮನಿಯಲ್ಲಿ ಒಂದು ಅಧ್ಯಯನವನ್ನು ನಡೆಸಲಾಗಿದೆ. ಜರ್ಮನಿಯಲ್ಲಿ ದಾಂಪತ್ಯದಲ್ಲಿ ಅಥವಾ ಸಂಬಂಧದಲ್ಲಿ ಏಕೆ ಮೋಸ ಮಾಡುತ್ತಾರೆ ಎಂಬ ಕುರಿತು ಹೊಸ ಅಧ್ಯಯನವೊಂದನ್ನು ಮಾಡಲಾಯಿತು. ಈ ಅಧ್ಯಯನವು ದಾಂಪತ್ಯ ಜೀವನದಲ್ಲಿ ಮೋಸ ಹೋದ ನಂತರದ ಪರಿಣಾಮಗಳನ್ನು ಲಿಂಗದ ರೇಖೆಗಳಲ್ಲಿ ವಿಂಗಡಿಸಿದೆ. ಇವುಗಳು ಒಬ್ಬ ವ್ಯಕ್ತಿಯು ಯೋಚಿಸುವ ರೀತಿಯಲ್ಲಿ ಇರಲಿಲ್ಲ. ದಂಪತಿಗಳ ಸಮಸ್ಯೆಗಳು ಬೇರೆ ಬೇರೆ ರೀತಿಯಲ್ಲಿ ಇದ್ದವು. ಅವರು ನೀಡಿರುವ ಉತ್ತರಗಳು ಕೂಡಾ ಆಶ್ಚರ್ಯಕರವಾಗಿದ್ದವು. ಸಂಬಂಧದಲ್ಲಿ ಅನೇಕ ಅಡೆತಡೆಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಸಂಗಾತಿಗಳಿಗೆ ಮೋಸ ಮಾಡುತ್ತಾರೆ. ಹಾಗೂ ಕೆಲವು ಸಂಗಾತಿಗಳು ಸುಲಭವಾಗಿ ಮೋಸ ಹೋಗುತ್ತಾರೆ.

ಇದನ್ನೂ ಓದಿ:Marital Relationships: ವೈವಾಹಿಕ ಸಂಬಂಧದಲ್ಲಿ ಎದುರಾಗುವ ಸಮಸ್ಯೆಗಳಿಗೆ ಚಾಣಕ್ಯ ನೀತಿಯಲ್ಲಿ ಇದೇ ಪರಿಹಾರ! 

ನೆದರ್‌ಲ್ಯಾಂಡ್‌ನ ಟಿಲ್‌ಬರ್ಗ್ ವಿಶ್ವವಿದ್ಯಾಲಯದ ಸಾಮಾಜಿಕ ಮನೋವಿಜ್ಞಾನದ ಸಹ ಪ್ರಧ್ಯಾಪಕ ಓಲ್ಗಾ ಸ್ಟಾವ್ರೋಲಾ ನೇತೃತ್ವದ ಅಧ್ಯಯನವು ಜರ್ಮನಿಯಲ್ಲಿ 947 ಜನರನ್ನು ಸಮೀಕ್ಷೆಗೆ ಒಳಪಡಿಸಿತು. ಅದರಲ್ಲಿ 609 ಜನರು ತಮ್ಮ ಸಂಗಾತಿಗೆ ಮೋಸ ಮಾಡಿದ್ದಾರೆ ಹಾಗೂ ಅದರಲ್ಲಿ 338 ಜನರು ಮೋಸ ಹೋಗಿದ್ದಾರೆ.