Kitchen Tips: ಗೋಧಿ ಹಿಟ್ಟನ್ನು ದೀರ್ಘಕಾಲದವರೆಗೆ ಶೇಖರಿಸುವುದು ಹೇಗೆ; ಇಲ್ಲಿವೆ 5 ಸಲಹೆಗಳು

ಗೋಧಿ ಹಿಟ್ಟು ಅಡುಗೆಮನೆಗಳಲ್ಲಿ ಆಹಾರ ತಯಾರಿಸಲು ಉಪಯೋಗಿಸುವ ಪ್ರಧಾನ ಸಾಮಗ್ರಿಯಾಗಿದೆ. ರೊಟ್ಟಿ, ಪರಾಠ, ಸಿಹಿತಿಂಡಿಗಳು ಮತ್ತು ಇತರ ಅನೇಕ ಪದಾರ್ಥಗಳನ್ನು ಒಳಗೊಂಡಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಗೋಧಿ ಹಿಟ್ಟು ಬಳಸಲಾಗುತ್ತದೆ.

Kitchen Tips: ಗೋಧಿ ಹಿಟ್ಟನ್ನು ದೀರ್ಘಕಾಲದವರೆಗೆ ಶೇಖರಿಸುವುದು ಹೇಗೆ; ಇಲ್ಲಿವೆ 5 ಸಲಹೆಗಳು
Wheat FlourImage Credit source: NDTV
Follow us
ನಯನಾ ಎಸ್​ಪಿ
|

Updated on: Mar 14, 2023 | 11:35 AM

ಗೋಧಿ ಹಿಟ್ಟು (Wheat Flour) ಅಡುಗೆಮನೆಗಳಲ್ಲಿ (Kitchen) ಆಹಾರ ತಯಾರಿಸಲು ಉಪಯೋಗಿಸುವ ಪ್ರಧಾನ ಸಾಮಗ್ರಿಯಾಗಿದೆ. ರೊಟ್ಟಿ, ಪರಾಠ, ಸಿಹಿತಿಂಡಿಗಳು ಮತ್ತು ಇತರ ಅನೇಕ ಪದಾರ್ಥಗಳನ್ನು ಒಳಗೊಂಡಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಗೋಧಿ ಹಿಟ್ಟು ಬಳಸಲಾಗುತ್ತದೆ. ಸಾಮಾನ್ಯವಾಗಿ ಗೋಧಿ ಹಿಟ್ಟನ್ನು ದೊಡ್ಡ ಪ್ರಮಾಣದಲ್ಲಿ ತರುತ್ತಾರೆ. ಹಿಟ್ಟುಗಳನ್ನು ದೊಡ್ಡ ಪ್ರಮಾಣದಲ್ಲಿ ತರುವುದರಿಂದ ಅದನ್ನು ಸರಿಯಾಗಿ ಸ್ಟೋರ್ ಮಾಡದೇ ಇದ್ದಲ್ಲಿ, ತೇವಾಂಶ (moisture) ಹೆಚ್ಚಾದಾಗ ಅದು ಗಂಟು ಕಟ್ಟುವ ಸಾಧ್ಯತೆ ಇರುತ್ತದೆ ಅಥವಾ ಹಿಟ್ಟಿನಲ್ಲಿ ಹುಳ (Insects/Bugs) ಆಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಿಟ್ಟು ಹಾಳಾಗುವುದನ್ನು ತಡೆಯಲು, ಅದನ್ನು ಸರಿಯಾಗಿ ಶೇಖರಿಸುವುದು ಮುಖ್ಯ. ಈ ಲೇಖನದಲ್ಲಿ, ನಿಮ್ಮ ಹಿಟ್ಟನ್ನು ತಾಜಾ ಮತ್ತು ಕೀಟಗಳಿಂದ ಮುಕ್ತವಾಗಿಡಲು ಸಹಾಯ ಮಾಡುವ ಕೆಲವು ಸುಲಭ ಸಲಹೆಗಳನ್ನು ಹಂಚಿಕೊಂಡಿದ್ದೇವೆ,

ಗೋಧಿ ಹಿಟ್ಟನ್ನು ಶೇಖರಿಸಿಡಲು 5 ಸುಲಭ ಸಲಹೆಗಳು ಇಲ್ಲಿವೆ:

  • ರೆಫ್ರಿಜರೇಟರ್‌ನಲ್ಲಿ ಇಡುವುದು:

ಹಿಟ್ಟನ್ನು ಶೇಖರಿಸಿಡಲು ಸುಲಭವಾದ ಮಾರ್ಗವೆಂದರೆ ಅದನ್ನು ಗಾಜಿನ ಜಾರ್ ಅಥವಾ ಗಾಳಿಯಾಡದ ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿ ಇಡುವುದು. ತೇವಾಂಶ ಪ್ರವೇಶಿಸದಂತೆ ಮುಚ್ಚಳವನ್ನು ಬಿಗಿಯಾಗಿ ಮುಚ್ಚಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಹಿಟ್ಟನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

  • ಸ್ಟೇನ್ಲೆಸ್ ಸ್ಟೀಲ್ ಕಂಟೈನರ್ ಬಳಸಿ

ತೇವಾಂಶವು ಹಿಟ್ಟು ತ್ವರಿತವಾಗಿ ಹಾಳಾಗಲು ಕಾರಣವಾಗಬಹುದು, ಆದ್ದರಿಂದ ಹಿಟ್ಟನ್ನು ಸಂಗ್ರಹಿಸಲು ಸ್ಟೀಲ್ ಕಂಟೇನರ್ ಅನ್ನು ಬಳಸಬಹುದು. ಹಿಟ್ಟನ್ನು ಕಂಟೇನರ್ ಒಳಗೆ ಹಾಕುವ ಮೊದಲು, ತೇವಾಂಶವನ್ನು ತೆಗೆದುಹಾಕಲು ಕಂಟೇನರ್ ಅನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ.

  • ಉಪ್ಪು ಬಳಸಿ

ಹಿಟ್ಟಿಗೆ 4 ರಿಂದ 5 ಚಮಚ ಉಪ್ಪನ್ನು ಸೇರಿಸುವುದರಿಂದ ಕೀಟಗಳು ಅದರೊಳಗೆ ಹೋಗದಂತೆ ತಡೆಯಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಪಾತ್ರೆಯಲ್ಲಿ ಅರ್ಧದಷ್ಟು ಹಿಟ್ಟಿಗೆ ಎರಡರಿಂದ ಮೂರು ಚಮಚ ಉಪ್ಪನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಳಿದ ಹಿಟ್ಟು ಸೇರಿಸಿ ಅದಕ್ಕೆ ಒಂದು ಅಥವಾ ಎರಡು ಚಮಚ ಉಪ್ಪು ಸೇರಿಸಿ ಮತ್ತೆ ಮಿಶ್ರಣ ಮಾಡಿ. ಇದು ಹಿಟ್ಟನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸಹಾಯ ಮಾಡುತ್ತದೆ.

  • ಪಲಾವ್ ಎಲೆ ಬಳಸಿ

ಹಿಟ್ಟನ್ನು ಸಂಗ್ರಹಿಸುವಾಗ ಪಲಾವ್ ಎಲೆಯನ್ನು ಸೇರಿಸುವುದು ಕೀಟಗಳನ್ನು ದೂರವಿರಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ. ಪಲಾವ್ ಎಲೆಯ ಬಲವಾದ ಸುವಾಸನೆಯು ಕೀಟಗಳನ್ನು ದೂರವಿಡುತ್ತದೆ ಮತ್ತು ನೀವು ಹಿಟ್ಟನ್ನು ಬಳಸುವಾಗ ಸುಲಭವಾಗಿ ಈ ಎಲೆಯನ್ನು ತೆಗೆಯಬಹುದು.

ಇದನ್ನೂ ಓದಿ: ಮನೆಯಲ್ಲಿ ರುಚಿಕರವಾದ ಕೆನೆ ಲಸ್ಸಿ ತಯಾರಿಸಲು ಇಲ್ಲಿದೆ 5 ಸುಲಭ ಸಲಹೆ

  • ಯಾವಾಗಲೂ ತಯಾರಿಕೆಯ ದಿನಾಂಕವನ್ನು ಪರಿಶೀಲಿಸಿ

ಹಿಟ್ಟು ಖರೀದಿಸುವಾಗ, ಯಾವಾಗಲೂ ಉತ್ಪಾದನಾ ದಿನಾಂಕವನ್ನು ಪರಿಶೀಲಿಸಿ. ಒಂದು ತಿಂಗಳಿಗಿಂತ ಹಳೆಯದಾದ ಹಿಟ್ಟನ್ನು ಬಳಸುವುದು ಒಳ್ಳೆಯದಲ್ಲ. ಉತ್ಪಾದನಾ ದಿನಾಂಕದ ಒಂದು ತಿಂಗಳೊಳಗೆ ಹಿಟ್ಟನ್ನು ಬಳಸಲು ಪ್ರಯತ್ನಿಸಿ.

ಈ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಗೋಧಿ ಹಿಟ್ಟನ್ನು ದೀರ್ಘಕಾಲದವರೆಗೆ ಶೇಖರಿಸುವ ಜೊತೆಗೆ ಕೀಟಗಳಿಂದ ದೊರವಿಡಲು ಸಹಾಯಮಾಡುತ್ತದೆ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್