Creamy Lassi: ಮನೆಯಲ್ಲಿ ರುಚಿಕರವಾದ ಕೆನೆ ಲಸ್ಸಿ ತಯಾರಿಸಲು ಇಲ್ಲಿದೆ 5 ಸುಲಭ ಸಲಹೆ

ಮನೆಯಲ್ಲಿಯೇ ದಪ್ಪನೆಯ ಹಾಗೂ ಕೆನೆಭರಿತ ಲಸ್ಸಿಯನ್ನು ತಯಾರಿಸಲು ನಿಮಗೆ ಸಹಾಯ ಮಾಡುವ ಕೆಲವು ಸುಭವಾದ ಸಲಹೆಗಳು ಇಲ್ಲಿವೆ.

Creamy Lassi: ಮನೆಯಲ್ಲಿ ರುಚಿಕರವಾದ ಕೆನೆ ಲಸ್ಸಿ ತಯಾರಿಸಲು ಇಲ್ಲಿದೆ 5 ಸುಲಭ ಸಲಹೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 13, 2023 | 6:52 PM

ಲಸ್ಸಿಯು ಉತ್ತರಭಾರತದ ಜನಪ್ರಿಯ ಮೊಸರು ಆಧಾರಿತ ಪಾನೀಯವಾಗಿದೆ. ಮೊಸರು, ನೀರು ಅಥವಾ ಹಾಲು ಹಾಗೂ ವಿವಿಧ ಮಸಾಲೆಗಳನ್ನು ಸೇರಿಸಿ ಲಸ್ಸಿಯನ್ನು ತಯಾರಿಸಲಾಗುತ್ತದೆ. ಇದರ ಮೂಲ ಪಂಜಾಬ್ ಆಗಿದ್ದರೂ ಇಂದು ದೇಶಾದ್ಯಂತ ಎಲ್ಲೇ ಹೋದರು ಲಸ್ಸಿಯು ಲಭ್ಯವಿರುತ್ತದೆ. ಇದರ ಸೇವನೆಯು ದೇಹಕ್ಕೆ ಉಲ್ಲಾಸವನ್ನು ನೀಡುವುದರ ಜೊತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಜನರು ಈ ಪಾನೀಯವನ್ನು ಹೆಚ್ಚು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ದೇಹದಲ್ಲಿ ಉಂಟಾಗುವ ಉರಿಯನ್ನು ಲಸ್ಸಿ ಕುಡಿಯುವ ಮೂಲಕ ಕಡಿಮೆ ಮಾಡಬಹುದು. ಬೇಸಿಗೆ ಕಾಲ ಆರಂಭವಾಗಿದೆ, ಈ ಸುಡು ಉಷ್ಣಾಂಶದಿಂದ ದೇಹವನ್ನು ತಂಪಾಗಿರಿಸಲು ಲಸ್ಸಿಯನ್ನು ಸೇವನೆ ಮಾಡಬಹುದು. ಸಾಮಾನ್ಯವಾಗಿ ದಪ್ಪವಾಗಿ ಹಾಗೂ ಕೆನೆ ವಿನ್ಯಾಸವನ್ನು ಹೊಂದಿರುವ ಲಸ್ಸಿಯು ಸ್ಮೂಥಿಯಂತೆ ಇರುತ್ತದೆ. ಹಾಗೂ ಮನೆಯಲ್ಲಿ ಈ ರೀತಿಯ ಲಸ್ಸಿಯನ್ನು ತಯಾರಿಸುವುದು ಸವಾಲಿನ ಸಂಗತಿಯಾಗಿದೆ. ಈ ಲೇಖನದಲ್ಲಿ ಕೆನೆ ಲಸ್ಸಿಯನ್ನು ತಯಾರಿಸುವ ಕೆಲವೊಂದು ಸಲಹೆಗಳನ್ನು ತಿಳಿಸಿಕೊಡುತ್ತೇವೆ.

ಮನೆಯಲ್ಲಿ ಕೆನೆ ಲಸ್ಸಿ ಮಾಡಲು ಇಲ್ಲಿವೆ 5 ಸುಲಭ ಸಲಹೆಗಳು:

ಮನೆಯಲ್ಲಿಯೇ ತಯಾರಿಸಿದ ಮೊಸರು ಬಳಸಿ: ಮನೆಯಲ್ಲಿ ಲಸ್ಸಿ ತಯಾರಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಮೊದಲ ಅಂಶವೇನೆಂದರೆ ಮನೆಯಲ್ಲಿಯೇ ತಯಾರಿಸಿದ ತಾಜಾ ಮೊಸರನ್ನು ಬಳಸುವುದು. ಇದರಿಂದ ದಪ್ಪನೆಯ ಕೆನೆ ಭರಿತ ಲಸ್ಸಿಯನ್ನು ತಯಾರಿಸಬಹುದು.

ಮೊಸರನ್ನು ಚೆನ್ನಾಗಿ ಕಡೆಯಿರಿ: ಮರದ ಮದನಿ, ಮಿಕ್ಸಿ ಅಥವಾ ವೈರ್ ವಿಸ್ಕರ್‌ನ್ನು ಬಳಸಿ ಮೊಸರನ್ನು ಚೆನ್ನಾಗಿ ಕಡೆಯಿರಿ. ಬ್ಲೆಂಡರ್ ಮೂಲಕವೂ ಇದನ್ನು ಮಾಡಬಹುದು. ಆದರೆ ಇದು ಕೆಲಸವನ್ನು ಸುಲಭಗೊಳಿಸುತ್ತದೆಯೇ ವಿನಃ ನಿಮಗೆ ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ. ಆದ್ದರಿಂದ ಕೆನೆ ವಿನ್ಯಾಸವನ್ನು ಪಡೆಯಲು ಮರದ ಮದನಿ ಮೂಲಕ ಮೊಸರು ಕಡೆಯಬಹುದು. ಅಥವಾ ಮಿಕ್ಸಿ ಮೂಲಕ ಮೊಸರನ್ನು ಕಡೆಯಬಹುದು.

ಹೆಚ್ಚು ನೀರನ್ನು ಸೇರಿಸಬೇಡಿ: ಲಸ್ಸಿಗೆ ಒಮ್ಮೆಲೆ ಹೆಚ್ಚು ನೀರನ್ನು ಸುರಿಸುವ ಬದಲು ಕ್ರಮೇಣ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ. ಇದರಿಂದ ನೀವು ಕೆನೆ ಮತ್ತು ನಯವಾದ ವಿನ್ಯಾಸವನ್ನು ಅಗತ್ಯವಿರುವ ನೀರಿನ ಪ್ರಮಾಣವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Same food every day: ದಿನಾ ಒಂದೇ ರೀತಿಯ ಆಹಾರ ಸೇವಿಸುತ್ತಿದ್ದೀರಾ? ಸದಾ ಒಂದೇ ರೀತಿಯ ಆಹಾರ ತಿನ್ನುತ್ತಿದ್ದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ, ಜಾಗ್ರತೆ!

ಐಸ್‌ಕ್ಯೂಬ್‌ಗಳನ್ನು ಸೇರಿಸಿ: ಐಸ್ ಕ್ಯೂಬ್‌ಗಳನ್ನು ಸೇರಿಸುವುದರಿಂದ ಲಸ್ಸಿಯು ದಪ್ಪವಾಗಿ ಮತ್ತು ಕೆನೆಭರಿತವಾಗುತ್ತದೆ. ಅಷ್ಟೇ ಅಲ್ಲದೆ ಇದು ಲಸ್ಸಿಯನ್ನು ಸೂಪರ್ ರಿಫ್ರೆಶ್ ಮಾಡುತ್ತದೆ. ಇದನ್ನು ಬೇಸಿಗೆಯಲ್ಲಿ ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿ ಇರಿಸಿಕೊಳ್ಳಬಹುದು.

ಕ್ರೀಮ್ ಸೇರಿಸಿ: ನಿಮ್ಮ ಲಸ್ಸಿಯನ್ನು ಇನ್ನಷ್ಟು ಕೆನೆಭರಿತವಾಗಿ ಮಾಡಲು ಬಯಸಿದರೆ, ಮೊಸರನ್ನು ಕಡೆಯುವಾಗ ಅದಕ್ಕೆ ಒಂದು ಚಮಚ ಕ್ರೀಮ್ ಸೇರಿಸಿ. ಇದು ಲಸ್ಸಿಯು ದಪ್ಪ, ನೊರೆ ಹಾಗೂ ಕೆನೆ ಭರಿತವಾಗಿ ಮಾಡಲು ಸಹಾಯ ಮಾಡುತ್ತದೆ.

Published On - 6:52 pm, Mon, 13 March 23