ನಾಳೆಯಿಂದ ಶಾಲೆ ಆರಂಭ: ನಿಮ್ಮ ಮಕ್ಕಳು ಶಾಲೆ ಹೋಗುವಾಗ ಅಳ್ತಾರಾ? ಹೀಗೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 28, 2024 | 11:26 AM

ನಾಳೆಯಿಂದ 2024-25 ಸಾಲಿನ ಶಾಲೆಗಳು ಪ್ರಾರಂಭವಾಗಲಿದ್ದು, ಮಕ್ಕಳು ರಜೆಯ ಮಜಾವನ್ನು ಕಳೆದು ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಇಷ್ಟು ದಿನ ತಂದೆ ತಾಯಿಯ ಜೊತೆಗೆ ಇರುತ್ತಿದ್ದ ಮಕ್ಕಳಿಗೆ ಶಾಲೆ ಆರಂಭ ಎಂದರೆ ಮುಖವು ಬಾಡಿಕೊಳ್ಳುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುವ ಮಕ್ಕಳೇ ಹೆಚ್ಚು. ಹೊಸ ಶಾಲೆಯಾಗಿ ಬಿಟ್ಟರೆ ಮಕ್ಕಳು ಜ್ವರ, ತಲೆನೋವೆಂದು ಶಾಲೆಗೆ ಚಕ್ಕರ್ ಹಾಕುತ್ತಾರೆ. ಹೀಗಾಗಿ ನಿಮ್ಮ ಮಕ್ಕಳು ಮೊದಲ ದಿನ ಶಾಲೆಗೆ ಹೋಗಲು ಹಿಂದೇಟು ಹಾಕಿ ಅಳುತ್ತ ಕೂತರೆ, ಪೋಷಕರೇ, ನೀವು ಹೀಗೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ.

ನಾಳೆಯಿಂದ ಶಾಲೆ ಆರಂಭ: ನಿಮ್ಮ ಮಕ್ಕಳು ಶಾಲೆ ಹೋಗುವಾಗ ಅಳ್ತಾರಾ? ಹೀಗೆ ಮಾಡಿ
Follow us on

ಮಕ್ಕಳು ಶಾಲೆಗೆ ಹೋಗುವ ವಿಚಾರದಲ್ಲಿ ಹಿಂದೇಟು ಹಾಕುವುದು ಸಹಜ. ಅದರಲ್ಲಿಯು ಈ ಬೇಸಿಗೆ ರಜೆ ಮುಗಿಸಿ ಶಾಲೆಗೆ ಹೋಗಬೇಕೆಂದರೆ ಹಠ ಹಿಡಿಯುವುದು,ಅಳುತ್ತ ಕೂರುತ್ತಾರೆ. ಮಕ್ಕಳು ಹೀಗೆ ಹಠ ಹಿಡಿದರೆ ಹೆತ್ತವರಿಗೆ ಸಮಾಧಾನ ಮಾಡಿ ಶಾಲೆಗೆ ಕಳುಹಿಸುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ. ಮೊದಲ ದಿನ ಶಾಲೆಗೆ ಹೋಗುವ ಮಗುವಿಗೆ ಈ ಶಾಲೆಯ ವಾತಾವರಣವು ಹೊಸದಾಗಿರುತ್ತದೆ. ಈ ಸಮಯದಲ್ಲಿ ಮಕ್ಕಳ ಮನವೊಲಿಸಿ ಶಾಲೆಗೆ ಬಿಟ್ಟು ಬರುವುದು ಕಷ್ಟದ ಕೆಲಸ.

* ಶಾಲೆಯ ಬಗೆಗಿನ ಭಯವನ್ನು ನಿವಾರಿಸಿ: ತಂದೆ ತಾಯಿಯರು ಮೊದಲು ಮಾಡಬೇಕಾದ ಕೆಲಸವೆಂದರೆ ಶಾಲೆ ಬಗೆಗಿನ ಭಯವನ್ನು ಕಡಿಮೆ ಮಾಡುವುದು. ಶಾಲೆಯ ಬಗ್ಗೆ ಒಳ್ಳೆಯದನ್ನು ಹೇಳಿ ಮಕ್ಕಳು ಶಾಲೆಯನ್ನು ಪ್ರೀತಿಸುವಂತೆ ಮಾಡಬೇಕು.

* ಡಬ್ಬಿಗೆ ಮಕ್ಕಳ ಇಷ್ಟದ ತಿಂಡಿ ತಿನಿಸುಗಳನ್ನು ಹಾಕಿಕೊಡಿ: ಮಕ್ಕಳಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ನೀಡುವುದರಿಂದ ಮಕ್ಕಳನ್ನು ಸ್ವಲ್ಪ ಸಮಾಧಾನ ಪಡಿಸಬಹುದು. ಇಷ್ಟದ ತಿಂಡಿ ತಿನಿಸುಗಳನ್ನು ಟಿಫನ್ ಬಾಕ್ಸ್ ಗೆ ಹಾಕಿ ಕೊಟ್ಟು, ಮಧ್ಯಾಹ್ನ ಸ್ನೇಹಿತರಿಗೆ ಕೊಟ್ಟು ತಿನ್ನು ಎಂದೇಳಿದರೆ, ಖುಷಿ ಖುಷಿಯಿಂದ ಶಾಲೆಗೆ ಹೋಗಲು ಮನಸ್ಸು ಮಾಡುತ್ತಾರೆ.

* ಹೊಸ ಬಟ್ಟೆ ಬ್ಯಾಗ್‌, ಚಪ್ಪಲಿ ಕೊಡಿಸಿ ಖುಷಿ ಪಡಿಸಿ : ಮಕ್ಕಳು ಹೊಸ ಬಟ್ಟೆ, ಬ್ಯಾಗ್‌, ಛತ್ರಿ ಇದನ್ನೆಲ್ಲಾ ತಂದುಕೊಟ್ಟರೆ ಶಾಲೆಗೆ ಹೋಗುತ್ತಾರೆ. ಹೀಗಾಗಿ ಅವರಿಗಿಷ್ಟವಾಗುವ ಬ್ಯಾಗ್‌, ಚಪ್ಪಲಿ ಕೊಡಿಸಿ ಮಕ್ಕಳನ್ನು ಶಾಲೆಗೆ ಹೋಗುವಂತೆ ಮಾಡಬಹುದು.

* ಗದರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಡಿ: ಶಾಲೆಯೆಂದರೆ ಮಕ್ಕಳು ಹೆದರುವುದಕ್ಕೆ ಮುಖ್ಯ ಕಾರಣವೇ ಹೋಮ್ ವರ್ಕ್. ಬರೆಯಲು,ಓದಲು ತುಂಬಾ ಇರುತ್ತದೆ ಎನ್ನುವ ಕಾರಣಕ್ಕೆ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಈ ವೇಳೆ ಹೆತ್ತವರು ಮಕ್ಕಳನ್ನು ಗದರಿಸುವುದಲ್ಲ. ಸಮಾಧಾನ ಪಡಿಸಿ ಶಾಲೆಗೆ ಕಳುಹಿಸಿಕೊಡಿ.

ಇದನ್ನೂ ಓದಿ: ಕೂದಲಿನ ಎಲ್ಲಾ ಸಮಸ್ಯೆಗೂ ಅಲೋವೆರಾದಲ್ಲಿದೆ ಪರಿಹಾರ

* ಶಿಕ್ಷಕರ ಜೊತೆ ಮಾತನಾಡಿ : ಮಗು ಶಾಲೆಗೆ ಹೋಗಲು ಹಿಂಜರಿಯುವುದರ ಬಗ್ಗೆ ಶಿಕ್ಷಕರ ಜೊತೆಗೆ ಮಾತನಾಡಿ. ಕೆಲವು ದಿನಗಳ ಕಾಲ ನೀವೇ ಮಗುವನ್ನು ಶಾಲೆಗೆ ಬಿಟ್ಟು ಬನ್ನಿ. ಮಗು ಶಾಲೆಯಲ್ಲಿ ಎಲ್ಲಾ ಮಕ್ಕಳ ಜೊತೆಗೆ ಬೆರೆಯುತ್ತದೆಯೇ, ಆಟ ಪಾಠದಲ್ಲಿ ತೊಡಗಿಕೊಳ್ಳುತ್ತಾರೆಯೇ ಎಂದು ತಿಳಿದುಕೊಳ್ಳಿ.

* ಹುಷಾರಿಲ್ಲ ಎಂದೇಳಿದರೆ ಆರೋಗ್ಯವನ್ನೊಮ್ಮೆ ಗಮನಿಸಿ : ಶಾಲೆಗೆ ಹೋಗುವುದ ನ್ನು ತಪ್ಪಿಸಿಕೊಳ್ಳಲು ಹುಷಾರಿಲ್ಲ ಎಂದು ನೆನ ಹೇಳಿ ರಜೆ ಹಾಕುವ ಮಕ್ಕಳು ಇದ್ದಾರೆ. ಆದರೆ ಈ ವೇಳೆಯಲ್ಲಿ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನಿಸಿ. ಒಂದು ವೇಳೆ ಹುಷಾರಿಲ್ಲವೆಂದರೆ ರಜೆ ಹಾಕುವುದು ಒಳಿತು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 11:22 am, Tue, 28 May 24