Drawing Day 2023: ಭಾಷೆಯನ್ನೂ ಮೀರಿ, ಭಾವನೆಗಳಿಗೆ ಬಣ್ಣ ನೀಡೋ ಚಿತ್ರಕಲೆ ದಿನವನ್ನು ಆಚರಿಸಿ, ಕಲಾವಿದರಿಗೆ ಪ್ರೋತ್ಸಾಹಿಸಿ
ಈ ದಿನವನ್ನು ಚಿತ್ರ ಕಲಾವಿದರಿಗಾಗಿ ಅರ್ಪಿಸಲಾಗಿದೆ. ಈ ದಿನವನ್ನು ಯಾವುದಾದರೂ ಚಿತ್ರಕಲಾ ಈವೆಂಟ್ಗಳಿಗೆ ಹೋಗಿ ಸಂಭ್ರಮಿಸಿ. ಚಿತ್ರಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಿ.
ಚಿತ್ರಕಲೆ ಎಂಬುವುದು ಭಾಷೆಯನ್ನೇ ಮೀರಿಸಿದ್ದು, ಭಾವನೆಗಳಿಗೆ ಬಣ್ಣ ಹಚ್ಚಿದ್ದು(Drawing Day 2023). ಭಾಷೆ, ಅಕ್ಷರ ಹುಟ್ಟುವುದಕ್ಕೂ ಮುಂಚೆಯೇ ಚಿತ್ರಕಲೆ ಎಂಬುವುದಿತ್ತು. ಮಾನವ ಉಗಮ ಕಾಲದಲ್ಲಿ ಮಾತು ಇಲ್ಲದಿದ್ದಾಗ ಚಿತ್ರಕಲೆಯ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಹೀಗಾಗಿ ಚಿತ್ರಕಲೆಗೆ ತನ್ನದೇ ಆದ ಪರಂಪರಿಕತೆ ಇದೆ. ಆದ್ದರಿಂದ ಈ ಬಗ್ಗೆ ತಿಳಿಯಲು ಪ್ರತಿ ವರ್ಷ ಮೇ 16 ರಂದು ರಾಷ್ಟ್ರೀಯ ಚಿತ್ರಕಲೆ ದಿನವನ್ನು ಆಚರಿಸಲಾಗುತ್ತದೆ. ರೇಖಾಚಿತ್ರವು ದೃಶ್ಯ ಕಲೆಯ ಒಂದು ರೂಪವಾಗಿದೆ. ಗ್ರ್ಯಾಫೈಟ್ ಪೆನ್ಸಿಲ್‌ಗಳು, ಪೆನ್ ಮತ್ತು ಶಾಯಿ, ಶಾಯಿಯ ಕುಂಚಗಳು, ಮೇಣದ ಬಣ್ಣದ ಪೆನ್ಸಿಲ್‌ಗಳು, ಇದ್ದಿಲು, ನೀಲಿಬಣ್ಣ, ಸೀಮೆಸುಣ್ಣ ಮತ್ತು ಇತರ ರೀತಿಯ ಎರೇಸರ್‌ಗಳು, ಮಾರ್ಕರ್‌ಗಳು, ಸ್ಟೈಲಸ್‌ಗಳು ಮತ್ತು ಹೆಚ್ಚಿನವುಗಳಂತಹ ಪರಿಕರಗಳನ್ನು ಬಳಸಿ ಈಗೆಲ್ಲಾ ಚಿತ್ರಗಳನ್ನು ಬಿಡಿಸಲಾಗುತ್ತೆ.
ರಾಷ್ಟ್ರೀಯ ಚಿತ್ರಕಲೆ ದಿನವು ನಮ್ಮೊಳಗಿನ ಕಲೆಯನ್ನು ಗುರುತಿಸಲು ಹಾಗೂ ಎಲ್ಲವೂ ಮೌಲ್ಯಯುತವಾಗಿದೆ ಮತ್ತು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಅರ್ಹವಾಗಿದೆ ಎಂದು ತಿಳಿಸುವ ದಿನ. ಕಲಾವಿದರು ಮತ್ತು ಸಚಿತ್ರಕಾರರಿಗೆ ಮೆಚ್ಚುಗೆ ಮತ್ತು ಅವರ ಬಗ್ಗೆ ಜಾಗೃತಿಯನ್ನು ತರಲು ಈ ದಿನ ಸಹಕಾರಿಯಾಗಿದೆ. ಎಲೆ ಮರೆಯ ಕಾಯಿಯಂತೆ ಪ್ರಚಾರ ಬಯಸದೆ ತೆರೆಮರೆಯಲ್ಲಿ ದುಡಿಯುತ್ತಿರುವ ಅನೇಕ ಸೃಜನಶೀಲ ಕಲಾವಿದರು ನಮ್ಮ ನಡುವೆ ಇದ್ದಾರೆ. ಅವರನ್ನು ಗುರುತಿಸಿ ಗೌರವಿಸಿದಾಗ, ಅವರ ಕಲಾಕೃತಿಗಳ ಪ್ರದರ್ಶನ ನಡೆಸಿದಾಗ ಅವರ ಪ್ರತಿಭೆ ಸಮಾಜಕ್ಕೆ ತಿಳಿಯುತ್ತದೆ. ವಿದ್ಯಾರ್ಥಿಗಳಿಗೆ ಕಲಾಶಿಬಿರ, ಕಲಾಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಿ ಅಭಿನಂದಿಸುವ ಮೂಲಕ ಸ್ಥಳೀಯವಾಗಿ ನಾವು ರಾಷ್ಟ್ರೀಯ ಚಿತ್ರಕಲೆ ದಿನವನ್ನು ಆಚರಿಸಬಹುದಾಗಿದೆ. ಕಲಾಕೃತಿಗಳನ್ನು ಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿದಾಗ ಮಾತ್ರ ಕಲೆ ಬೆಳೆಯುತ್ತದೆ. ಹೀಗಾಗಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಇದನ್ನೂ ಓದಿ: ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ರಾಷ್ಟ್ರೀಯ ಚಿತ್ರಕಲೆ ದಿನದ ಇತಿಹಾಸ
Drawingday.org ರಾಷ್ಟ್ರೀಯ ಡ್ರಾಯಿಂಗ್ ದಿನದ ಸಂಸ್ಥಾಪಕ. ರಾಷ್ಟ್ರೀಯ ಚಿತ್ರಕಲೆ ದಿನವು ನಮ್ಮ ಕಲ್ಪನೆಯಿಂದ ಹೊರಬಂದ ಅದ್ಭುತ ಮತ್ತು ಸುಂದರವಾದ ವಿಷಯಗಳಲ್ಲಿ ನಮ್ಮನ್ನು ನಾವು ಕಾಣುವಂತೆ ಮಾಡುತ್ತದೆ. ಎಕ್ಸ್‌ಪ್ರೆಶನಿಸಂ, ರಿಯಲಿಸಂ, ಇಂಪ್ರಶನಿಸಂ, ಕ್ಯೂಬಿಸಂ, ಫಾವಿಸಂ, ಫ್ಯೂಚರಿಸಂ, ಅಬ್ ಸ್ಟ್ರಾಕ್ಟ್, ಬೈಜಾಂಟಿನ್, ಗೋಥಿಕ್ ಮುಂತಾದ ಶೈಲೀಕೃತ ಕಲಾಕೃತಿಗಳ ವೈಶಿಷ್ಟ್ಯಗಳನ್ನು ನಾವು ತಿಳಿದುಕೊಂಡಾಗ ವಿಶ್ವ ಕಲಾ ದಿನದ ಆಚರಣೆ ಪ್ರಾಮುಖ್ಯ ಪಡೆಯುತ್ತದೆ. ಅದೇರೀತಿ ಭಾರತೀಯ ಕಲೆಯ ಸೂಕ್ಷ್ಮ ಕಲಾ ಶೈಲಿಗಳಾದ ಕಾಂಗ್ರಾ ಶೈಲಿ, ತಂಜಾವೂರು ಶೈಲಿ, ಮೈಸೂರು ಶೈಲಿಯ ಉತ್ಕೃಷ್ಠ ಚಿತ್ರಗಳು, ಗ್ರಾಮೀಣ ಜನಪದರ ಶೈಲಿಗಳಾದ ಮಧುಬನಿ, ಪಟ್ಟಾ, ವಾರ್ಲಿ, ಕಾವಿ ಕಲೆ ಮುಂತಾದ ಚಿತ್ರಗಳ ಸೊಗಸನ್ನು ಕಾಣುವ ಮೂಲಕ ನಾವು ವಿಶ್ವ ಕಲಾ ದಿನವನ್ನು ಸಂಭ್ರಮಿಸಬಹುದು.
ರಾಷ್ಟ್ರೀಯ ಚಿತ್ರಕಲೆ ದಿನವನ್ನು ಹೇಗೆ ಆಚರಿಸುವುದು?
ಈ ದಿನವನ್ನು ಚಿತ್ರ ಕಲಾವಿದರಿಗಾಗಿ ಅರ್ಪಿಸಲಾಗಿದೆ. ಈ ದಿನವನ್ನು ಯಾವುದಾದರೂ ಚಿತ್ರಕಲಾ ಈವೆಂಟ್ಗಳಿಗೆ ಹೋಗಿ ಸಂಭ್ರಮಿಸಿ. ಚಿತ್ರಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಿ. ದೇಶದ ಸ್ಪೂರ್ತಿದಾಯಕ ಮತ್ತು ಸುಂದರವಾದ ಪರಿಸರದಲ್ಲಿ ಚಿತ್ರಿಸಲು ಮತ್ತು ಚಿತ್ರಿಸಲು ಪ್ರಯತ್ನಿಸುತ್ತಿರುವ ಜನರನ್ನು ಪ್ರೋತ್ಸಾಹಿಸಿ. ನಿಮ್ಮ ಕುಟುಂಬ, ಮಕ್ಕಳು ಮತ್ತು ಸ್ನೇಹಿತರನ್ನು ಚಿತ್ರಕಲೆ ಈವೆಂಟ್ಗಳಿಗೆ ಕರೆದುಕೊಂಡು ಹೋಗಿ. ಇನ್ನು ನಿಮ್ಮಲ್ಲಿ ಆಸಕ್ತಿ ಇದ್ದರೆ ನಿಮಗಿಷ್ಟು ಆಗುವ ಚಿತ್ರ ಬಿಡಿಸಿ. ನಿಮ್ಮಲ್ಲಿರುವ ಕಲೆಗೆ ಮರುಜನ್ಮ ನೀಡಿ. ನೀವು ಹೆಚ್ಚು ಇಷ್ಟಪಡುವ ಚಿತ್ರವನ್ನು ಸರಳವಾಗಿ ಚಿತ್ರಿಸಿ ಮತ್ತು ನಂತರ ಅವುಗಳನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ತೋರಿಸಿ. #DrawingDay ಹ್ಯಾಶ್‌ಟ್ಯಾಗ್ ಅನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಇತರರೊಂದಿಗೆ ನಿಮ್ಮ ಚಿತ್ರಗಳನ್ನು ಹಂಚಿಕೊಳ್ಳಿ.
ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:54 am, Tue, 16 May 23