ಬೇಸಿಗೆಯಲ್ಲಿ ತ್ವಚೆಯ ಕಾಂತಿಯನ್ನು ಕಾಪಾಡಲು ಇಲ್ಲಿದೆ ಟಿಪ್ಸ್​​

|

Updated on: Mar 12, 2023 | 5:22 PM

ಸರಿಯಾದ ಸಾರಯುಕ್ತ ತೈಲಗಳು ನಿಮ್ಮ ಚರ್ಮವನ್ನು ನಯವಾಗಿ, ತೇವಗೊಳಿಸುತ್ತವೆ ಮತ್ತು ಹೊಳಪು ನೀಡುತ್ತವೆ. ಒಣ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುವ ಎಣ್ಣೆಗಳು ಇಲ್ಲಿವೆ.

ಬೇಸಿಗೆಯಲ್ಲಿ ತ್ವಚೆಯ ಕಾಂತಿಯನ್ನು ಕಾಪಾಡಲು ಇಲ್ಲಿದೆ ಟಿಪ್ಸ್​​
ಬೇಸಿಗೆಯಲ್ಲಿ ತ್ವಚೆಯ ಆರೈಕೆ
Image Credit source: NDTV
Follow us on

ಬಿಸಿಲಿನ ಶಾಖ ಹೆಚ್ಚಾಗುತ್ತಿದೆ, ವಿಶೇಷವಾಗಿ ತ್ವಚೆಯ ಕಾಳಜಿ ವಹಿಸುವುದು ಅಗತ್ಯವಾಗಿದೆ. ಪ್ರತಿಬಾರೀ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಸನ್​​ಸ್ಕ್ರೀನ್​ ಹಚ್ಚುವುದನ್ನು ಮರೆಯದಿರಿ. ಇದರ ಹೊರತಾಗಿಯೂ ನಿಮ್ಮ ತ್ವಚೆಯ ತೇವಾಂಶವನ್ನು ಕಾಪಾಡಿಕೊಳ್ಳಲು ಹಾಗೂ ಕಾಂತಿಯುತವಾಗಿರಿಸಲು ಈ ಕೆಳಗಿನ ಮನೆಮದ್ದು ಬಳಸಿ. ಸರಿಯಾದ ಸಾರಯುಕ್ತ ಎಣ್ಣೆಗಳು ನಿಮ್ಮ ಚರ್ಮವನ್ನು ನಯವಾಗಿ, ತೇವಗೊಳಿಸುತ್ತವೆ ಮತ್ತು ಹೊಳಪು ನೀಡುತ್ತವೆ. ಒಣ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುವ ಎಣ್ಣೆಗಳು ಇಲ್ಲಿವೆ.

ಒಣ ಚರ್ಮವನ್ನು ಸುಧಾರಿಸಲು ಸಹಾಯ ಮಾಡುವ ಫೇಸ್​​ ಆಯಿಲ್​​:

ತೆಂಗಿನ ಎಣ್ಣೆ:

ಹಿಂದಿನ ಕಾಲದಿಂದಲೂ ಚರ್ಮದ ಆರೋಗ್ಯಕ್ಕಾಗಿ ತೆಂಗಿನ ಎಣ್ಣೆಯನ್ನು ಬಳಸಲಾಗುತ್ತಿದೆ. ವಿಟಮಿನ್ ಇ ಮತ್ತು ಕೆ ಅಂಶ ಮತ್ತು ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಂದಾಗಿ, ತೆಂಗಿನ ಎಣ್ಣೆಯು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಬಾದಾಮಿ ಎಣ್ಣೆ:

ಬಾದಾಮಿ ಎಣ್ಣೆಯು ಚರ್ಮಕ್ಕೆ ಪೋಷಣೆಯನ್ನು ನೀಡುವುದರ ಜೊತೆಗೆ ಚರ್ಮಕ್ಕೆ ಪುನಶ್ಚೈತನ್ಯವನ್ನು ನೀಡುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ವಿಶೇಷವಾಗಿ ಈ ಬೇಸಿಗೆ ಕಾಲದಲ್ಲಿ ಅತಿಯಾದ ಸೂರ್ಯನ ಶಾಖದಿಂದ ಹಾನಿಗೊಳಗಾದ ಚರ್ಮಕ್ಕೆ ಚಿಕಿತ್ಸೆ ನೀಡುತ್ತದೆ.

ಇದನ್ನೂ ಓದಿ: ಮೇಕ್​​ಅಪ್​​​​ ಮಾಡುವಾಗ ಕೆನ್ನೆ ಬ್ಲಶ್‌ ಮಾಡಲು ಕಷ್ಟ ಪಡುತ್ತೀರಾ?

ಜೊಜೊಬಾ ಎಣ್ಣೆ:

ಚರ್ಮವೂ ಕೆಂಪಾಗಿರುವುದು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಜೊಜೊಬಾ ಎಣ್ಣೆಯು ಅತ್ಯಂತ ಸಹಾಯಕವಾಗಿದೆ. ಜೊಜೊಬಾ ಎಣ್ಣೆಯು ವಿವಿಧ ಔಷಧೀಯ ಪ್ರಯೋಜನಗಳನ್ನು ಹೊಂದಿದ್ದು ಅದು ಎಸ್ಜಿಮಾ, ಸೋರಿಯಾಸಿಸ್ ಮತ್ತು ಮೊಡವೆಗಳಂತಹ ಚರ್ಮದ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಅದರಿಂದ ಪ್ರಯೋಜನ ಪಡೆಯಲು, ಇದನ್ನು ಕ್ಲೆನ್ಸರ್, ಮಾಯಿಶ್ಚರೈಸರ್ ಅಥವಾ ಸ್ಪಾಟ್ ಟ್ರೀಟ್ಮೆಂಟ್ ಆಗಿ ಬಳಸಿ. ನಿಮ್ಮ ಮುಖವನ್ನು ಒಳಗೊಂಡಂತೆ ನಿಮ್ಮ ದೇಹದ ಯಾವುದೇ ಪ್ರದೇಶಕ್ಕೆ ಇದನ್ನು ಹೆಚ್ಚಾಗಿ ಅನ್ವಯಿಸಬಹುದು.

ದ್ರಾಕ್ಷಿ ಬೀಜದ ಎಣ್ಣೆ:

ದ್ರಾಕ್ಷಿ ಬೀಜದ ಎಣ್ಣೆಯು ಉರಿಯೂತದ, ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್ ಸಿ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ.

ಸೂರ್ಯಕಾಂತಿ ಬೀಜದ ಎಣ್ಣೆ:

ಸೂರ್ಯಕಾಂತಿ ಎಣ್ಣೆಯ ಲಿನೋಲಿಯಿಕ್ ಆಮ್ಲವು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಚರ್ಮದ ಮೇಲೆ ಹಚ್ಚಿದಾಗ, ಇದು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ನಿಮ್ಮ ಚರ್ಮದ ಕಾಂತಿಯನ್ನು ಕಾಪಾಡಲು ಸೂರ್ಯಕಾಂತಿ ಎಣ್ಣೆಯಿಂದ ವಾರದಲ್ಲಿ ಒಮ್ಮೆ ಮಸಾಜ್​ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:22 pm, Sun, 12 March 23