Ayurveda beauty: ನಿಮ್ಮ ತ್ವಚೆ, ಕೂದಲಿಗೆ ರಕ್ಷಣೆ ನೀಡುತ್ತದೆ ಈ ಆಯುರ್ವೇದ ಉತ್ಪನ್ನಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2023 | 12:23 PM

ತ್ವಚೆಯನ್ನು ಆರೋಗ್ಯಕರವಾಗಿ ಕಾಪಡುವಲ್ಲಿ ಆಯುರ್ವೇದ ಸೌಂದರ್ಯ ಉತ್ಪನ್ನಗಳು ನಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ಇಂದು ಕೆಲವು ಆಯುರ್ವೇದ ಉತ್ಪನ್ನಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ.

Ayurveda beauty: ನಿಮ್ಮ ತ್ವಚೆ, ಕೂದಲಿಗೆ ರಕ್ಷಣೆ ನೀಡುತ್ತದೆ ಈ ಆಯುರ್ವೇದ ಉತ್ಪನ್ನಗಳು
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯುರ್ವೇದ (Ayurveda )ಸೌಂದರ್ಯ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಆಯುರ್ವೇದ ಉತ್ಪನ್ನಗಳಿಗೂ ಹೆಚ್ಚಿನ ಬೇಡಿಕೆ ಇವೆ. ಆಯುರ್ವೇದ ಉತ್ಪನ್ನಗಳಲ್ಲಿ ಯಾವುದೇ ರೀತಿಯ ಕೆಮಿಕಲ್‌ಗಳ ಇಲ್ಲದ ಕಾರಣ, ತ್ವಚೆಯ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಾಗಿ ಜನರು ಆಯುರ್ವೇದ ಉತ್ಪನ್ನಗಳನ್ನು ಬಳಸುತ್ತಾರೆ. ವಿವಿಧ ರೀತಿಯ ಫೇಸ್ ಕ್ರೀಮ್‌ಗಳಿಂದ ಹಿಡಿದು ಕೂದಲ ಆರೈಕೆಯ ಶಾಂಪೂ, ಎಣ್ಣೆಯವರೆಗೆ ಅನೇಕ ವಿಧದ ಆಯುರ್ವೇದ ಸೌಂದರ್ಯವರ್ಧಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವೊಂದನ್ನು ಸುಲಭವಾಗಿ ನಾವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಕಪಿವಾ ಆಯುರ್ವೇದದ ರೀಸರ್ಚ್ ಮತ್ತು ಡೆವೆಲಪ್‌ಮೆಂಟ್‌ನ ಮುಖ್ಯಸ್ಥರಾದ ಡಾ. ಕೃತಿ ಸೋನಿ ಅವರು 5 ಆಯುರ್ವೇದ ಸೌಂದರ್ಯ ಉತ್ಪನ್ನಗಳ ಕುರಿತು ಸಲಹೆ ನೀಡಿದರು. ಇದರ ನಿಯಮಿತ ಬಳಕೆಯಿಂದ ನಿಮ್ಮ ತ್ವಚೆಯ ಸೌಂದರ್ಯವನ್ನು ಆರೋಗ್ಯಕರವಾಗಿ ವರ್ಧಿಸಬಹುದು.

ಭೃಂಗರಾಜ: ಗರುಗ, ಗರುಗದ ಸೊಪ್ಪು ಅಂತಲೂ ಕರೆಯಲ್ಪಡುವ ಭೃಂಗರಾಜ ಸಸಿಯು ಕೂದಲ ಆರೈಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯಾವುದೇ ಆಯುರ್ವೇದ ಕೂದಲ ಉತ್ಪನ್ನಗಳಲ್ಲಿ ಈ ಭೃಂಗರಾಜ ಇದ್ದೇ ಇರುತ್ತದೆ. ಭೃಂಗರಾಜದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವ ಮೂಲಕ ಕೂದಲ ಆರೋಗ್ಯವನ್ನು ಕಾಪಡಿಕೊಳ್ಳಬಹುದು.

ಉಬ್ಟಾನ್: ಉಬ್ಟಾನ್ ಎಂದರೆ ಗಿಡಮೂಲಿಕೆಗಳು, ಧಾನ್ಯಗಳು, ಅರಶಿನದ ಮಿಶ್ರಣದ ಪುಡಿಯಾಗಿದೆ. ಇದನ್ನು ಭಾರತದಲ್ಲಿ ನೈಸರ್ಗಿಕ ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಈ ಉಬ್ಟಾನ್ ಪುಡಿಯನ್ನು ಹಾಲು, ಜೇನುತುಪ್ಪ ಅಥವಾ ರೋಸ್‌ವಾಟರ್ ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬೇಕು. ತ್ವಚೆಯ ಸೌಂದರ್ಯವನ್ನು ನೈಸರ್ಗಿಕ ವಿಧಾನದಲ್ಲಿ ಕಾಪಾಡಿಕೊಳ್ಳಲು ಉಬ್ಟಾನ್ ಪುಡಿಯನ್ನು ನಿಯಮಿತವಾಗಿ ಬಳಸಬೇಕು.

ಕುಂಕುಮಾದಿ ತುಪ್ಪದ ಬಾಡಿಲೋಷನ್: ಕುಂಕುಮಾದಿ ಬಾಡಿಲೋಷನ್ ನೈಸರ್ಗಿಕ ಪದಾರ್ಥಗಳಾದ ಕುಂಕುಮಾದಿ, ರಕ್ತಚಂದನ, ಬಾದಮಿ ಎಣ್ಣೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದು ನಿಮ್ಮ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಯಾವುದೇ ಜಿಡ್ಡಿನಾಂಶ ಇಲ್ಲದಿರುವ ಕಾರಣ ದೈನದಿಂನ ಬಳಕೆಗೆ ಯೋಗ್ಯವಾಗಿದೆ. ಕಾಂತಿಯುತ ಚರ್ಮವನ್ನು ಕಾಪಾಡಿಕೊಳ್ಳಲು ಈ ಬಾಡಿಲೋಷನ್ ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Ayurveda Tips: ಚಳಿಗಾಲದಲ್ಲಿ ಕಿರಿಕಿರಿ ನೀಡುವ ಗಂಟಲು ನೋವಿಗೆ ಆಯುರ್ವೇದದಲ್ಲಿದೆ ಪರಿಹಾರ

ಕೂದಲು ಉದುರುವಿಕೆ ವಿರೋಧಿ ತುಳಸಿ ಎಣ್ಣೆ: ಇದು ಸಾಂಪ್ರದಾಯಿಯ ಆಯುರ್ವೇದ ಕೂದಲಿನ ಎಣ್ಣೆಯಾಗಿದ್ದು, ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಲವಾದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರ ನಿಯಮಿತ ಬಳಕೆಯಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಕೂದಲಿಗೆ ಹೊಳಪನ್ನು ನೀಡುತ್ತದೆ.

ತುಳಸಿಯ ಮೊಡವೆ ವಿರೋಧಿ ಸೀರಮ್: ತುಳಸಿ ಮೊಡವೆ ವಿರೋಧಿ ಒಂದು ಆಯುರ್ವೇದ ಚರ್ಮದ ರಕ್ಷಣೆಯ ಉತ್ಪನ್ನವಾಗಿದ್ದು, ಮೊಡವೆಗಳ ಉಲ್ಬಣವನ್ನು ಕಡಿಮೆ ಮಾಡಲು ಮತ್ತು ಹೊಸ ಮೊಡವೆಗಳ ಬೆಳವಣಿಗೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಈ ಸೀರಮ್‌ನಲ್ಲಿ ತುಳಸಿ, ಬೇವು, ಟೀ ಟ್ರೀ ಎಣ್ಣೆ ಮತ್ತು ಅಲೋವೆರಾದಂತಹ ನೈಸರ್ಗಿಕ ಪದಾರ್ಥಗಳಿವೆ. ತ್ವಚೆಯನ್ನು ಮೊಡವೆಗಳಿಂದ ರಕ್ಷಿಸಲು ಇದು ಉತ್ತಮ ಆಯುರ್ವೇದ ಉತ್ಪನ್ನವಾಗಿದೆ.