Personality Test : ಈ ಚಿತ್ರದಲ್ಲಿ ನೀವು ಮೊದಲು ಯಾವ ಮುಖ ಕಂಡಿದ್ದೀರಾ? ಇದುವೇ ಹೇಳುತ್ತೆ ವ್ಯಕ್ತಿತ್ವ
ನಮ್ಮೆದುರಿಗೆ ಒಂದು ಚಿತ್ರವನ್ನು ತಂದಿಟ್ಟರೆ ಈ ಚಿತ್ರದಲ್ಲಿ ಏನೋ ವಿಚಿತ್ರವಿದೆ ಎಂದೆನಿಸುತ್ತದೆ, ಒಂದು ಕ್ಷಣ ತಬ್ಬಿಬ್ಬಾಗುತ್ತೇವೆ. ಮೆದುಳು ಕೂಡ ಗೊಂದಲಕ್ಕೆ ಒಳಗಾಗುತ್ತದೆ. ಇಂತಹ ಚಿತ್ರಗಳು ಆಗಾಗ ನಮ್ಮ ಮುಂದೆ ತಂದಾಗ ಮೆದುಳು ಎರಡೆರಡು ಸಲ ಯೋಚಿಸಬೇಕಾಗುತ್ತದೆ. ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ಚಿತ್ರಗಳು ಕಣ್ಣುಗಳನ್ನು ತೀಕ್ಷ್ಣಗೊಳಿಸುತ್ತದೆ. ಇದೀಗ ಈ ಎರಡು ಚಿತ್ರದಲ್ಲಿ ಮೊದಲು ಯಾವ ಚಿತ್ರ ಗಮನ ಸೆಳೆಯಿತು ಎನ್ನುವುದು ವ್ಯಕ್ತಿತ್ವ ಬಹಿರಂಗಪಡಿಸುತ್ತದೆ, ಹಾಗಾದ್ರೆ ಈ ಕುರಿತಾದ ಮಾಹಿತಿ ಇಲ್ಲಿದೆ.

ಎಲ್ಲರಿಗೂ ತಮ್ಮ ವ್ಯಕ್ತಿತ್ವ (Personality) ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಕಣ್ಣು, ಕಿವಿ, ಹುಬ್ಬು, ಮೂಗು, ಹಣೆಯ ಆಕಾರ, ಮಲಗುವ ಭಂಗಿಯಿಂದ, ನಡಿಗೆಯ ಶೈಲಿಯಿಂದ, ಮೊಬೈಲ್ ಹಿಡಿಯುವ ರೀತಿಯಿಂದಲೂ ವ್ಯಕ್ತಿತ್ವ ಅರಿತುಕೊಳ್ಳಬಹುದು. ಅದಲ್ಲದೇ, ಭ್ರಮೆಯನ್ನು ಉಂಟುಮಾಡುವ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರವು ವೈರಲ್ ಆಗುತ್ತಿರುತ್ತದೆ. ಈ ಚಿತ್ರದಲ್ಲಿ ಮೊದಲು ನಿಮಗೇನು ಕಾಣಿಸಿತು ಎಂಬುವುದರ ಆಧಾರದ ಮೇಲೆ ವ್ಯಕ್ತಿತ್ವ, ಗುಣಸ್ವಭಾವ ಅರಿತುಕೊಳ್ಳಬಹುದು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಎರಡು ಮುಖ (Face)ವನ್ನು ಕಾಣಬಹುದು. ಆದರೆ ನೀವು ಮೊದಲು ಯಾವ ಮುಖದ ಚಿತ್ರವನ್ನು ನೋಡುತ್ತೀರಿ ಎನ್ನುವುದು ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ.
* ಎಡಭಾಗದಲ್ಲಿರುವ ಮುಖದ ಚಿತ್ರ ಕಂಡರೆ : ಎಡಭಾಗದಲ್ಲಿರುವ ಚಿತ್ರವನ್ನು ಮೊದಲು ನೋಡಿದರೆ, ಇದು ಎಡ ಮೆದುಳು ಹೆಚ್ಚು ಸಕ್ರಿಯವಾಗಿದೆ ಎನ್ನುವುದನ್ನು ತೋರಿಸುತ್ತದೆ. ಈ ವ್ಯಕ್ತಿಗಳು ತಾರ್ಕಿಕವಾಗಿ, ವಸ್ತುನಿಷ್ಠವಾಗಿ ಮತ್ತು ವಿಮರ್ಶಾತ್ಮಕವಾಗಿ ಯೋಚಿಸುತ್ತಾರೆ. ಈ ಚಿತ್ರದಲ್ಲಿನ ಮುಖದಲ್ಲಿ ಸಂತೋಷವನ್ನು ಕಂಡರೆ ಈ ಜನರು ಜೀವನದಲ್ಲಿ ಪ್ರಾಯೋಗಿಕವಾಗಿ ಯೋಚಿಸುತ್ತಿರುತ್ತಾರೆ. ಸಂಘಟಿತ ವ್ಯಕ್ತಿಗಳಾಗಿದ್ದು ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಗುಣ ಇವರಿಗಿರುತ್ತದೆ. ಈ ವ್ಯಕ್ತಿಗಳ ಮನಸ್ಸು ಹೃದಯಕ್ಕಿಂತ ಮೇಲುಗೈ ಸಾಧಿಸುತ್ತದೆ. ಹೆಚ್ಚು ತಾರ್ಕಿಕ ಯೋಚಿಸುವ ಮೂಲಕ ಕಠಿಣ ಸಂದರ್ಭದಲ್ಲಿ ಸಲೀಸಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ: ಅಂಗೈ ತುರಿಕೆ ಕಂಡರೆ ನಿಜವಾಗಿಯೂ ಹಣ ಬರುತ್ತದೆಯೇ?
* ಬಲಭಾಗದಲ್ಲಿರುವ ಮುಖದ ಚಿತ್ರ ನೋಡಿದರೆ : ಕಣ್ಣುಗಳು ಮೊದಲು ಬಲಭಾಗದ ಮುಖದ ಚಿತ್ರದತ್ತ ಹೋದರೆ ಈ ವ್ಯಕ್ತಿಗಳ ಬಲಭಾಗದ ಮೆದುಳು ಹೆಚ್ಚು ಸಕ್ರಿಯವಾಗಿರುತ್ತದೆ. ಇವರು ಹೆಚ್ಚು ಸೃಜನಶೀಲರು ಮತ್ತು ಚಿಂತನಶೀಲರಾಗಿದ್ದು, ಎಲ್ಲಾ ವಿಷಯಗಳನ್ನು ಮೊದಲೇ ಅರ್ಥಮಾಡಿಕೊಳ್ಳುತ್ತಾರೆ. ಈ ವ್ಯಕ್ತಿಗಳು ಗೊಂದಲಕ್ಕೊಳಗಾದಾಗಲೆಲ್ಲಾ, ಹೃದಯದ ಮಾತನ್ನು ಕೇಳುತ್ತಾರೆ. ಇವರು ಸ್ನೇಹಪರರಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಸ್ನೇಹಿತರನ್ನು ಸಂಪಾದಿಸಿಕೊಂಡಿರುತ್ತಾರೆ. ಕಷ್ಟ ಎಂದರೆ ಮಿಡಿಯುವ ಮನಸ್ಸು ಇವರದ್ದಾಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Wed, 26 March 25