ಹೆಣ್ಣು ಮಕ್ಕಳು ತವರು ಮನೆಯಿಂದ ಗಂಡನ ಮನೆಗೆ ಅಪ್ಪಿತಪ್ಪಿ ಕೂಡ ಈ ವಸ್ತುಗಳನ್ನು ತರಲೇಬೇಡಿ
ಹೆಣ್ಣು ಮಕ್ಕಳಿಗೆ ತವರು ಮನೆಯೆಂದರೆ ಏನೋ ಸೆಳೆತ. ಮದುವೆಯಾದ ಬಳಿಕ ತವರಿನ ಮೇಲಿನ ಮೋಹ ಹೆಚ್ಚಾಗುತ್ತದೆ. ಹೊಸ ಬದುಕಿಗೆ ಕಾಲಿಟ್ಟ ಬಳಿಕ ಹೆಣ್ಣು ತಾಯಿ ಮನೆ ಯಿಂದ ಗಂಡನ ಮನೆಗೆ ಹೋಗುವುದು ಸಹಜ. ಆದರೆ ತನ್ನ ತವರಿನಿಂದ ದೈಹಿಕವಾಗಿ ದೂರವಿದ್ದರೂ ಮನಸ್ಸು ಮಾತ್ರ ತನ್ನ ತವರನ್ನು ನೆನೆಯುತ್ತಿರುತ್ತದೆ. ಕೆಲವೊಮ್ಮೆ ತಾಯಿ ಮನೆಗೆ ಹೋಗಿ ತನ್ನ ಗಂಡನ ಮನೆಗೆ ಹೋಗುವಾಗ ಹೆತ್ತವರು ಪ್ರೀತಿಯಿಂದ ತಿಂಡಿ ತಿನಿಸುಗಳನ್ನು ಮಾಡಿ ಕೊಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ಕೆಲವು ವಸ್ತುಗಳನ್ನು ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಲೇಬಾರದಂತೆ, ಆ ಕುರಿತಾದ ಮಾಹಿತಿ ಇಲ್ಲಿದೆ.

ಮದುವೆ (Marriage) ಎನ್ನುವುದು ಹೆಣ್ಣಿನ ಜೀವನದಲ್ಲಿ ತಿರುವಿನ ಘಟ್ಟ. ಈ ವೇಳೆಯಲ್ಲಿ ಹೊಸ ಮನೆ, ಸದಸ್ಯರು ಹಾಗೂ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ವಿವಾಹದ ನಂತರ ಹೆಣ್ಣು ಎರಡು ಮನೆಯ ಅಭಿವೃದ್ಧಿಗಾಗಿ ಕೆಲ ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ. ಹೌದು, ಈ ಸಂಪ್ರದಾಯದಂತೆ ಮದುವೆಯಾದ ನಂತರ ತವರು ಮನೆ (Parents house) ಯಿಂದ ಗಂಡನ ಮನೆ (Husband home) ಗೆ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು ಎನ್ನುವುದಿದೆ. ಒಂದು ವೇಳೆ ಈ ಕೆಲವು ವಸ್ತುಗಳನ್ನು ಅಪ್ಪಿ ತಪ್ಪಿ ತೆಗೆದುಕೊಂಡು ಹೋದರೆ ಗಂಡನ ಮನೆಯೂ ಸರ್ವನಾಶವಾಗುತ್ತದೆ. ಕಲಹಗಳು ಹೆಚ್ಚಾಗಿ ಸಂಬಂಧದಲ್ಲಿ ಬಿರುಕು ಮಾಡುತ್ತದೆ. ಅಷ್ಟೇ ಅಲ್ಲದೇ ಆರ್ಥಿಕ ಸಮಸ್ಯೆಯೂ ಉಂಟಾಗಿ ಮನೆಯಲ್ಲಿ ಬಡತನ ನೆಲೆಸುತ್ತದೆ ಎನ್ನಲಾಗಿದೆ.
- ದೇವರ ವಿಗ್ರಹ : ಮದುವೆಯಾದ ಬಳಿಕ ತನ್ನ ತವರು ಮನೆಯಿಂದ ಯಾವುದೇ ಕಾರಣಕ್ಕೂ ದೇವರ ವಿಗ್ರಹ ಹಾಗೂ ಮೂರ್ತಿಯನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು. ಈ ರೀತಿ ತನ್ನ ತವರಿನಿಂದ ತಂದರೆ ತಾನು ಹುಟ್ಟಿ ಬೆಳೆದ ಮನೆಯಲ್ಲಿ ಬಡತನ, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಹಾಗೂ ದುರಾದೃಷ್ಟ ಎದುರಾಗುತ್ತದೆಯಂತೆ.
- ಕೆಟ್ಟ ವಿಚಾರ : ಎಲ್ಲಾ ಮನೆಯಲ್ಲಿ ಒಳ್ಳೆಯದು ಹಾಗೂ ಕೆಟ್ಟದು ಇದ್ದೆ ಇರುತ್ತದೆ. ಆದರೆ ತವರಿನ ಕೆಟ್ಟ ವಿಚಾರಗಳನ್ನು ಗಂಡನ ಮನೆಯಲ್ಲಿ ಹೇಳಬಾರದು. ತವರಿಗೆ ಹೋಗಿದ್ದಾಗ ಕೆಟ್ಟ ವಿಚಾರಗಳ ಬಗ್ಗೆ ತಾಯಿ ಹೇಳಿದರೂ ಕೂಡ ಅದನ್ನು ಅಲ್ಲಿಯೇ ಬಿಟ್ಟು ಬರಬೇಕು, ಒಂದು ವೇಳೆ ಗಂಡನ ಮನೆಯಲ್ಲಿ ಈ ಬಗ್ಗೆ ಮಾತನಾಡಿದರೆ ಲಕ್ಷ್ಮೀದೇವಿ ಮುನಿಸಿಕೊಳ್ಳುತ್ತಾಳೆ ಎನ್ನುವ ನಂಬಿಕೆಯಿದೆ.
- ಚೂಪಾದ ವಸ್ತುಗಳು : ಹೆಣ್ಣು ಮಕ್ಕಳು ತವರು ಮನೆಯಿಂದ ಗಂಡನ ಮನೆಗೆ ಯಾವುದೇ ಕಾರಣಕ್ಕೂ ಚೂಪಾದ ಹರಿತವಾದ ವಸ್ತುಗಳಾದ ಚಾಕು, ಕತ್ತರಿ, ಸೂಜಿಯನ್ನು ತೆಗೆದುಕೊಂಡು ಹೋಗಬಾರದು. ಈ ರೀತಿಯ ವಸ್ತುಗಳನ್ನು ತೆಗೆದು ಕೊಂಡು ಹೋಗುವುದರಿಂದ ಮನೆಯಲ್ಲಿ ಜಗಳ ಮನಸ್ತಾಪಗಳು ಶುರುವಾಗುತ್ತದೆ. ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಗಂಡ ಹೆಂಡತಿ ದೂರವಾಗುವ ಸಂದರ್ಭವು ಬಂದೋದಗಬಹುದು. ಹುಟ್ಟಿದ ಮನೆ ಹಾಗೂ ಕೊಟ್ಟ ಮನೆ ಈ ಎರಡು ಮನೆಯ ನಡುವಿನ ಬಾಂಧವ್ಯ ಹದಗೆಡುತ್ತದೆ.
- ಹಣ : ಮದುವೆಯಾದ ಬಳಿಕ ಹೆಣ್ಣು ತನ್ನ ತವರು ಮನೆಯಿಂದ ಗಂಡನ ಮನೆಗೆ ಹಣವನ್ನು ತೆಗೆದುಕೊಂಡು ಹೋಗಬಾರದು. ಒಂದು ವೇಳೆ ಅಪ್ಪಿ ತಪ್ಪಿ ತವರಿನಿಂದ ಹಣವನ್ನು ತೆಗೆದುಕೊಂಡು ಹೋದರೆ ಪತಿಯ ಮನೆಯು ಸರ್ವನಾಶವಾಗುತ್ತದೆ. ಎಷ್ಟೇ ದುಡಿದರೂ ಕೂಡ ಮನೆಯಲ್ಲಿ ಹಣವು ನಿಲ್ಲುವುದೇ ಇಲ್ಲ, ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Wed, 26 March 25