World Theatre Day 2025: ಬದುಕಿಗೆ ಹಿಡಿದ ಕನ್ನಡಿ ಈ ರಂಗಭೂಮಿ, ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ರಂಗಭೂಮಿ ಅನೇಕ ಕಲಾವಿದರಿಗೆ ಬದುಕು ಕಟ್ಟಿ ಕೊಟ್ಟಿದೆ. ಮನೆ ಮಂದಿಯ ಹಸಿವನ್ನು ನೀಗಿಸಿದೆ. ಎಲ್ಲರಿಗೂ ತಿಳಿದಿರುವಂತೆ ರಂಗಭೂಮಿಯು ತಮ್ಮ ಕಲಾತ್ಮಕ ಪ್ರತಿಭೆಯನ್ನು ಸನ್ನೆಗಳು, ಮಾತು, ಹಾಡು, ಸಂಗೀತ, ನೃತ್ಯದ ಮೂಲಕ ಪ್ರೇಕ್ಷಕರಿಗೆ ಸಂದೇಶವನ್ನು ರವಾನಿಸಲು ನೇರ ಪ್ರದರ್ಶನಗಳನ್ನು ನೀಡುವ ವೇದಿಕೆಯಲ್ಲಿ ಒಂದು. ಈ ರಂಗಕಲೆಯನ್ನು ಪ್ರೋತ್ಸಾಹಿಸಿ ಉಳಿಸಿ ಬೆಳೆಸಲು ಒಂದು ದಿನವನ್ನು ಮೀಸಲಿಟ್ಟಿದೆ. ಹೌದು, ಪ್ರತಿ ವರ್ಷ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ವಿಶ್ವ ರಂಗಭೂಮಿ ದಿನದ ಆಚರಣೆ ಹುಟ್ಟಿಕೊಂಡದ್ದು ಯಾವಾಗ? ಏನಿದರ ಇತಿಹಾಸ ಹಾಗೂ ಮಹತ್ವ? ಎನ್ನುವ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಪ್ರಾಚೀನಕಾಲದ ಮನೋರಂಜನಾ ಮಾಧ್ಯಮಗಳಲ್ಲಿ ಒಂದು ರಂಗಭೂಮಿ (Theatre). ಈ ರಂಗಭೂಮಿಯು ಸಂಸ್ಕೃತಿಯನ್ನು ಚಿತ್ರಿಸುವ ಅತ್ಯಂತ ಜನಪ್ರಿಯವಾದ ಕಲಾ ಪ್ರಕಾರವಾಗಿದೆ. ಇವತ್ತಿಗೂ ರಂಗಭೂಮಿಯೂ ಸಮಾಜದಲ್ಲಿನ ಗಂಭೀರ ವಿಷಯಗಳತ್ತ ಬೆಳಕು ಚೆಲ್ಲುತ್ತ ಸಂದೇಶವನ್ನು ರವಾನಿಸುತ್ತ ಬರುತ್ತಿದೆ. ಈಗಾಗಲೇ ಅದೆಷ್ಟೋ ರಂಗಭೂಮಿಯಿಂದ ಹಿರಿತೆರೆ (Big screen) ಹಾಗೂ ಕಿರುತೆರೆ (Small screen) ಗೆ ಹೋದ ಅದೆಷ್ಟೋ ಕಲಾವಿದರು ಇದ್ದಾರೆ. ಹೀಗಾಗಿ ಈ ದಿನದಂದು ರಂಗಭೂಮಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಪ್ರಪಂಚದಾದ್ಯಂತ ರಂಗಭೂಮಿ ಕಲೆ ಹಾಗೂ ಪ್ರತಿಭೆಯನ್ನು ಫೋತ್ಸಾಹಿಸುವುದಾಗಿದೆ.
ವಿಶ್ವ ರಂಗಭೂಮಿ ದಿನದ ಇತಿಹಾಸ
1961 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ ಅಥವಾ ಇಂಟರ್‌ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ಐಟಿಐ) ಈ ದಿನದ ಆಚರಣೆಯನ್ನು ಪರಿಚಯಿಸಿತು. ವಿಶ್ವ ರಂಗಭೂಮಿ ದಿನದಂದು ಫ್ರೆಂಚ್ ನಾಟಕಕಾರ ಜೀನ್ ಕಾಕ್ಟೋ ಅವರು ಮೊದಲ ಸಂದೇಶವನ್ನು ನೀಡುವ ಕೆಲಸವನ್ನು ಮಾಡಿದರು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 27 ರಂದು ಜಾಗತಿಕವಾಗಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಹೆಲ್ಮೆಟ್ ಧರಿಸುವಾಗ ಈ ಟಿಪ್ಸ್ ತಪ್ಪದೇ ಪಾಲಿಸಿ
ವಿಶ್ವ ರಂಗಭೂಮಿ ದಿನದ ಮಹತ್ವ
ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಪುರಾತನ ಕಲೆ ,ಸಾಹಿತ್ಯ, ಸಂಸ್ಕೃತಿಗಳು ಕಣ್ಮರೆಯಾಗುತ್ತಾ ಹೋಗುವುದನ್ನು ಕಾಣಬಹುದು. ಪ್ರಾಚೀನ ಕಲೆಯಾದ ರಂಗಭೂಮಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಹಾಗೂ ಪ್ರಪಂಚದಾದ್ಯಂತ ರಂಗಭೂಮಿ ಕಲೆ ಹಾಗೂ ಪ್ರತಿಭೆಯನ್ನು ಫೋತ್ಸಾಹಿಸುವುದು ಈ ದಿನದ ಮಹತ್ವವಾಗಿದೆ. ಹೀಗಾಗಿ ಈ ವಿಶೇಷ ದಿನದಂದು ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ