Ayurveda For Dry Eyes: ಒಣ ಕಣ್ಣಿನ ಸಮಸ್ಯೆಗೆ ಇಲ್ಲಿದೆ ಆರ್ಯುವೇದದ ಪರಿಹಾರ

ಒಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ​​

Ayurveda For Dry Eyes: ಒಣ ಕಣ್ಣಿನ ಸಮಸ್ಯೆಗೆ ಇಲ್ಲಿದೆ ಆರ್ಯುವೇದದ ಪರಿಹಾರ
ಒಣ ಕಣ್ಣಿನ ಸಮಸ್ಯೆ
Follow us
ಅಕ್ಷತಾ ವರ್ಕಾಡಿ
|

Updated on:Feb 28, 2023 | 4:29 PM

ಇಂದಿನ ಬದಲಾದ ಜೀವನಶೈಲಿಯಿಂದಾಗಿ ಸಾಕಷ್ಟು ಹೊತ್ತು ಮೊಬೈಲ್​ ಫೋನ್​, ಲ್ಯಾಪ್​​ ಟಾಪ್​​ಗಳಲ್ಲಿ ಸಮಯ ಕಳೆಯುವುದು ಸಾಮಾನ್ಯವಾಗಿದೆ. ಇದು ಕಾಲಕ್ರಮೇಣ  ಕಣ್ಣಿನ ಆರೋಗ್ಯವನ್ನು ಕೆಡಿಸಬಹುದು.  ಕಣ್ಣಿನ ದೃಷ್ಟಿ ದೋಷದಿಂದ ಹಿಡಿದು, ತಲೆನೋವು, ಒನ ಕಣ್ಣಿನ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಒಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ​​ ಒಣ ಕಣ್ಣು ಹೊಂದಿರುವ ಜನರು ತುರಿಕೆ, ನೋವು, ಆಯಾಸ, ಸುಡುವಿಕೆ ಅಥವಾ ಕಣ್ಣಿನ ಬಣ್ಣದಲ್ಲಿ ಬದಲಾವಣೆ, ಕೆಂಪು ಕಣ್ಣಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸಲಾಗುವುದಿಲ್ಲ. ಆದರೆ ಆರ್ಯುವೇದದ ಮೂಲಕ ಕಣ್ಣಿನ ಸಮಸ್ಯೆ ಹೆಚ್ಚಾಗದಂತೆ ಜಾಗ್ರತೆ ವಹಿಸಬಹುದಾಗಿದೆ.

ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರ ಕೆಲವು ಆರ್ಯುವೇದ ಸಲಹೆಗಳು:

ರೋಸ್ ವಾಟರ್:

ಈ ರೋಸ್ ವಾಟರ್ ಒಣ ಕಣ್ಣಿಬ ಸಮಸ್ಯೆಗೆ ಒಂದು ಉತ್ತಮ ಆರ್ಯುವೇದದ ಔಷಧಿಯಾಗಿದೆ ಎಂದು ಡಿಂಪಲ್​​ ಹೇಳುತ್ತಾರೆ. ಪ್ರತಿ ದಿನ ರಾತ್ರಿ ನೀವು ಮಲಗುವ ಮನ್ನ ನಿಮ್ಮ ಕಣ್ಣುಗಳಿಗೆ ಎರಡು ಹನಿ ರೋಸ್​​ ವಾಟರ್​​ ಹಾಕಿ. ಇದು ನಿಮ್ಮ ಆಯಾಸಗೊಂಡ ಮತ್ತು ದಣಿದ ಕಣ್ಣುಗಳಿಗೆ ಹೆಚ್ಚಿನ ವಿಶ್ರಾಂತಿ ನೀಡುತ್ತದೆ. ಇದಲ್ಲದೆ, ಇದು ವಿಟಮಿನ್ ಎ ಅಂಶವನ್ನು ಸಮೃದ್ಧವಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಹೋಳಿ ಹಬ್ಬ ಸಮೀಪಿಸುತ್ತಿದೆ, ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ

ತುಪ್ಪ:

ಒಣ ಕಣ್ಣಿನ ಸಮಸ್ಯೆಗೆ ಮಾತ್ರವಲದೇ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ತುಪ್ಪ ಅತ್ಯಂತ ಪ್ರಯೋಜನಕಾರಿಯಾಗಿದೆ. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ (ಉಗುರು ಬೆಚ್ಚಗೆ) ಮತ್ತು ನೀವು ಮಲಗುವ ಮುನ್ನ ಕಣ್ಣಿಗೆ ಹಚ್ಚಿ. ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿಯ ಅನುಭವವನ್ನು ನೀಡುತ್ತದೆ ಎಂದು ಡಾ. ಡಿಂಪಲ್​​ ಹೇಳುತ್ತಾರೆ.

ಅಲೋವೆರಾ ಜೆಲ್:

ಒಣ ಕಣ್ಣುಗಳಿಗೆ ಅಲೋವೆರಾ ಜೆಲ್ ಪರಿಣಾಮಕಾರಿ ಪರಿಹಾರವಾಗಿದೆ. 1/2 ಚಮಚ ಅಲೋವೆರಾ ಜೆಲ್​​ನ್ನು ಒಂದು ಕಪ್​​ ನೀರಿಗೆ ಹಾಕಿ ಮತ್ತು ಈ ನೀರಿನಿಂದ ಮುಖ ತೊಳೆಯಿರಿ. ಉರಿಯೂತದ ಗುಣಲಕ್ಷಣಗಳು ಕೆಂಪು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ಆರಾಮವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:28 pm, Tue, 28 February 23

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ