Ayurveda Tips: ಚಳಿಗಾಲದಲ್ಲಿ ಕಿರಿಕಿರಿ ನೀಡುವ ಗಂಟಲು ನೋವಿಗೆ ಆಯುರ್ವೇದದಲ್ಲಿದೆ ಪರಿಹಾರ

ಕೆಲವೊಮ್ಮೆ ಬ್ಯಾಕ್ಟೀರಿಯಾದಿಂದ ಗಂಟಲು ನೋವು ಉಂಟಾಗುತ್ತದೆ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಗಂಟಲು ನೋವು ಹೆಚ್ಚು ಅಪಾಯಕಾರಿ.

Ayurveda Tips: ಚಳಿಗಾಲದಲ್ಲಿ ಕಿರಿಕಿರಿ ನೀಡುವ ಗಂಟಲು ನೋವಿಗೆ ಆಯುರ್ವೇದದಲ್ಲಿದೆ ಪರಿಹಾರ
ಗಂಟಲು ನೋವು
Follow us
ಸುಷ್ಮಾ ಚಕ್ರೆ
|

Updated on: Jan 23, 2023 | 5:47 PM

ಶೀತ, ಕೆಮ್ಮು ಮತ್ತು ಗಂಟಲು ನೋವು ಚಳಿಗಾಲದಲ್ಲಿ (Winter Season) ಸಾಮಾನ್ಯ ಸಮಸ್ಯೆಯಾಗಿದೆ. ಚಳಿಗಾಲದಲ್ಲಿ ತಣ್ಣನೆಯ ಆಹಾರವನ್ನು ಸೇವಿಸುವುದರಿಂದ ಗಂಟಲು ನೋವು ಉಂಟಾಗುತ್ತದೆ. ಆದರೆ ಕೆಲವೊಮ್ಮೆ ಈ ಸಮಸ್ಯೆಯು ತುಂಬಾ ಹೆಚ್ಚಾಗುತ್ತದೆ. ಗಂಟಲು ನೋವಿನಿಂದ ಮಾತನಾಡಲು ಮತ್ತು ತಿನ್ನಲು, ಕುಡಿಯಲು ಕೂಡ ಕಷ್ಟಪಡುವಂತಾಗುತ್ತದೆ. ನಮ್ಮ ಗಂಟಲು ನೋಯುತ್ತಿರುವಾಗ, ನಮ್ಮಲ್ಲಿ ಅನೇಕರು ಮಾತ್ರೆ, ಸಿರಪ್ ತೆಗೆದುಕೊಳ್ಳುವ ಮೂಲಕ ಅದನ್ನು ಗುಣಪಡಿಸಲು ಪ್ರಯತ್ನಿಸುತ್ತಾರೆ. ಆದರೆ, ಇದಕ್ಕೆ ಮನೆಯಲ್ಲಿಯೇ ಪರಿಹಾರವಿದೆ. ಹುಳಿ ಆಹಾರ, ತಣ್ಣೀರು ಕುಡಿಯುವುದು, ಕಲುಷಿತ ಆಹಾರ ಸೇವಿಸುವುದರಿಂದ ಗಂಟಲು ನೋವು ಬರುತ್ತದೆ.

ಕೆಲವೊಮ್ಮೆ ಬ್ಯಾಕ್ಟೀರಿಯಾದಿಂದ ಗಂಟಲು ನೋವು ಉಂಟಾಗುತ್ತದೆ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಗಂಟಲು ನೋವು ಹೆಚ್ಚು ಅಪಾಯಕಾರಿ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದ ಸೋಂಕು ಹೆಚ್ಚಿನ ಜ್ವರಕ್ಕೆ ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ರುಮಾಟಿಕ್ ಜ್ವರದ ಅಪಾಯವೂ ಉಂಟಾಗುತ್ತದೆ.

ಗಂಟಲು ನೋವು ನಿವಾರಿಸಲು ಇಲ್ಲಿದೆ ಪರಿಹಾರ:

1. ತುಳಸಿ ಕಷಾಯ: ತುಳಸಿ ನೋಯುತ್ತಿರುವ ಗಂಟಲನ್ನು ಗುಣಪಡಿಸಲು ಸಹಾಯಕವಾಗಿದೆ. ತುಳಸಿಯನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಎಂದು ವಿವರಿಸಲಾಗಿದೆ. ತುಳಸಿ ಕಷಾಯವನ್ನು ಕುಡಿಯುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ಕಷಾಯ ಮಾಡಲು 4ರಿಂದ 5 ಕರಿಮೆಣಸು ಮತ್ತು 5ರಿಂದ 6 ತುಳಸಿ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ನಂತರ ಈ ನೀರನ್ನು ಫಿಲ್ಟರ್ ಮಾಡಿ ಸೇವಿಸಿ. ಇದು ಗಂಟಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Headache: ತಲೆ ನೋವಿಗೆ ಕಾರಣ ಹಲವಿರಬಹುದು, ಈ ಚಹಾ ಕುಡಿಯಿರಿ ತಕ್ಷಣವೇ ಪರಿಹಾರ ಪಡೆಯಿರಿ

2. ಅರಿಶಿನ ಚಹಾ: ಅರಿಶಿನವು ಆರೋಗ್ಯ ಗುಣಗಳಿಂದ ಕೂಡಿದೆ. ಅರಿಶಿನವನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕರ್ಕ್ಯುಮಿನ್ ಎಂಬ ಅಂಶವು ಅರಿಶಿನದಲ್ಲಿ ಕಂಡುಬರುತ್ತದೆ. ಉರಿಯೂತವನ್ನು ಕಡಿಮೆ ಮಾಡಲು, ಊತ ಮತ್ತು ನೋಯುತ್ತಿರುವ ಗಂಟಲು ಕಡಿಮೆ ಮಾಡಲು ಅರಿಶಿನ ಪರಿಣಾಮಕಾರಿ.

3. ಮೂಲೇತಿ: ಆಯುರ್ವೇದದಲ್ಲಿ ಮೂಲೇತಿಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಗಂಟಲಿನ ಸಮಸ್ಯೆಗಳನ್ನು ಗುಣಪಡಿಸಲು ಲೈಕೋರೈಸ್ ಅನ್ನು ಅತ್ಯುತ್ತಮ ಪರಿಹಾರವೆಂದು ಪರಿಗಣಿಸಲಾಗುತ್ತದೆ. ಗಂಟಲು ನೋವನ್ನು ನಿವಾರಿಸಲು, ಪ್ರತಿದಿನ 1 ಚಮಚ ಮೂಲೇತಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ಸ್ವಲ್ಪ ಸಮಯದ ನಂತರ ಉಗುರುಬೆಚ್ಚನೆಯ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

4. ಮೆಂತ್ಯ: ಆಹಾರದ ರುಚಿಯನ್ನು ಹೆಚ್ಚಿಸಲು ಮೆಂತ್ಯವನ್ನು ಅಡುಗೆಮನೆಯಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಆದರೆ, ಮೆಂತ್ಯವು ನಿಮ್ಮ ನೋಯುತ್ತಿರುವ ಗಂಟಲನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? 1 ಚಮಚ ಮೆಂತ್ಯ ಬೀಜಗಳನ್ನು 1 ಕಪ್ ನೀರಿನಲ್ಲಿ ಕುದಿಸಿ ಮತ್ತು ಫಿಲ್ಟರ್ ಮಾಡಿ. ತದನಂತರ ಈ ನೀರನ್ನು ಸೇವಿಸಿ. ಇದರಿಂದ ಗಂಟಲು ನೋವಿನಿಂದ ಪರಿಹಾರವನ್ನು ಕಾಣಬಹುದು.

ಇದನ್ನೂ ಓದಿ: Success Story: ವಿಷ ದುಬಾರಿ! ಜೇನು ವಿಷಕ್ಕೂ ಇದೆ ಭಾರಿ ಡಿಮ್ಯಾಂಡ್, ಜೇನು ವಿಷ ಸಂಗ್ರಹಿಸುವ ಸಾಹಸದಲ್ಲಿ ಈ ಕೃಷಿಕ ಯಶಸ್ವಿ!

5. ಜೇನು ತುಪ್ಪ: ಜೇನುತುಪ್ಪವನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಮಗೆ ನೋಯುತ್ತಿರುವ ಗಂಟಲಿನ ಸಮಸ್ಯೆ ಇದ್ದರೆ ಜೇನುತುಪ್ಪ ಉಪಯೋಗಿಸಿ. ನೀವು ನಿಮ್ಮ ಚಹಾದಲ್ಲಿ ಒಂದು ಚಮಚ ಜೇನುತುಪ್ಪವನ್ನು ಹಾಕಿ ಕುಡಿಯಬಹುದು. ಜೇನುತುಪ್ಪವು ವೈರಲ್ ಸೋಂಕಿನಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್