ಮಳೆಗಾಲದಲ್ಲಿ ಒದ್ದೆ ಬಟ್ಟೆಗಳನ್ನು ಸುಲಭವಾಗಿ ಒಣಗಿಸಲು ಕೆಲವು ಸಲಹೆಗಳು ಇಲ್ಲಿವೆ

| Updated By: ನಯನಾ ರಾಜೀವ್

Updated on: Oct 12, 2022 | 11:38 AM

ಮುಂಗಾರು ಮುಗಿದಿದ್ದರೂ ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ಮಂದಿ ಮಳೆಯನ್ನು ಆನಂದಿಸಿದರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ.

ಮಳೆಗಾಲದಲ್ಲಿ ಒದ್ದೆ ಬಟ್ಟೆಗಳನ್ನು ಸುಲಭವಾಗಿ ಒಣಗಿಸಲು ಕೆಲವು ಸಲಹೆಗಳು ಇಲ್ಲಿವೆ
Wet Clothes
Follow us on

ಮುಂಗಾರು ಮುಗಿದಿದ್ದರೂ ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ಮಂದಿ ಮಳೆಯನ್ನು ಆನಂದಿಸಿದರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಈ ಋತುವಿನಲ್ಲಿ ಎಲ್ಲರಿಗೂ ಸಾಮಾನ್ಯವಾಗಿರುವ ಒಂದು ಸಮಸ್ಯೆ ಎಂದರೆ ಮಳೆಗಾಲದಲ್ಲಿ ಬಟ್ಟೆ ಒಗೆಯುವುದು ಆದರೆ ಒಣಗಿಸುವುದು ತುಂಬಾ ಕಷ್ಟ.

ಮಳೆಯಲ್ಲಿ ಒದ್ದೆಯಾದ ಬಟ್ಟೆಗಳನ್ನು ಒಣಗಿಸುವುದು ದೊಡ್ಡ ಕೆಲಸವೇ. ಸೂರ್ಯನ ಕಿರಣಗಳಂತೂ ಬಟ್ಟೆಗಳ ಮೇಲೆ ಬೀಳುವುದೇ ಇ್ಲಲ. ಈ ಸಮಯದಲ್ಲಿ ಬಟ್ಟೆಗಳಿಂದ ಕೂಡ ವಾಸನೆ ಬರುತ್ತದೆ. ಮಳೆಗಾಲದಲ್ಲಿ ಒದ್ದೆ ಬಟ್ಟೆ ಬಳಸಿದರೆ ಫಂಗಲ್ ಸೋಂಕಿನ ಭಯವೂ ಇರುತ್ತದೆ. ಬಟ್ಟೆಯ ತೇವಾಂಶವನ್ನು ನೀವು ತೆಗೆದುಹಾಕಲು ಸಹಾಯ ಮಾಡುವ ಕೆಲವು ಸುಲಭವಾದ ಸಲಹೆಗಳು ಇಲ್ಲಿವೆ.

ಬಟ್ಟೆಗಳನ್ನು ಒಣಗಿಸಲು ಸುಲಭವಾದ ಮಾರ್ಗಗಳು
1. ಮಳೆಗಾಲದ ಸಮಯದಲ್ಲಿ ಬಟ್ಟೆಗಳನ್ನು ಒಣಗಿಸುವ ಈ ಕಷ್ಟಕರ ಕೆಲಸವನ್ನು ಪೂರ್ಣಗೊಳಿಸಲು, ಮನೆಯಲ್ಲಿ ಬಟ್ಟೆ ಸ್ಟ್ಯಾಂಡ್ ಅನ್ನು ಇರಿಸಿ. ನೀವು ಸುಲಭವಾಗಿ ಬಟ್ಟೆಗಳನ್ನು ಒಣಗಿಸಬಹುದು. ಸ್ಟ್ಯಾಂಡ್ ಸಾಗಿಸಲು ಕೂಡ ಸುಲಭವಾಗುವುದು ಇದರಲ್ಲಿ ಬಟ್ಟೆಗಳನ್ನು ಹರಡಿ ಮನೆಯೊಳಗೆ ಫ್ಯಾನಿನ ಕೆಳಗೆ ಇಟ್ಟರೆ ಬಟ್ಟೆ ಬೇಗ ಒಣಗುತ್ತದೆ.

2. ನಿಮ್ಮ ಮನೆಯಲ್ಲಿ ಎಸಿ (ಏರ್ ಕಂಡಿಷನರ್) ಇದ್ದರೆ, ಅದರ ಹೊರ ಘಟಕವನ್ನು ಬಳಸಿ ಬಟ್ಟೆಗಳನ್ನು ಒಣಗಿಸಬಹುದು. ನೀವು ಮಾಡಬೇಕಾಗಿರುವುದು ಬಟ್ಟೆಗಳನ್ನು ಎಸಿಯ ಹೊರ ಘಟಕದ ಕಡೆಗೆ ಇಡುವುದು.

3. ಈ ಸಮಯದಲ್ಲಿ ನೀವು ಬಟ್ಟೆಗಳನ್ನು ಸರಿಯಾಗಿ ಹಿಂಡಲು ಮರೆಯಬೇಡಿ.

4. ಇಸ್ತ್ರಿ ಮಾಡಿ
ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ಬಟ್ಟೆ ಸಂಪೂರ್ಣವಾಗಿ ಒಣಗಿದ ನಂತರ ಇಸ್ತ್ರಿ ಮಾಡುತ್ತೇವೆ. ಆದರೆ ಮಳೆಯಲ್ಲಿ ಬಟ್ಟೆಗಳನ್ನು ಒಣಗಿಸುವಾಗ ಇಸ್ತ್ರಿಯನ್ನು ಬಳಸುವುದು ಸುಲಭವಾದ ಮಾರ್ಗವಾಗಿದೆ. ಇದರ ಬಳಕೆಯು ಉಳಿದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಜೀನ್ಸ್ ಅಥವಾ ಟೀಸ್ ನಂತಹ ನಿಮ್ಮ ಬಟ್ಟೆಗಳ ದಪ್ಪ ಭಾಗಗಳಲ್ಲಿ ತೇವಾಂಶವಿದೆ ಎಂದು ನೀವು ಕಂಡುಕೊಂಡರೆ, ನೀವು ನಿಜವಾಗಿಯೂ ಅವುಗಳನ್ನು ಇಸ್ತ್ರಿ ಮಾಡಬಹುದು ಮತ್ತು ಸುಲಭವಾಗಿ ಒಣಗಿಸಬಹುದು.

5. ಹೇರ್ ಡ್ರೈಯರ್ ಬಳಸಿ
ನಿಮ್ಮ ಮನೆಯಲ್ಲಿ ಹೇರ್ ಡ್ರೈಯರ್ ಇದ್ದರೆ ಮತ್ತು ನೀವು ಎಲ್ಲೋ ಹೊರಗೆ ಹೋಗುತ್ತಿದ್ದರೆ ಮತ್ತು ಆದ್ಯತೆಯ ಬಟ್ಟೆಗಳು ಒಣಗಲು ಕಾಯುತ್ತಿದ್ದರೆ, ನೀವು ಬಟ್ಟೆಗಳನ್ನು ಒಣಗಿಸಲು ಹೇರ್ ಡ್ರೈಯರ್ ಅನ್ನು ಬಳಸಬಹುದು. ಹೌದು, ಹೇರ್ ಡ್ರೈಯರ್ ಅನ್ನು ಮಳೆಗಾಲದಲ್ಲಿ ಒಣಗಿಸಲು ಬಳಸಬಹುದು ಏಕೆಂದರೆ ಇದು ಬಳಸಲು ಸುಲಭ ಮತ್ತು ಪರಿಣಾಮಕಾರಿಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:37 am, Wed, 12 October 22