World Biriyani Day 2024 : ತಲಚೇರಿ ಚಿಕನ್ ಬಿರಿಯಾನಿ, ಮಾಡೋದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 05, 2024 | 1:36 PM

ಬಹುತೇಕರ ಫೇವರೆಟ್ ಫುಡ್ ಪಟ್ಟಿಯಲ್ಲಿ ಬಿರಿಯಾನಿಗೆ ಮೊದಲ ಆದ್ಯತೆ. ಭಾರತದಲ್ಲಿ ವಿವಿಧ ಬಗೆಯ ಬಿರಿಯಾನಿ ಲಭ್ಯವಿದ್ದು ಕೇರಳದ ತಲಚೇರಿ ಬಿರಿಯಾನಿಯೂ ಅದ್ಭುತ ಘಮದೊಂದಿಗೆ ರುಚಿಯೂ ವಿಭಿನ್ನವಾಗಿರುತ್ತದೆ. ವಿಶೇಷವಾಗಿ ಇದಕ್ಕೆ ಖೈಮಾ/ಜೀರಾಕಸಲಾ ಅಕ್ಕಿಯಿಂದ ಅನ್ನವನ್ನು ತಯಾರಿಸಿ ಬಿರಿಯಾನಿ ಮಾಡಲಾಗುತ್ತದೆ. ಹಾಗಾದ್ರೆ ತಲಚೇರಿ ಚಿಕನ್ ಬಿರಿಯಾನಿಯನ್ನು ಮಾಡುವ ರೆಸಿಪಿಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

World Biriyani Day 2024 : ತಲಚೇರಿ ಚಿಕನ್ ಬಿರಿಯಾನಿ, ಮಾಡೋದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಹೆಚ್ಚಿನ ಆಹಾರ ಪ್ರಿಯರಲ್ಲಿ ನಿಮ್ಮ ಇಷ್ಟದ ತಆಹಾರ ಯಾವುದೆಂದು ಕೇಳಿದರೆ, ಬಿರಿಯಾನಿಯ ಹೆಸರೇ ಮೊದಲಿರುತ್ತದೆ. ಸ್ವಾದಿಷ್ಟವಾದ ಬಿರಿಯಾನಿಯನ್ನೊಮ್ಮೆ ಸವಿಯಬೇಕೆಂದರೆ ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿದರೆ ಸಾಕು. ಅದಲ್ಲದೇ, ನೋಡಿದರೇನೇ ತಿನ್ನಬೇಕು ಎನಿಸುವ ಬಿರಿಯಾನಿಯಲ್ಲಿ ಕೇರಳದ ತಲಚೇರಿಯ ಚಿಕನ್ ಬಿರಿಯಾನಿ ಕೂಡ ಒಂದು. ಗೋಡಂಬಿ, ಒಣದ್ರಾಕ್ಷಿ, ಸೋಂಪು ಕಾಳಿನೊಂದಿಗೆ ಘಮವು ಮೂಗಿಗೆ ಬಡಿಯುತ್ತಿದ್ದಂತೆ ಸವಿಯದೇ ಇರಲಾಗದು.

ತಲಚೇರಿ ಚಿಕನ್ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು

* ಚಿಕನ್

* ಬಿರಿಯಾನಿ ಅಕ್ಕಿ

* ಒಂದು ಕಪ್ ತುಪ್ಪ

* ಕಡಲೆ ಬೀಜ

* ಈರುಳ್ಳಿ

* ಎರಡು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್

* ಒಂದು ಚಮಚ ಅರಶಿಣ

* ಎರಡು ಚಮಚ ಮೆಣಸಿನ ಪುಡಿ

* ಎರಡು ಚಮಚ ನಿಂಬೆರಸ

* ಹಸಿಮೆಣಸು

* ಟೊಮೇಟೊ

* ಕರಿಬೇವಿನ ಎಲೆ

* ಕೊತ್ತಂಬರಿ ಸೊಪ್ಪು

* ಒಂದು ಕಪ್ ಎಣ್ಣೆ

* ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಮಂಗಳೂರಿನ ಚಿಕನ್ ಬ್ಯಾರಿ ಬಿರಿಯಾನಿ ಆರೋಗ್ಯ ಹೆಚ್ಚಿಸುತ್ತೆ! ಇದನ್ನು ಮಾಡುವುದು ಹೇಗೆ ?

ತಲಚೇರಿ ಚಿಕನ್ ಬಿರಿಯಾನಿ ಮಾಡುವ ವಿಧಾನ

* ಮೊದಲಿಗೆ ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ಕೆಂಪು ಮೆಣಸಿನ ಪುಡಿ ಅರಶಿನ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇಡಿ.

* ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ ಹತ್ತು ನಿಮಿಷಗಳವರೆಗೆ ಚಿಕನ್ ತುಂಡುಗಳನ್ನು ಹುರಿದುಕೊಂಡು ಪಕ್ಕಕ್ಕಿಡಿ.

* ಈ ಎಣ್ಣೆಯಲ್ಲಿ ಕತ್ತರಿಸಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಟೊಮೇಟೊ ಮತ್ತು ಹಸಿಮೆಣಸು, ಉಪ್ಪು ಹಾಕಿ ಮಧ್ಯಮ ಉರಿಯಲ್ಲಿ ಮೂರು ನಾಲ್ಕು ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

* ಆ ಬಳಿಕ ಇದಕ್ಕೆ ಮೆಣಸಿನ ಪೇಸ್ಟ್, ಅರಶಿನ, ಕರಿಬೇವಿನೆಲೆ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಫ್ರೈ ಮಾಡಿಕೊಳ್ಳಿ.

* ಈಗಾಗಲೇ ಹುರಿದಿಟ್ಟ ಚಿಕನ್ ಅನ್ನು ಸೇರಿಸಿ ಒಂದೆರಡು ಕಪ್ ನೀರು ಹಾಕಿ ಮಧ್ಯಮ ಉರಿಯಲ್ಲಿ ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ.

* ಇನ್ನೊಂದು ಪಾತ್ರೆಯಲ್ಲಿ ಒಂದೆರಡು ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಟ್ಟುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ. ಈ ಕಡಲೆ ಬೀಜವನ್ನು ತುಪ್ಪದಲ್ಲಿ ಹುರಿದುಕೊಳ್ಳಿ.

* ಒಂದು ದೊಡ್ಡ ಪಾತ್ರೆಗೆ ಬಿರಿಯಾನಿ ಅಕ್ಕಿಯನ್ನು ಸೇರಿಸಿ ಒಂದೆರಡು ನಿಮಿಷ ಫ್ರೈ ಮಾಡಿಕೊಂಡು ನೀರು ಸೇರಿಸಿ ಹತ್ತು ನಿಮಿಷ ಬೇಯಲು ಬಿಡಿ.

* ಒಂದು ಪಾತ್ರೆಯನ್ನು ತೆಗೆದುಕೊಂಡು ಈಗಾಗಲೇ ಚಿಕನ್ ಪದಾರ್ಥದ ಪದರಗಳನ್ನು ಮಾಡಿಕೊಳ್ಳಿ.

* ಅದರ ಮೇಲೆ ಅನ್ನವನ್ನು ಹಾಕಿ ಹೀಗೆ ಒಂದರ ಮೇಲೆ ಒಂದರಂತೆ ಪದರಗಳನ್ನು ಮಾಡುತ್ತಾ ಹೋಗಿ, ಕೊನೆಗೆ ಮುಚ್ಚಳ ಮುಚ್ಚಿ ಹತ್ತು ನಿಮಿಷಗಳ ಕಾಲ ಬೇಯಿಸಿದರೆ ರುಚಿ ರುಚಿಕರವಾದ ಕೇರಳ ಶೈಲಿಯ ತಲಚೇರಿ ಬಿರಿಯಾನಿ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ