World Chocolate Day 2024: ಚಾಕೊಲೇಟ್ ಸೇವನೆಯಿಂದ ಹೃದಯಾಘಾತ, ಕ್ಯಾನ್ಸರ್ ತಡೆಯಬಹುದು
ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಅಲ್ಲವೋ? ತಜ್ಞರ ಪ್ರಕಾರ ನಿಯತವಾಗಿ ತಿಂದರೆ ಇವು ಕೆಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತದೆ. ಆದರೆ ನಾವು ಎಷ್ಟು ತಿನ್ನುತ್ತೇವೆ ಎಂಬುದು ಮಾತ್ರ ಮುಖ್ಯವಾಗಿರುತ್ತದೆ. ಇದಕ್ಕೆ ಪೂರಕವೆಂಬಂತೆ ಚಾಕೊಲೇಟ್ ಪ್ರೀಯರಿಗಾಗಿ ಜು. 7ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ, ಚಾಕೊಲೇಟ್ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಚಾಕೊಲೇಟ್ ತಿನ್ನದವರು ಇದ್ದಾರಾ? ತುಂಬಾ ವಿರಳ. ಒಂದಲ್ಲಾ ಒಂದು ರೀತಿಯ ಚಾಕೊಲೇಟ್ ಇಷ್ಟ ಪಡುವವರು ಇದ್ದೇ ಇರುತ್ತಾರೆ. ಆದರೆ ಕೆಲವರು ಹಲ್ಲು ಹುಳುಕಾಗುತ್ತದೆ ಎನ್ನುವ ಕಾರಣಕ್ಕೋ ಅಥವಾ ಇನ್ನಿತರ ನಾನಾ ಕಾರಣಗಳಿಂದ ಚಾಕೊಲೇಟ್ ಸೇವನೆ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಹಾಗಾದರೆ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಅಲ್ಲವೋ ಎಂಬ ಪ್ರಶ್ನೆ ಹುಟ್ಟುಕೊಳ್ಳುತ್ತದೆ. ತಜ್ಞರ ಪ್ರಕಾರ ನಿಯತವಾಗಿ ತಿಂದರೆ ಇವು ಕೆಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತದೆ. ಆದರೆ ನಾವು ಎಷ್ಟು ತಿನ್ನುತ್ತೇವೆ ಎಂಬುದು ಮಾತ್ರ ಮುಖ್ಯವಾಗಿರುತ್ತದೆ. ಇದಕ್ಕೆ ಪೂರಕವೆಂಬಂತೆ ಚಾಕೊಲೇಟ್ ಪ್ರೀಯರಿಗಾಗಿ ಜು. 7ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ಕೆಲವು ವಿಶೇಷ ಮಾಹಿತಿಗಳನ್ನು ತಿಳಿದುಕೊಳ್ಳೋಣ.
ಚಾಕೊಲೇಟ್ ತನ್ನಲ್ಲಿ ಉತ್ತಮ ರುಚಿಯನ್ನಷ್ಟೇ ಇಟ್ಟುಕೊಂಡಿಲ್ಲ ಬದಲಾಗಿ ಅನೇಕ ಪೌಷ್ಟಿಕಾಂಶದ ಗುಣಗಳನ್ನೂ ಹೊಂದಿದೆ. ಇದರಿಂದ ಅನೇಕ ರೋಗಗಳನ್ನು ದೂರವಿಡಬಹುದು ಎಂದು ಆರೋಗ್ಯ ಪರಿಣತರು ಹೇಳುತ್ತಾರೆ. ಹಾಗಾದರೆ ಯಾವ ರೋಗಗಳಿಗೆ ಚಾಕೊಲೇಟ್ ಮದ್ದು. ಯಾರು ಸೇವನೆ ಮಾಡಿದರೆ ಉತ್ತಮ ಎಂಬುದರ ಬಗೆಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
*ಅನೇಕ ವರದಿಗಳ ಪ್ರಕಾರ ಡಾರ್ಕ್ ಚಾಕೊಲೇಟ್ ಹೃದಯಾಘಾತವನ್ನು ತಡೆಯಲು ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
*ಚಾಕೊಲೇಟ್ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದರಿಂದ ಅಜೀರ್ಣ ಸಮಸ್ಯೆ, ಮಲಬದ್ಧತೆಯೂ ಕೂಡ ನಿವಾರಣೆಯಾಗುತ್ತದೆ. ಇದೆಲ್ಲದರ ಜೊತೆಗೆ ಕರುಳಿಗೆ ಒಳ್ಳೆಯದು ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
*ಚಾಕೊಲೇಟ್ ಚರ್ಮದ ಕಾಂತಿ ಹೆಚ್ಚಿಸಲು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿ ಇದು ಕಾಂತಿಯುತ ಚರ್ಮಕ್ಕೆ ಒಳ್ಳೆಯದು. ಅಲ್ಲದೆ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
*ಚಾಕೊಲೇಟ್ ನಿಮ್ಮ ಮಾನಸಿಕ ಆರೋಗ್ಯವನ್ನೂ ಚೆನ್ನಾಗಿಡುತ್ತದೆ. ಜೊತೆಗೆ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ.
*ಮಧುಮೇಹ ಹೆಚ್ಚಾಗಿರುವವರು ಚಾಕೊಲೇಟ್ ಸೇವನೆ ಮಾಡಬಾರದು ಎನ್ನುತ್ತಾರೆ ಆದರೆ ತಜ್ಞರ ಪ್ರಕಾರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದಕ್ಕೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದಕ್ಕೆ ಡಾರ್ಕ್ ಚಾಕೊಲೇಟ್ ನೆರವಾಗುತ್ತದೆ.
ಇದನ್ನೂ ಓದಿ: ಹಾವು, ಚೇಳು ಕಚ್ಚಿದಾಗ ಕಳಲೆಯ ರಸವೇ ಉತ್ತಮ ಮದ್ದು, ಇದರಲ್ಲಿದೆ ಹಲವು ಆರೋಗ್ಯ ಭಾಗ್ಯ
*ಡಾರ್ಕ್ ಚಾಕೊಲೇಟ್ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.
ಆದರೆ ಚಾಕೊಲೇಟ್ ಸೇವನೆ ಮಿತವಾಗಿರಬೇಕು. ಅನೇಕ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದರೆ ವೈದ್ಯರ ಸಲಹೆ ತೆಗೆದುಕೊಂಡು, ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಅದರ ಹೊರತಾಗಿ ಮಿತವಾಗಿ ಚಾಕೊಲೇಟ್ ಸೇವನೆ ಮಾಡುವುದು ಒಳ್ಳೆಯದು. ಇದರಿಂದ ಯಾವುದೇ ಅಪಾಯವಿಲ್ಲ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ