ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 02, 2025 | 2:29 PM

ಹೆಣ್ಣು ಮಕ್ಕಳಿಗೆ ಮೇಕಪ್ ಮಾಡಿಕೊಳ್ಳುವುದು ಎಂದರೆ ಎಲ್ಲಿಲ್ಲದ ಖುಷಿ. ಅದೇ ಮೇಕಪ್ ತೆಗೆಯೋದು ಅಷ್ಟೇ ತ್ರಾಸದಾಯಕ ಕೆಲಸ. ಮುಖಕ್ಕೆ ಹಚ್ಚಿದ ತೆಗೆಯುವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ತ್ವಚೆಯೇ ಹಾಳಾಗುತ್ತದೆ. ಕೆಲವೊಮ್ಮೆ ಮುಖದಲ್ಲಿ ಮೊಡವೆಗಳು, ಅಲರ್ಜಿ ಸೇರಿದಂತೆ ಇನ್ನಿತ್ತರ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ರಾತ್ರಿ ಮಲಗುವ ಮುನ್ನ ಚರ್ಮಕ್ಕೆ ಹಾನಿಯಾಗದಂತೆ ಮೇಕಪ್ ತೆಗೆಯುವುದು ಬಹಳ ಮುಖ್ಯ. ಹಾಗಾದ್ರೆ ಆರೋಗ್ಯಕರ ವಿಧಾನದ ಮೂಲಕ ಮೇಕಪ್ ತೆಗೆಯುವ ಕುರಿತಾದ ಮಾಹಿತಿ ಇಲ್ಲಿದೆ.

ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ಮದುವೆ ಸೇರಿದಂತೆ ಇನ್ನಿತ್ತರ ಸಮಾರಂಭಗಳಲ್ಲಿ ಮೇಕಪ್ ಇಲ್ಲದೇ ಹೋದರೆ ಹೇಗೆ ಅಲ್ಲವೇ. ಕೆಲವರಂತೂ ಮೇಕಪ್ ಇಲ್ಲದೇ ಹೊರಗಡೆ ಕಾಲಿಡುವುದೇ ಇಲ್ಲ. ಆದರೆ ಮೇಕಪ್ ಬಳಸುವ ಮುನ್ನ ಅದನ್ನು ತೆಗೆಯುವ ಬಗ್ಗೆಯೂ ಗೊತ್ತಿರಲೇಬೇಕು. ದೀರ್ಘ ಸಮಯ ಮುಖದ ಮೇಲೆ ಮೇಕಪನ್ನು ಬಿಡುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಂತ ಮೇಕಪ್ ತೆಗೆಯುವುದು ಹೇಳುವಷ್ಟು ಸುಲಭವಲ್ಲ. ಸರಿಯಾದ ರೀತಿಯಲ್ಲಿ ಮೇಕಪ್ ರಿಮೂವ್ ಮಾಡಲು ಈ ಕೆಲವು ಸಲಹೆಗಳನ್ನು ಅನುಸರಿಸಿ.

  • ಕ್ಲಿನ್ಸಿಂಗ್ ಎಣ್ಣೆ : ಶುದ್ದೀಕರಿಸುವ ಎಣ್ಣೆ ಅಥವಾ ಕ್ಲಿನ್ಸಿಂಗ್ ಎಣ್ಣೆಯಿಂದ ಮುಖದ ಮೇಲಿನ ಮೇಕಪ್ ಸ್ವಚ್ಛಗೊಳಿಸಬಹುದು. ಕ್ಲಿನ್ಸಿಂಗ್ ಎಣ್ಣೆಯು ಮೊಂಡುತನದ ಮೇಕಪ್ ತೆಗೆದು ಹಾಕುವುದಲ್ಲದೆ, ರಾಸಾಯನಿಕ ವಸ್ತುಗಳಿಂದ ಕೂಡಿರುವ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.
  • ಮೇಕಪ್ ರಿಮೂವರ್ : ಮಾರುಕಟ್ಟೆಯಲ್ಲಿ ಸಿಗುವ ಈ ದ್ರವ ರೂಪದ ಮೇಕಪ್ ರಿಮೂವರ್ ತೇವಾಂಶವಿರುವ ಕಾರಣ ಸುಲಭವಾಗಿ ಮೇಕಪ್ ತೆಗೆಯಬಹುದು. ಇದು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡಿ ಯಾವುದೇ ಜಿಡ್ಡುಗಳಿಲ್ಲದಂತೆ ಮುಖವನ್ನು ಸ್ವಚ್ಛಗೊಳಿಸುತ್ತದೆ.
  • ಮೇಕಪ್ ರಿಮೂವರ್ ವೈಪ್ಸ್ : ಮೇಕಪ್ ತೆಗೆಯಲು ಮಾರುಕಟ್ಟೆಯಲ್ಲಿ ಸಿಗುವ ವೈಪರ್ ಬಳಸಬಹುದು. ಈ ಮೇಕಪ್ ರಿಮೂವಿಂಗ್ ವೈಪರ್ ಚರ್ಮದ ಮೇಲಿರುವ ಕೊಳೆಯನ್ನು ತೆಗೆದು ಹಾಕಿ, ಚರ್ಮದ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ.
  • ಬಾದಾಮಿ ಎಣ್ಣೆ : ಮೇಕಪ್ ತೆಗೆಯಲು ಅಡುಗೆ ಮನೆಯಲ್ಲಿರುವ ಈ ವಸ್ತುಗಳು ಕೂಡ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ಮನೆಯಲ್ಲಿ ನೆಲ್ಲಿಕಾಯಿ ಎಣ್ಣೆ ಹಾಗೂ ಬಾದಾಮಿ ಎಣ್ಣೆಯಿದ್ದರೆ ಆದರಿಂದ ಮೇಕಪ್ ತೆಗೆಯಬಹುದು. ಹತ್ತಿಯುಂಡೆಯನ್ನು ಎಣ್ಣೆಗೆ ಅದ್ದಿ ಮುಖಕ್ಕೆ ಉಜ್ಜಿಕೊಳ್ಳುವ ಮೇಕಪ್ ರಿಮೂವ್ ಮಾಡಬಹುದು.
  • ಕೊಬ್ಬರಿ ಎಣ್ಣೆ : ಶುದ್ಧ ಕೊಬ್ಬರಿ ಎಣ್ಣೆ ತ್ವಚೆಯು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಮೇಕಪ್ ಹಚ್ಚಿದ್ದರೆ ತೆಗೆಯಲು ತೆಂಗಿನ ಎಣ್ಣೆ ಬಳಸಬಹುದು. ಇದು ತ್ವಚೆಯ ಮೇಲಿನ ರಾಸಾಯನಿಕ ಹಾಗೂ ಅಂಟಿನಂತಹ ಉತ್ಪನ್ನಗಳು ತೆಗೆದು ಹಾಕಿ ಚರ್ಮದ ಆರೋಗ್ಯ ಕಾಪಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ