Health Tips: ಮೊಟ್ಟೆಯ ಹಳದಿ ಭಾಗ ತಿಂದರೆ ದೇಹದ ಕೊಬ್ಬು ಹೆಚ್ಚುತ್ತದೆಯೇ? ತಜ್ಞರು ಹೇಳುವುದೇನು?

|

Updated on: Apr 20, 2024 | 5:45 PM

ಮೊಟ್ಟೆಯ ಹಳದಿ ಲೋಳೆಯು ಪೋಷಕಾಂಶಗಳಿಂದ ಕೂಡಿದೆ. ಮೊಟ್ಟೆಯ ಮೇಲ್ಭಾಗ ಮಾತ್ರವಲ್ಲ, ಅದರ ಹಳದಿ ಭಾಗ, ಅಂದರೆ ಹಳದಿ ಲೋಳೆಯಲ್ಲಿ ಸತು ಮತ್ತು ರಂಜಕ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಖನಿಜಗಳಿವೆ. ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ ಮೊಟ್ಟೆ ತಿನ್ನುವುದು ತುಂಬಾ ಪ್ರಯೋಜನಕಾರಿ.

Health Tips: ಮೊಟ್ಟೆಯ ಹಳದಿ ಭಾಗ ತಿಂದರೆ ದೇಹದ ಕೊಬ್ಬು ಹೆಚ್ಚುತ್ತದೆಯೇ? ತಜ್ಞರು ಹೇಳುವುದೇನು?
Follow us on

ಬೆಳಿಗ್ಗೆ ಮೊಟ್ಟೆ ತಿನ್ನುವುದು ಉತ್ತಮ ಉಪಹಾರ. ಆದಾಗ್ಯೂ, ಅನೇಕ ಜನರು ಮೊಟ್ಟೆಯ ಹಳದಿ ಭಾಗವನ್ನು ತಿನ್ನಲು ಹೆದರುತ್ತಾರೆ. ಯಾಕೆಂದರೆ ಮೊಟ್ಟೆಯ ಹಳದಿ ಭಾಗ ತಿಂದರೆ ದೇಹದ ಕೊಬ್ಬು ಹೆಚ್ಚುತ್ತದೆ ಎಂದು ಸಾಕಷ್ಟು ಜನರು ನಂಬಿದ್ದಾರೆ. ಆದರೆ ಇದು ತಪ್ಪು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ಮೊಟ್ಟೆಯ ಹಳದಿ ಭಾಗ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಅನ್ನುತಾರೆ ತಜ್ಞರು.

ಮೊಟ್ಟೆ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ವಿಟಮಿನ್ ಎ, ಡಿ, ಅಯೋಡಿನ್, ಸೆಲೆನಿಯಮ್, ಬಯೋಟಿನ್, ರಂಜಕ, ಸತು ಮುಂತಾದ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಸ್ನಾಯುಗಳನ್ನು ಬಲಪಡಿಸುವುದರ ಹೊರತಾಗಿ, ಮೊಟ್ಟೆಗಳನ್ನು ತಿನ್ನುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಇದು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: Rose Facepack: ಹೊಳೆಯುವ ತ್ವಚೆಗೆ ಗುಲಾಬಿ ಹೂವಿನ ಫೇಸ್​ಪ್ಯಾಕ್ ಹಚ್ಚಿ ನೋಡಿ

ಮೊಟ್ಟೆಯ ಹಳದಿ ಲೋಳೆಯು ಪೋಷಕಾಂಶಗಳಿಂದ ಕೂಡಿದೆ. ಮೊಟ್ಟೆಯ ಮೇಲ್ಭಾಗ ಮಾತ್ರವಲ್ಲ, ಅದರ ಹಳದಿ ಭಾಗ, ಅಂದರೆ ಹಳದಿ ಲೋಳೆಯಲ್ಲಿ ಸತು ಮತ್ತು ರಂಜಕ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಖನಿಜಗಳಿವೆ. ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ ಮೊಟ್ಟೆ ತಿನ್ನುವುದು ತುಂಬಾ ಪ್ರಯೋಜನಕಾರಿ. ಹಾಗೆಯೇ ಮೊಟ್ಟೆಯ ಹಳದಿಯಲ್ಲಿ ನಮಗೆ ಬೇಕಾದ ಹತ್ತು ಬಗೆಯ ಪೋಷಕಾಂಶಗಳಿವೆ ಎನ್ನುತ್ತಾರೆ ತಜ್ಞರು. ದಿನಕ್ಕೆ ಒಂದು ಮೊಟ್ಟೆ ತಿಂದರೆ ನಮ್ಮ ದೇಹಕ್ಕೆ ಶೇ.15ರಷ್ಟು ಪೋಷಕಾಂಶಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 2 ರಿಂದ 3 ಮೊಟ್ಟೆಗಳನ್ನು ತಿನ್ನಬಹುದು. ಆದರೆ ಇದು ದೇಹದ ತೂಕ, ವಯಸ್ಸು ಮತ್ತು ಜೀರ್ಣಕಾರಿ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಮೊಟ್ಟೆಗಳು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ