Eid-ul-Adha 2024 Wishes : ನಿಮ್ಮ ಪ್ರೀತಿ ಪಾತ್ರರಿಗೆ ಬಕ್ರೀದ್ ಹಬ್ಬಕ್ಕೆ ಹೀಗೆ ಶುಭಾಶಯ ತಿಳಿಸಿ
ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನವನ್ನು ಪ್ರವಾದಿ ಇಸ್ಮಾಯೀಲರು ನೀಡಿದ ಬಲಿದಾನದ ರೂಪದಲ್ಲಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಸ್ನೇಹಿತರು ಮತ್ತು ಕುಟುಂಬಗಳಿಗೆ ಶುಭ ಹಾರೈಸಲು ಕೆಲ ಶುಭಾಶಯಗಳು ಹಾಗೂ ಸಂದೇಶಗಳು ಇಲ್ಲಿವೆ.
ಮುಸ್ಲಿಂ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು ಈ ಬಕ್ರೀದ್. ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗನ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಈದ್ ಉಲ್ ಅಧಾವನ್ನು ಆಚರಿಸಲಾಗುತ್ತದೆ. ಈ ವರ್ಷ ಭಾರತದಲ್ಲಿ ಈದ್ ಉಲ್ ಅಧಾ ಜೂನ್ 17 ರಂದು ಆಚರಿಸಲಾಗುತ್ತಿದೆ. ಈ ದಿನದಂದು ಗಂಡು ಮೇಕೆಯನ್ನು ದೇವರಿಗೆ ಬಲಿ ನೀಡುವ ಆಚರಣೆಯಿದೆ. ಅಷ್ಟೇ ಅಲ್ಲದೇ, ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಕುಟುಂಬದವರೊಂದಿಗೆ ಸೇರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ಸಡಗರ ದಿನದಂದು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ವಿಶೇಷವಾಗಿ ಶುಭಾಶಯಗಳನ್ನು ತಿಳಿಸಬಹುದು.
- ಈದ್ ನಿಮ್ಮ ಬಾಳಲ್ಲಿ ಸಂತೋಷ ತುಂಬಲಿ, ಕಷ್ಟಗಳು ದೂರವಾಗಿ ಜೀವನದಲ್ಲಿ ಏಳಿಗೆಯನ್ನೇ ಕಾಣುವಂತಾಗಲಿ. ನೀವು ಬಯಸಿದ ಗುರಿಯನ್ನು ಮುಟ್ಟುವಂತಾಗಲಿ ಈದ್ ಮುಬಾರಕ್.
- ಈದ್ ಮುಬಾರಕ್! ಈ ಕ್ಷಣವನ್ನು ಸದುಪಯೋಗಪಡಿಸಿಕೊಂಡು ಸಂತೋಷವಾಗಿರಿ. ಸಂತೋಷದ ಜೀವನವನ್ನು ಮಾಡಲು ಬಹಳ ಕಡಿಮೆ ಸಮಯವಿದೆ. ಪ್ರತಿ ಘಳಿಗೆಯೂ ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.
- ಅಲ್ಲಾಹ್ ಯಾವಾಗಲೂ ನಿಮಗೆ ಮಾರ್ಗದರ್ಶನ ನೀಡಿ ಸರಿಯಾದ ಮಾರ್ಗದಲ್ಲಿ ಮುನ್ನೆಡಸಲಿ, ಬಕ್ರೀದ್ ಹಬ್ಬದ ಶುಭಾಶಯಗಳು.
- ಅಲ್ಲಾ, ತ್ಯಾಗ ಬಲಿದಾನವನ್ನು ಸ್ವೀಕರಿಸಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲಿ. ಬದುಕಿನ ಆಸೆಗಳನ್ನು ಆದಷ್ಟು ಬೇಗನೆ ನೆರವೇರಲಿ. ಕುಟುಂಬದ ತುಂಬೆಲ್ಲಾ ನಗುವೇ ತುಂಬಿರಲಿ. ನೀವು ಹಾಗೂ ನಿಮ್ಮ ಕುಟುಂಬ ಸದಾ ಸಂತೋಷದಿಂದಿರಿ. ಈದ್ ಮುಬಾರಕ್!
- ಸೂರ್ಯನ ಕಿರಣಗಳು, ನಕ್ಷತ್ರಗಳ ವೈಭವ, ಚಂದ್ರನ ಬೆಳಕು, ನಿಮ್ಮ ಪ್ರೀತಿಪಾತ್ರರ ಪ್ರೀತಿಯಿಂದ ನೀವು ಪ್ರತಿ ಕ್ಷಣವೂ ಸಂತೋಷವಾಗಿರಿ. ಬಕ್ರೀದ್ ಹಬ್ಬದ ಶುಭಾಶಯಗಳು.
- ಈದ್ ಹಬ್ಬದ ಶುಭಾಶಯಗಳು, ಅಲ್ಲಾ.. ನಿಮ್ಮ ಬದುಕಿನಲ್ಲಿ ಸಂತೋಷ, ನೆಮ್ಮದಿ, ಐಶ್ವರ್ಯ ಕರುಣಿಸಲಿ ಎಂದು ಹಾರೈಸುತ್ತೇನೆ.
- ನಿಮ್ಮ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಅಲ್ಲಾಹನು ಸ್ವೀಕರಿಸಲಿ ಮತ್ತು ನಿಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಲಿ. ಬಕ್ರೀದ್ ಹಬ್ಬದ ಶುಭಾಶಯಗಳು.
- ಈ ವಿಶೇಷ ದಿನವು ನಿಮ್ಮನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹತ್ತಿರವಾಗಿಸಲಿ. ಏಕತೆ ಮತ್ತು ಸಹಾನುಭೂತಿಯ ಬಂಧವನ್ನು ಬಲಪಡಿಸಲಿ. ಈದ್ ಶುಭಾಶಯಗಳು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: