AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸಂಗಾತಿ ಯಾವಾಗ್ಲೂ ಎಮೋಷನಲ್ ಬ್ಲ್ಯಾಕ್​ಮೇಲ್ ಮಾಡ್ತಾರಾ? ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

Emotional Blackmail: ಪ್ರತಿಯೊಂದು ವಿಚಾರದಲ್ಲೂ ಸಂಗಾತಿ ನಿಮ್ಮನ್ನು ಬ್ಲ್ಯಾಕ್​ಮೇಲ್ ಮಾಡುತ್ತಿದ್ದರೆ ಅದು ನಿಮ್ಮ ಮಾನಸಿಕ ಆರೋಗ್ಯವನ್ನು ಹದಗೆಡಿಸಬಹುದು. ನೀವು ಆರ್ಥಿಕವಾಗಿ ಸದೃಢರಾಗಿ ಬೇರೆಯವರ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಿದರೆ ನೀವು ಜೀವನದಲ್ಲಿ ಸಂತೋಷವಾಗಿರಬಹುದು.

ನಿಮ್ಮ ಸಂಗಾತಿ ಯಾವಾಗ್ಲೂ ಎಮೋಷನಲ್ ಬ್ಲ್ಯಾಕ್​ಮೇಲ್ ಮಾಡ್ತಾರಾ? ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
ನಯನಾ ರಾಜೀವ್
|

Updated on: May 28, 2024 | 3:10 PM

Share

ನೀವು ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಜೀವನ ಪೂರ್ತಿ ಸಂಗಾತಿ ಜತೆಗೆ ಸಂತೋಷವಾಗಿಬಹುದು ಎಂಬುದು ನಿಜ, ಆದ್ರೆ ಎಲ್ಲಾ ವಿಚಾರಗಳಲ್ಲಿ ಅಲ್ಲ. ನೀವು ಒತ್ತಾಯಪೂರ್ವಕವಾಗಿ ಹೊಂದಾಣಿಕೆ ಮಾಡಿಕೊಂಡಲ್ಲಿ ಒಂದಲ್ಲಾ ಒಂದು ದಿನ ನಿಮ್ಮಲ್ಲಿರುವ ಭಾವನೆ ಚಿಮ್ಮುತ್ತದೆ ಆಗ ನಿಮ್ಮನ್ನು ನೀವು ನಿಯಂತ್ರಿಸುವುದು ಕಷ್ಟವಾಗಬಹುದು.

ಸಂಗಾತಿ ಹೇಳಿದ್ದೆಲ್ಲವನ್ನೂ ಸರಿ ಎಂದು ಹೇಳಿ ತಲೆ ಅಲ್ಲಾಡಿಸುವ ಅಗತ್ಯವಿಲ್ಲ, ಅವರು ಸರಿ ಇದ್ದಾಗ ಅವರು, ನೀವು ಸರಿ ಎಂದೆನಿಸಿದಾಗ ನೀವು ಮಾತನಾಡುವುದು ಉತ್ತಮ. ಇಬ್ಬರ ಹೊಂದಾಣಿಕೆ ಇಲ್ಲಿ ಮುಖ್ಯವಾಗುತ್ತದೆ. ಈ ಎಮೋಷನಲ್​ ಬ್ಲ್ಯಾಕ್​ಮೇಲ್​(Emotional Blackmail) ನಿಮ್ಮ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

ನಿಮ್ಮ ಕಾಳಜಿ ನೀವು ನೋಡಿಕೊಳ್ಳಿ ಇತರರ ಬಗ್ಗೆ ಚಿಂತಿಸುವ ಮೊದಲು ನಿಮ್ಮ ಬಗ್ಗೆ ನೀವು ಕಾಳಜಿ ಮಾಡುವುದು ಉತ್ತಮ. ಕೆಲವೊಮ್ಮೆ ಇಲ್ಲ ಆಗುವುದಿಲ್ಲ ಎಂದು ಹೇಳುವುದನ್ನೂ ಕಲಿಯಿರಿ.

ನಿಮ್ಮ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳಿ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾನೆ. ಅದನ್ನು ಜೀವನದಲ್ಲಿ ತ್ಯಾಗ ಮಾಡಲು ಸಾಧ್ಯವಿಲ್ಲ, ನಿಮ್ಮ ಆಸೆ, ಆಕಾಂಕ್ಷೆಗಳ ಮೇಲೆ ಕೇಂದ್ರೀಕರಿಸಿ, ನಿಮ್ಮ ಸಂಗಾತಿಕ ನಕಾರಾತ್ಮಕ ಮನೋಭಾವದಿಂದ ನಿಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬೇಡಿ. ಪ್ರತಿ ತಪ್ಪಿಗೆ ನಿಮ್ಮನ್ನು ದೂಷಿಸಬೇಡಿ.

ಮತ್ತಷ್ಟು ಓದಿ: Social media: ಯುವ ಜನತೆಯಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿರುವುದಕ್ಕೆ ಸಾಮಾಜಿಕ ಮಾಧ್ಯಮ ಕಾರಣವೇ?

ಸ್ವತಂತ್ರರಾಗಿ ನೀವು ಎಲ್ಲದಕ್ಕೂ ನಿಮ್ಮ ಸಂಗಾತಿಯ ಮೇಲೆ ಅವಲಂಬಿತರಾಗಿದ್ದಾಗ ಅವರು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಾ ಬಾರಿಯೂ ಆರೋಪಗಳು ನಿಮ್ಮ ಮೇಲೆ ಬಾರದಂತೆ ರಕ್ಷಿಸಿಕೊಳ್ಳಿ. ಆರ್ಥಿಕವಾಗಿ ಸ್ವತಂತ್ರರಾಗುವುದರಿಂದ ನಿಮ್ಮ ಜೀವನದಲ್ಲಿ ನೀವು ಸುಲಭವಾಗಿ ಸಣ್ಣ ನಿರ್ಧಾರಗಳನ್ನು ತೆಗದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಸಂಗಾತಿ ನಿಮಗೆ ಬ್ಲ್ಯಾಕ್​ ಮೇಲ್ ಮಾಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ನಿಮ್ಮ ಸಂಗಾತಿಯ ಮಿತಿಯನ್ನು ನೆನಪಿಸಿ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಘಟನೆಗಳು ನಡೆಯುತ್ತಿದ್ದಾಗ ನಿಮ್ಮ ಸಂಗಾತಿಯ ಮಿತಿಯನ್ನು ಒಮ್ಮೆ ನೆನಪಿಸಿ.

ನಿಮ್ಮ ಇಚ್ಛೆಗೆ ಪ್ರಾಮುಖ್ಯತೆ ನೀಡಿ ಪ್ರತಿ ಕೆಲಸಕ್ಕೂ ನಿಮ್ಮ ಸಂಗಾತಿಯಿಂದ ಅನುಮತಿ ತೆಗೆದುಕೊಳ್ಳುವುದರಿಂದ ಅವರ ಮೇಲೆ ಅವಲಂಬಿತವಾಗುತ್ತೀರಿ. ವ್ಯಕ್ತಿ ಸ್ವಂತ ಆಸೆ, ಆಕಾಂಕ್ಷೆಗಳನ್ನು ಮರೆತುಬಿಡುತ್ತೀರಿ. ನಿಮ್ಮ ಸಂಗಾತಿಯ ಇಚ್ಛೆಯ ಪ್ರಕಾರ ಪ್ರತಿಯೊಂದು ಕೆಲಸ ಮಾಡುವುದನ್ನು ನಿಲ್ಲಿಸಿ.

ಹೆಚ್ಚು ಹೊರೆ ಮಾಡಿಕೊಳ್ಳಬೇಡಿ ಪ್ರತಿಯೊಂದು ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೊರೆಯನ್ನು ಹೆಚ್ಚಿಸಿಕೊಳ್ಳಬೇಡಿ. ಆರೋಗ್ಯಕರವಾಗಿರಲು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು