Kannada News Lifestyle Emotional Maturity : Stay single until you find someone with these 8 signs of emotional maturity Kannada News
Emotional Maturity: ವ್ಯಕ್ತಿಯಲ್ಲಿ ಭಾವನಾತ್ಮಕ ಪ್ರಬುದ್ಧತೆಯ ಈ ನಡವಳಿಕೆ ಕಂಡು ಬಂದ್ರೆ ಮದ್ವೆಗೆ ಓಕೆ ಹೇಳ್ಬಿಡಿ
ಬದುಕಿಗೆ ಸೂಕ್ತ ಸಂಗಾತಿಯನ್ನು ಹುಡುಕಾಡುವಾಗ ಹೆಚ್ಚು ಗಮನ ವಹಿಸಬೇಕು. ಏಕಾಂಗಿಯಾಗಿದ್ದೇನೆ ಎಂದು ಕಣ್ಣು ಮುಚ್ಚಿಕೊಂಡು ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಸರಿಯಲ್ಲ. ಎಷ್ಟೋ ಬಾರಿ ಈ ಆಯ್ಕೆಯೇ ತಪ್ಪಾಗಿರಬಹುದು. ಹೀಗಾಗಿ ಸಂಗಾತಿಯ ಆಯ್ಕೆಯ ವೇಳೆ ಆ ವ್ಯಕ್ತಿಯಲ್ಲಿ ಭಾವನಾತ್ಮಕ ಪ್ರಬುದ್ಧತೆಯ ಈ ನಡವಳಿಕೆಗಳು ಇವೆಯೇ ಎಂದು ಗಮನಿಸುವುದು ಸೂಕ್ತ. ಲವ್ ಕನೆಕ್ಷನ್ ಬ್ಲಾಗ್‌ನ ಸಂಸ್ಥಾಪಕಿ ಹಾಗೂ ಸಂಬಂಧ ಪರಿಣಿತರಾಗಿರುವ ಟೀನಾ ಫೇ ಭಾವನಾತ್ಮಕ ಪ್ರಬುದ್ಧತೆಯಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಚಿಹ್ನೆಗಳ ಬಗ್ಗೆ ತಿಳಿಸಿದ್ದು ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಪ್ರತಿನಿತ್ಯ ವಿಭಿನ್ನ ಗುಣಸ್ವಭಾವ ಹಾಗೂ ವ್ಯಕ್ತಿತ್ವ ಹೊಂದಿರುವವ್ಯಕ್ತಿಗಳನ್ನು ಭೇಟಿಯಾಗುತೇವೆ. ಕೆಲವರು ಒಂದೇ ಭೇಟಿಗೆ ಇಷ್ಟವಾದರೆ, ಇನ್ನು ಕೆಲವರು ತಮ್ಮ ನಡವಳಿಕೆಯಿಂದಲೇ ದೂರ ಉಳಿಯುತ್ತಾರೆ. ಅದಲ್ಲದೆ ಕೆಲವರೂ ದೈಹಿಕವಾಗಿ ಬೆಳೆದಿದ್ದರೂ ಭಾವನಾತ್ಮಕ ಪ್ರಬುದ್ಧತೆಯೇ ಇರುವುದಿಲ್ಲ. ಆದರೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರಲ್ಲಿ ಭಾವನಾತ್ಮಕ ಪ್ರಬುದ್ಧತೆಯ ಈ ಎಂಟು ಚಿಹ್ನೆಗಳು ಇದೆಯೇ ಎಂದು ಗಮನಿಸುವುದು ಬಹಳ ಮುಖ್ಯವಂತೆ. ಭಾವನಾತ್ಮಕ ಪರಿಪಕ್ವತೆಯೂ ಸಂಬಂಧವನ್ನು ಉತ್ತಮವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.
ಭಾವನೆಗಳನ್ನು ನಿರ್ವಹಿಸುವುದು : ಭಾವನಾತ್ಮಕ ಪ್ರಬುದ್ಧತೆ ಹೊಂದಿರುವ ವ್ಯಕ್ತಿಗಳು ಕೆಲಸದ ಸ್ಥಳದಲ್ಲಾಗಲಿ ಅಥವಾ ಮನೆಯಲ್ಲಿ ಅಹಿತಕರವಾದ ಪರಿಸ್ಥಿತಿ ಏರ್ಪಟ್ಟರೆ, ಅದನ್ನು ಅರ್ಥ ಮಾಡಿಕೊಂಡು ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಯಾವುದೇ ಸನ್ನಿವೇಶ ಎದುರಾದರೂ ಶಾಂತವಾಗಿ ಎಲ್ಲವನ್ನು ನಿಭಾಯಿಸುವವರು ಭಾವನಾತ್ಮಕ ಪ್ರಬುದ್ಧರಾಗಿದ್ದಾರೆ ಎಂದರ್ಥ.
ಪರಾನುಭೂತಿ ತೋರುವುದು : ಭಾವನಾತ್ಮಕವಾಗಿ ಪ್ರಬುದ್ಧರಾಗಿರುವವರು ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅವರ ಭಾವನೆಗಳನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು ಸ್ಪಂದಿಸುವ ಗುಣವಿರುತ್ತದೆ. ಇಂತಹ ಗುಣ ನೀವು ಆಯ್ಕೆ ಮಾಡುವ ಸಂಗಾತಿಯಲ್ಲಿದೆಯೇ ಎಂದು ಗಮನಿಸುವುದು ಬಹಳ ಮುಖ್ಯ.
ಜವಾಬ್ದಾರಿಯನ್ನು ತೆಗೆದುಕೊಳ್ಳುವುದು : ಭಾವನಾತ್ಮಕವಾಗಿ ಪ್ರಬುದ್ಧ ಹೊಂದಿರುವ ಜನರು ಜವಾಬ್ದಾರಿಯುತರಾಗಿ ವರ್ತಿಸುತ್ತಾರೆ. ಈ ಜನರು ಜವಾಬ್ದಾರಿಯ ಮಹತ್ವವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ಫಲಿತಾಂಶಗಳು ಏನೇ ಇದ್ದರೂ ಸ್ವ ಇಚ್ಛೆಯಿಂದ ಸ್ವೀಕರಿಸುತ್ತಾರೆ. ಇದು ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸಂಬಂಧದಲ್ಲಿ ಮುಖ್ಯವಾಗುತ್ತದೆ. ಇದು ಆ ವ್ಯಕ್ತಿಯಲ್ಲಿರುವ ಭಾವನಾತ್ಮಕ ಪ್ರಬುದ್ಧತೆಯನ್ನು ತೋರಿಸುತ್ತದೆ.
ಸ್ವಾತಂತ್ರ್ಯರಾಗಿರುವುದು : ವೈಯುಕ್ತಿಕ ಜೀವನವಿರಲಿ ಅಥವಾ ವೃತ್ತಿ ಜೀವನದಲ್ಲಿ ಸ್ವಾತಂತ್ರ್ಯರಾಗಿರುವುದು ಭಾವನಾತ್ಮಕವಾಗಿ ಪ್ರಬುದ್ಧರಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಸ್ವಾತಂತ್ರ್ಯ ಎಂದರೆ ತಮ್ಮ ಎಲ್ಲಾ ಸಮಯವನ್ನು ಪ್ರತ್ಯೇಕವಾಗಿ ಕಳೆಯುವುದು ಎಂದರ್ಥವಲ್ಲ. ಸ್ವಂತ ಕಾಲಿನ ಮೇಲೆ ನಿಲ್ಲುವುದು, ಸ್ವಂತ ಆಸಕ್ತಿಗಳು, ಸ್ವಂತ ಆಲೋಚನೆಗಳಿಗೂ ಬೆಲೆ ಕೊಡುವುದಾಗಿದೆ. ಇದು ಭಾವನಾತ್ಮಕ ಪ್ರಬುದ್ಧತೆಯ ಚಿಹ್ನೆಯಾಗಿದ್ದು, ಸಂಗಾತಿಯಲ್ಲಿ ಈ ಗುಣವಿರುವುದು ಅಗತ್ಯವಾಗಿದೆ.
ಕೇಳಿಸಿಕೊಳ್ಳುವ ತಾಳ್ಮೆ : ಇತರರು ಹೇಳುವುದನ್ನು ಚೆನ್ನಾಗಿ ಕೇಳಿಸಿಕೊಳ್ಳುವುದು ಭಾವನಾತ್ಮಕವಾಗಿ ಪ್ರಬುದ್ಧತೆ ಹೊಂದಿದ್ದೀರಿ ಎಂಬುದನ್ನು ತೋರಿಸುತ್ತದೆ. ಸಂಬಂಧದಲ್ಲಿ ಸಂಗಾತಿಯ ಮಾತನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆಯೂ ಅಗತ್ಯವಾಗಿರಬೇಕು. ಆ ಗುಣವು ಭಾವನಾತ್ಮಕ ಪ್ರಬುದ್ಧತೆಯಿರುವರಲ್ಲಿ ಹೆಚ್ಚಾಗಿರುತ್ತದೆ.
ಸಂಘರ್ಷ ನಿಭಾಯಿಸುವ ಕಲೆ : ಒಬ್ಬ ವ್ಯಕ್ತಿಯ ಸ್ನೇಹಿತರೊಂದಿಗೆ, ಸಂಗಾತಿಯೊಂದಿಗೆ ಅಥವಾ ಸಹೋದ್ಯೋಗಿಯೊಂದಿಗೆ ಸಣ್ಣ ಪುಟ್ಟ ಜಗಳಗಳಾದಾಗ ಅದನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಾರೆ. ಹೀಗಾಗಿ ಸಂಘರ್ಘಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಭಾವನಾತ್ಮಕ ಪ್ರಬುದ್ಧತೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಸಂಬಂಧದಲ್ಲಿ ಸಂಘರ್ಷ ನಿಭಾಯಿಸುವ ಕಲೆ ಗೊತ್ತಿದ್ದರೆ ಬದುಕಿನಲ್ಲಿ ಖುಷಿಯೇ ತುಂಬಿರುತ್ತದೆ.
ಇತರರನ್ನು ಅವಲಂಬಿಸದಿರುವುದು : ಕೆಲವರು ಜೀವನದಲ್ಲಿ ಏನೇ ಕಷ್ಟಗಳು ಎದುರಾದರೂ ಇತರರ ಮೇಲೆ ಅವಲಂಬಿತರಾಗಿರುವುದಿಲ್ಲ. ಈ ಗುಣವಿರುವ ವ್ಯಕ್ತಿಗಳು ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು ಇತರರನ್ನು ಹೆಚ್ಚಾಗಿ ಅವಲಂಬಿಸಿರುವುದಿಲ್ಲ. ತಮ್ಮ ಸ್ವಂತ ವಿಚಾರದ ಮೇಲೆ ನಿಲ್ಲುತ್ತಾರೆ. ಕೆಲವೊಮ್ಮೆ ಸಂಗಾತಿಯಲ್ಲಿ ಈ ಗುಣವಿರುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ಇಬ್ಬರೂ ಒಬ್ಬರಿಗೊಬ್ಬರು ಹೆಚ್ಚು ಅವಲಂಬಿತರಾಗಿರದೇ ಸಣ್ಣ ಪುಟ್ಟ ಸಮಸ್ಯೆಗಳನ್ನು ಒಬ್ಬರೇ ನಿಭಾಯಿಸಿಕೊಂಡು ಹೋಗುವಂತಾಗುತ್ತದೆ.
ಸ್ವಯಂ ಪ್ರೀತಿ : ಇತರರು ನಮ್ಮನ್ನು ಸದಾ ಪ್ರೀತಿಸಬೇಕು ಎನ್ನುವುದನ್ನು ಬಯಸುವ ಬದಲು ಸ್ವಯಂ ಪ್ರೀತಿಸುವುದು ಭಾವನಾ ತ್ಮಕ ಪ್ರಬುದ್ಧತೆ ಚಿಹ್ನೆಗಳಲ್ಲಿ ಒಂದಾಗಿದೆ. ಈ ರೀತಿಯ ವ್ಯಕ್ತಿಗಳು ತಮ್ಮನ್ನು ತಾವು ಗೌರವಿಸುವುದು ಪ್ರೀತಿಸುವುದು, ಸ್ವಯಂ ಕಾಳಜಿ ವಹಿಸುವುದು ಹಾಗೂ ಸಂತೋಷವನ್ನು ಮೌಲ್ಯಮಾಪನ ಮಾಡುವ ಗುಣವಿರುತ್ತದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಭಾವನಾತ್ಮಕ ಪ್ರಬುದ್ಧತೆಯ ಗುಣವಿದೆಯೇ ಎಂದು ತಿಳಿದುಕೊಳ್ಳಿ.