ಪ್ರತಿ ತಿಂಗಳಲ್ಲಿಯೂ ವಿಶೇಷವಾದ ದಿನಗಳಿದ್ದು, ಆಗಸ್ಟ್ ತಿಂಗಳ ಹೆಸರು ಕೇಳಿದ ಕೂಡಲೇ ಮೊದಲು ನೆನಪಿಗೆ ಬರುವುದೇ ಸ್ವಾತಂತ್ರ್ಯ ದಿನಾಚರಣೆ. ಆದರೆ ಈ ತಿಂಗಳಿನಲ್ಲಿ ಹಲವಾರು ಐತಿಹಾಸಿಕವಾಗಿ ನಡೆದ ಘಟನೆ ಮತ್ತು ವಿಶೇಷಗಳ ನೆನಪಿಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಯನ್ನು ನೋಡಬಹುದಾಗಿದೆ. ಹೌದು, ಎಂಟನೇ ತಿಂಗಳಾದ ಈ ಆಗಸ್ಟ್ ನಲ್ಲಿ ಹಲವಾರು ವಿಶೇಷ ದಿನಗಳನ್ನು ಆಚರಿಸಲಾಗುತ್ತಿದ್ದು, ಅವುಗಳು ಯಾವುವು ಎನ್ನುವುದರ ಮಾಹಿತಿ ಈ ಕೆಳಗಿದೆ.
* ಆಗಸ್ಟ್ 1 ರಿಂದ 7- ವಿಶ್ವ ಸ್ತನ್ಯಪಾನ ವಾರ
* ಆಗಸ್ಟ್ 1 – ವಿಶ್ವ ಶ್ವಾಸಕೋಶದ ಕ್ಯಾನ್ಸರ್ I’ve
* ಆಗಸ್ಟ್ 4- ಸ್ನೇಹಿತರ ದಿನ
* ಆಗಸ್ಟ್ 6- ಹಿರೋಶಿಮಾ ಡೇ
* ಆಗಸ್ಟ್ 6 – ಅಂತರಾಷ್ಟ್ರೀಯ ಬಿಯರ್ ದಿನ
* ಆಗಸ್ಟ್ 7 – ರಾಷ್ಟ್ರೀಯ ಕೈಮಗ್ಗ ದಿನ
* ಆಗಸ್ಟ್ 8 – ಭಾರತ ಬಿಟ್ಟು ತೊಲಗಿ ಚಳುವಳಿ ದಿನ
* ಆಗಸ್ಟ್ 9 – ನಾಗಸಾಕಿ ದಿನ
* ಆಗಸ್ಟ್ 10 – ವಿಶ್ವ ಸಿಂಹ ದಿನ
* ಆಗಸ್ಟ್ 10 – ವಿಶ್ವ ಜೈವಿಕ ಇಂಧನ ದಿನ
* ಆಗಸ್ಟ್ 12 – ಅಂತಾರಾಷ್ಟ್ರೀಯ ಯುವ ದಿನ
* ಆಗಸ್ಟ್ 12 – ವಿಶ್ವ ಆನೆ ದಿನ
* ಆಗಸ್ಟ್ 13 – ವಿಶ್ವ ಅಂಗದಾನ ದಿನ
* ಆಗಸ್ಟ್ 13 – ಅಂತಾರಾಷ್ಟ್ರೀಯ ಲೆಫ್ಟಿಶ್ ದಿನ
* ಆಗಸ್ಟ್ 15 – ಸ್ವಾತಂತ್ರ್ಯ ದಿವಸ
* ಆಗಸ್ಟ್ 15 – ರಾಷ್ಟ್ರೀಯ ಶೋಕ ದಿನ (ಬಾಂಗ್ಲಾದೇಶ)
* ಆಗಸ್ಟ್ 19 – ವಿಶ್ವ ಛಾಯಾಗ್ರಹಣ ದಿನ
* ಆಗಸ್ಟ್ 19 – ವಿಶ್ವ ಮಾನವೀಯ ದಿನ
* ಆಗಸ್ಟ್ 19 – ರಕ್ಷಾ ಬಂಧನ
* ಆಗಸ್ಟ್ 20 – ವಿಶ್ವ ಸೊಳ್ಳೆ ದಿನ
* ಆಗಸ್ಟ್ 20 – ಸದ್ಭಾವನಾ ದಿವಸ
* ಆಗಸ್ಟ್ 20 – ಭಾರತೀಯ ಅಕ್ಷಯ ಉರ್ಜಾ ದಿನ
* ಆಗಸ್ಟ್ 23 – ಗುಲಾಮ ವ್ಯಾಪರ ಮತ್ತು ಅದರ ನಿರ್ಮೂಲನೆಯ ನೆನಪಿನ ಅಂತಾರಾಷ್ಟ್ರೀಯ ದಿನ
* ಆಗಸ್ಟ್ 26 – ಅಂತಾರಾಷ್ಟ್ರೀಯ ನಾಯಿ ದಿನ
* ಆಗಸ್ಟ್ 29 – ರಾಷ್ಟ್ರೀಯ ಕ್ರೀಡಾ ದಿನ
* ಆಗಸ್ಟ್ 30 – ಸಣ್ಣ ಕೈಗಾರಿಕ ದಿನ
* ಆಗಸ್ಟ್ 31 – ಸಂಸ್ಕೃತ ದಿವಸ
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Mon, 29 July 24