Facial Steaming: ಫೇಷಿಯಲ್​​ ಸ್ಟೀಮಿಂಗ್ ಮಾಡುವುದು ಒಳ್ಳೆಯದೇ? ತಜ್ಞರ ಸಲಹೆಗಳೇನು?

| Updated By: shruti hegde

Updated on: Nov 16, 2021 | 1:41 PM

ನೀವು ಫೇಸ್ ಸ್ಟೀಮಿಂಗ್ ಮಾಡಬೇಕು ಅಂದುಕೊಂಡಿದ್ದರೆ ಅಥವಾ ಮಾಡುತ್ತಿದ್ದರೆ ಅದು ಒಳ್ಳೆಯದೇ? ಅದರಿಂದ ಮುಖ ಕಾಂತಿ ಪಡೆದುಕೊಳ್ಳುತ್ತದೆಯೇ? ಚರ್ಮದ ಆರೋಗ್ಯಕ್ಕೆ ಒಳ್ಳೆಯದೇ? ಈ ಕುರಿತಾಗಿ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Facial Steaming: ಫೇಷಿಯಲ್​​ ಸ್ಟೀಮಿಂಗ್ ಮಾಡುವುದು ಒಳ್ಳೆಯದೇ? ತಜ್ಞರ ಸಲಹೆಗಳೇನು?
ಫೇಷಿಯಲ್​ ಸ್ಟೀಮಿಂಗ್​
Follow us on

ನಾವೆಲ್ಲರೂ ಸುಂದರವಾದ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಇಷ್ಟಪಡುತ್ತೇವೆ. ನಾವು ನಮ್ಮ ಮುಖದ ಕಾಂತಿ ಹಾಳಾಗಲು ಎಂದೂ ಬಿಡುವುದಿಲ್ಲ. ತ್ವಚೆ ಕಾಂತಿ ಹೆಚ್ಚಿಸುವ ಉತ್ಪನ್ನಗಳು ಬಹುಬೇಗ ನಮ್ಮನ್ನು ಸೆಳೆಯುತ್ತವೆ. ಮಾರುಕಟ್ಟೆಯಲ್ಲಿ ಆ ವಸ್ತುವನ್ನು ಕೊಂಡುಬಿಡೋಣ ಅನ್ನುವಷ್ಟರ ಮಟ್ಟಿಗೆ ಮನಸೆಳೆಯುತ್ತದೆ. ಹಾಗಿರುವಾಗ ಡಾ. ನಿಕೇತಾ ಅವರು ಇನ್ಸ್ಟಾಗ್ರಾಮ್​ನಲ್ಲಿ ಈ ಕುರಿತಂತೆ ಪೋಸ್ಟ್ ಹಂಚಿಕೊಂಡಿದ್ದಾರೆ. ನೀವು ಫೇಸ್ ಸ್ಟೀಮಿಂಗ್ ಮಾಡಬೇಕೆ ಅಥವಾ ಬೇಡವೇ? ಎಂಬುದರ ಕುರಿತಾಗಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನೀವು ಫೇಸ್ ಸ್ಟೀಮಿಂಗ್ ಮಾಡಬೇಕು ಅಂದುಕೊಂಡಿದ್ದರೆ ಅಥವಾ ಮಾಡುತ್ತಿದ್ದರೆ ಅದು ಒಳ್ಳೆಯದೇ? ಅದರಿಂದ ಮುಖ ಕಾಂತಿ ಪಡೆದುಕೊಳ್ಳುತ್ತದೆಯೇ? ಚರ್ಮದ ಆರೋಗ್ಯಕ್ಕೆ ಒಳ್ಳೆಯದೇ? ಈ ಕುರಿತಾಗಿ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸ್ಟೋಮಿಂಗ್ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ. ನಿಮ್ಮ ಮುಖಕ್ಕೆ ಹಬೆಯಾಡಿಸುವುದರಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ಜಿಗುಟಾದ ಮೇದೋಗ್ರಂಥಿಗಳ ಸ್ರಾವವನ್ನು ಕರಗಿಸುತ್ತದೆ.

ಫೇಷಿಯಲ್ ಸ್ಟೀಮಿಂಗ್ ಪ್ರಯೋಜನಗಳು
*ಸ್ಟೀಮ್​ ನಿಮ್ಮ ಮುಖದ ಮೇಲಿನ ರಂಧ್ರಗಳನ್ನು ತೆರೆಯುತ್ತದೆ. ಮುಖದಲ್ಲಿನ ಕೊಳೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
*ಇದು ಕಪ್ಪು ಕಲೆಯನ್ನು ಮೃದುಗೊಳಿಸುತ್ತದೆ. ಸ್ಕ್ರಬಿಂಗ್ ಮಾಡುವಾಗ ಅವುಗಳನ್ನು ಸುಲಭದಲ್ಲಿ ತೆಗೆದು ಹಾಕುತ್ತದೆ.
*ಬೆಚ್ಚಗಿನ ಉಗಿ ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ನಿಮ್ಮ ಮುಖವನ್ನು ಹೇಗೆ ಸ್ಟೀಮ್ ಮಾಡುವುದು?
*ನಿಮ್ಮ ಮುಖವನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ
*10 ನಿಮಿಷಗಳ ಕಾಲ ಸ್ಟೀಮ್ ಮಾಡಿ
*ನಂತರ ಮುಖದಲ್ಲಿನ ನೀರಿನಾಂಶವನ್ನು ಶುದ್ಧ ವಸ್ತ್ರದಿಂದ ತೊಳೆಯಿರಿ
*ಮುಖಕ್ಕೆ ಅಲೋವೆರಾ ಜಲ್ ಹಚ್ಚಿ, 5 ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ

ಇದನ್ನೂ ಓದಿ:

Health Tips: ಧೂಮಪಾನ ಒಮ್ಮೆಲೆ ಬಿಡಲು ಪ್ರಯತ್ನಿಸುತ್ತಿದ್ದೀರಾ? ವೈದ್ಯರ ಸಲಹೆ ಏನು ತಿಳಿಯಿರಿ

Health Tips: ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ? ಇಲ್ಲಿವೆ ಸಲಹೆಗಳು