Hair Fall: ಕೂದಲು ಉದುರುವಿಕೆಯ ಸಮಸ್ಯೆ ಎದುರಿಸುತ್ತಿದ್ದೀರಾ? ಇಲ್ಲಿದೆ ಪರಿಹಾರ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 27, 2023 | 2:15 PM

ಕೂದಲು ಉದುರುವಿಕೆ ಹೆಚ್ಚಿನವರನ್ನು ಕಾಡುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಪೋಷಕಾಂಶಗಳ ಕೊರತೆಯ ಕಾರಣದಿಂದಲೂ ಕೂದಲು ಉದುರಬಹುದು. ಹಾಗಾಗಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಈ ಕೆಲವೊಂದು ಪೋಷಕಾಂಶಯುಕ್ತ ಆಹಾರನ್ನು ಸೇವಿಸಬೇಕು.

Hair Fall: ಕೂದಲು ಉದುರುವಿಕೆಯ ಸಮಸ್ಯೆ ಎದುರಿಸುತ್ತಿದ್ದೀರಾ? ಇಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
Follow us on

ಪ್ರಪಂಚದಾದ್ಯಂತ ಹೆಚ್ಚಿನ ಜನರನ್ನು ಕಾಡುವ ಸಾಮನ್ಯ ಸಮಸ್ಯೆಯೆಂದರೆ ಅದು ಕೂದಲು ಉದುರುವಿಕೆ. ಆಹಾರದಲ್ಲಿನ ಪೋಷಕಾಂಶದ ಕೊರತೆಯು ಕೂದಲು ಉದುರುವಿಕೆಯಂತಹ ಕೂದಲಿಗೆ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಕಳಪೆ ಮಟ್ಟದ ಜೀವನಶೈಲಿ, ಪೋಷಣೆ, ಒತ್ತಡ ಮತ್ತು ಹಾರ್ಮೋನುಗಳ ಬದಲಾವಣೆಯಂತಹ ಹಲವಾರು ಅಂಶಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಕೆಲವರಿಗೆ ಈ ಸಮಸ್ಯೆ ಅನುವಂಶಿಕವಾಗಿ ಬಂದಿರುತ್ತದೆ. ಒಂದು ವೇಳೆ ಈ ಸಮಸ್ಯೆ ವೈದ್ಯಕೀಯ ಕಾರಣ ಅಥವಾ ಅನುವಂಶಿಕ ಕಾರಣದಿಂದ ಬಂದಿರದಿದ್ದರೆ, ಈ ಸಮಸ್ಯೆಗೆ ಸಮತೋಲಿತ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಹೆಚ್ಚಿನ ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಕೂದಲ ಬೇರುಗಳು ಪ್ರಬಲಗೊಳ್ಳುತ್ತದೆ. ಮತ್ತು ಇದು ಕೂದಲಿನ ಆರೊಗ್ಯವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.

ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪೋಷಕಾಂಶಗಳು:

ಬಯೋಟಿನ್: ಕೂದಲು ತೆಳ್ಳಗಾಗುವಿಕೆಯು ಕೂದಲಿನ ದುರ್ಬಲತೆಯನ್ನು ಸೂಚಿಸುತ್ತದೆ ಮತ್ತು ದುರ್ಬಲ ಕೂದಲು, ಕೂದಲು ಉದುರುವಿಕೆಯ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಕೂದಲಿಗೆ ಅತ್ಯುತ್ತಮ ವಿಟಮಿನ್ ಗಳಲ್ಲಿ ಒಂದಾದ ಬಯೋಟಿನ್ ಪೋಷಕಾಂಶದ ಅಗತ್ಯತೆ ಇದೆ. ಈ ಬಯೋಟಿನ್ ನ್ನು ವಿಟಮಿನ್ ಬಿ ಅಂತಲೂ ಕರೆಯುತ್ತಾರೆ. ದೇಹವು ಸಾಕಷ್ಟು ಪ್ರಮಾಣದಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಸಾಧ್ಯವಾಗದಿದ್ದಾಗ, ದೇಹದಲ್ಲಿನ ಬಯೋಟಿನ್ ಪೋಷಕಾಂಶ ಕಡಿಮೆಯಾಗುತ್ತದೆ ಮತ್ತು ಇದರಿಂದ ಕಡಿಮೆ ಆಮ್ಲಜನಕ ನೆತ್ತಿಯ ಮೇಲೆ ಹಾದುಹೋಗುತ್ತದೆ. ಪರಿಣಾಮವಾಗಿ ನೆತ್ತಿಗೆ ಸರಿಯಾದ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕಬ್ಬಿಣಾಂಶ: ಆರೋಗ್ಯಕರ ಕೂದಲ ಬೆಳವಣಿಗೆಗೆ ಕಬ್ಬಿಣದ ಅಗತ್ಯವಿದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸಲು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲು, ಕೆಂಪು ರಕ್ತಕಣಗಳು ದೇಹದಾದ್ಯಂತ ಆಮ್ಲಜನಕವನ್ನು ಪೂರೈಸಲು ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಕಬ್ಬಿಣದ ಅವಶ್ಯಕತೆ ಇದೆ. ಕಬ್ಬಿಣದ ಉತ್ತಮ ಮೂಲವೆಂದರೆ ಪಾಲಕ್. ಇವುಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ಕೂದಲು ಉದುರುವಿಕೆಗೆ ಪರಿಹಾರ ಕಂಡುಕೊಳ್ಳಬಹುದು.

ಒಮೆಗಾ-3: ಅಧ್ಯಯನಗಳ ಪ್ರಕಾರ ಒಮೆಗಾ-3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳ ಪೂರಕವಾಗಿ ತೆಗೆದುಕೊಳ್ಳುವ ಮೂಲಕ ಕೂದಲಿನ ಸಾಂದ್ರತೆಯನ್ನು ಹೆಚ್ಚಿಸಬಹುದು. ಮತ್ತು ಇದರಿಂದ ಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ. ಈ ಒಮೆಗಾ-3 ಕೊಬ್ಬಿನಾಮ್ಲಗಳು ಮೀನಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ವಿಟಮಿನ್ ಡಿ: ವಿಟಮಿನ್ ಡಿ ಕೊರತೆಯು ಅಲೋಪೆಸಿಯಾಕ್ಕೆ ಕಾರಣವಾಗಬಹುದು. ಇದನ್ನು ಹೆಣ್ಣು ಮಾದರಿಯ ಕೂದಲು ಉದುರುವಿಕೆ ಎಂದು ಕರೆಯಲಾಗುತ್ತದೆ. ಈ ವಿಟಮಿನ್ ಡಿ ಪೋಷಕಾಂಶವು ಕೂದಲ ಕಿರುಚೀಲಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಹೊಸ ಕೂದಲಿನ ಎಳೆಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ:Hair fall: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಪ್ರಾಣಾಯಾಮ ಮತ್ತು ಯೋಗಾಸನ ಪರಿಣಾಮಕಾರಿ

ವಿಟಮಿನ್ ಇ: ಕೂದಲಿನ ಬಲಿಷ್ಟತೆ ಮತ್ತು ಬೆಳವಣಿಗೆಯನ್ನು ವಿಟಮಿನ್ ಇ ಉತ್ತೇಜಿಸುತ್ತದೆ. ಕೊಬ್ಬಿನಾಮ್ಲದ ಕೊರತೆಯು ಕೂದಲು ಉದುರುವಿಕೆಗೆ ಸಂಬಂಧಿಸಿದೆ ಮತ್ತು ಈ ವಿಟಮಿನ್ ಇ ಕೊಬ್ಬಿನಾಮ್ಲದ ಉತ್ತಮ ಮೂಲವಾಗಿದೆ.

ವಿಟಮಿನ್ ಸಿ: ವಿಟಮಿನ್ ಸಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕಾಲಜನ್ ಕೂದಲಿನ ಎಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ವಿಟಮಿನ್ ಸಿ ಈ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಉತ್ಕರ್ಷಣ ನಿರೋಧಕವಾಗಿದೆ.

ಈ ಎಲ್ಲಾ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರಗಳನ್ನು ಸೇವಿಸುವ ಮೂಲಕ ಕೂದಲ ಆರೋಗ್ಯದ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: