Beauty Tips: ದಪ್ಪಗಿದ್ದರೇನಂತೆ ನಿಮ್ಮ ಆಯ್ಕೆಯಲ್ಲಿ ಬದಲಾವಣೆ ಇರಲಿ? ಈ ಸಲಹೆಗಳು ನಿಮ್ಮನ್ನು ಸುಂದರವಾಗಿಸುತ್ತದೆ

| Updated By: preethi shettigar

Updated on: Nov 23, 2021 | 8:40 AM

ತಾವು ಇಷ್ಟಪಟ್ಟ ಉಡುಗೆಯನ್ನು ಧರಿಸಲು ಆಗದೆ ಹೆಚ್ಚಿನವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ನಿಮಗೂ ಇಂತಹ ಸಮಸ್ಯೆಗಳಿದ್ದರೆ ಚಿಂತಿಸುವ ಅಗತ್ಯವಿಲ್ಲ. ಈ ರೀತಿಯ ಸಮಸ್ಯೆಗೆ ಒಳಗಾಗುವವರಿಗಾಗಿ ಅಥವಾ ಇಂತಹ ಸಮಸ್ಯೆಯನ್ನೇ ದೊಡ್ಡದೆಂದುಕೊಳ್ಳುವವರಿಗಾಗಿ ಇಲ್ಲಿದೆ ಸೂಕ್ತ ಸಲಹೆಗಳು.

Beauty Tips: ದಪ್ಪಗಿದ್ದರೇನಂತೆ ನಿಮ್ಮ ಆಯ್ಕೆಯಲ್ಲಿ ಬದಲಾವಣೆ ಇರಲಿ? ಈ ಸಲಹೆಗಳು ನಿಮ್ಮನ್ನು ಸುಂದರವಾಗಿಸುತ್ತದೆ
ಸಂಗ್ರಹ ಚಿತ್ರ
Follow us on

ಬೊಜ್ಜು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇದು ನಿಮಗೆ ಅನೇಕ ಕಾಯಿಲೆಗಳನ್ನು ನೀಡುವುದಲ್ಲದೆ, ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಅದರಲ್ಲೂ ಹುಡುಗಿಯರಿಗೆ ಬೊಜ್ಜಿನ ಸಮಸ್ಯೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ತಾವು ಇಷ್ಟಪಟ್ಟ ಉಡುಗೆಯನ್ನು (Dress) ಧರಿಸಲು ಆಗದೆ ಹೆಚ್ಚಿನವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ನಿಮಗೂ ಇಂತಹ ಸಮಸ್ಯೆಗಳಿದ್ದರೆ ಚಿಂತಿಸುವ ಅಗತ್ಯವಿಲ್ಲ. ಈ ರೀತಿಯ ಸಮಸ್ಯೆಗೆ ಒಳಗಾಗುವವರಿಗಾಗಿ ಅಥವಾ ಇಂತಹ ಸಮಸ್ಯೆಯನ್ನೇ ದೊಡ್ಡದೆಂದುಕೊಳ್ಳುವವರಿಗಾಗಿ ಇಲ್ಲಿದೆ ಸೂಕ್ತ ಸಲಹೆಗಳು.

ಬಟ್ಟೆಯ ಆಯ್ಕೆಯಲ್ಲಿ ಬದಲಾವಣೆ
ಮೊದಲನೆಯದಾಗಿ ನಿಮ್ಮ ದೇಹದ ಯಾವ ಭಾಗವು ಹೆಚ್ಚು ಭಾರವಾಗಿದೆ ಅಥವಾ ದಪ್ಪವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಯಾವ ಭಾಗ ದಪ್ಪವಾಗಿರುತ್ತದೆಯೋ ಆ ಭಾಗದ ಅಳವಡಿಕೆಗೆ ವಿಶೇಷ ಕಾಳಜಿ ವಹಿಸಿ. ದೇಹದ ದಪ್ಪ ಭಾಗಕ್ಕೆ ಹೊಂದಿಕೊಳ್ಳುವ ಬಟ್ಟೆಯನ್ನು ಆರಿಸಿ. ತುಂಬಾ ಸಡಿಲವಾಗಿ ಧರಿಸುವುದರಿಂದ ಇನ್ನೂ ದಪ್ಪವಾಗಿ ಕಾಣುತ್ತೀರಿ. ಇದರ ಹೊರತಾಗಿ, ವಿ-ನೆಕ್‌ಲೈನ್ ಟಾಪ್ ಅಥವಾ ಇನ್ನಿತರ ಬಟ್ಟೆ ಆಯ್ಕೆಮಾಡಿ.

ಕಪ್ಪು ಬಣ್ಣಕ್ಕೆ ಆದ್ಯತೆ ನೀಡಿ
ಬೊಜ್ಜಿನಿಂದ ನಿಮಗೆ ಸಮಸ್ಯೆಯಾಗಿದ್ದರೆ, ಕಪ್ಪು ಬಣ್ಣದ ಆಯ್ಕೆಯು ತುಂಬಾ ನಿಖರವಾಗಿದೆ. ಹೆಚ್ಚಿನ ಕಪ್ಪು ಬಟ್ಟೆಗಳಲ್ಲಿ ನೀವು ಸ್ಲಿಮ್ ಆಗಿ ಕಾಣುತ್ತೀರಿ. ಹೀಗಾಗಿ ನೀವು ಕಪ್ಪು ಅಥವಾ ಡಾರ್ಕ್ ಟಾಪ್ ಅನ್ನು ಆಯ್ಕೆ ಮಾಡಬಹುದು.

ಸೀರೆ ಉಡುವಾಗ ನೆನಪಿರಲಿ
ದಪ್ಪಗಿರುವ ಹುಡುಗಿಯರು ಸೀರೆಗಳನ್ನು ಧರಿಸಿದರೆ ಇನ್ನು ದಪ್ಪವಾಗಿ ಕಾಣುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ತಮಗೆ ಬೇಕಾದರೂ ಸೀರೆ ಉಡಲು ಸಾಧ್ಯವಾಗುವುದಿಲ್ಲ. ನಿಮಗೂ ಅಂತಹ ಸಮಸ್ಯೆಯಿದ್ದರೆ ಇನ್ಮುಂದೆ ಚಿಂತಿಸದೆ ಸೀರೆ ಉಟ್ಟುಕೊಳ್ಳಿ. ಆದರೆ ಸೀರೆ ಉಡುವಾಗ ಹೊಕ್ಕಳ ಕೆಳಗೆ ಸೀರೆ ಕಟ್ಟಬೇಕು ಎಂಬುದನ್ನು ನೆನಪಿನಲ್ಲಿಡಿ. ಹೊಕ್ಕಳಿಗೆ ಸೀರೆ ಕಟ್ಟಿದರೆ ದಪ್ಪಗೆ ಕಾಣಿಸುತ್ತಾರೆ.

ಕೇಶ ವಿನ್ಯಾಸದಲ್ಲಿ ಬದಲಾವಣೆ
ನಿಮ್ಮನ್ನು ಸ್ಲಿಮ್ ಆಗಿ ಕಾಣುವಂತೆ ಮಾಡಲು, ನೀವು ಕೇಶವಿನ್ಯಾಸವನ್ನು ಬಹಳ ಎಚ್ಚರಿಕೆಯಿಂದ ಮಾಡಿಕೊಳ್ಳಿ. ಕೆಲವೊಮ್ಮೆ ನಾವು ವಿಚಿತ್ರವಾದ ಕೇಶವಿನ್ಯಾಸವನ್ನು ಆಯ್ಕೆ ಮಾಡುತ್ತೇವೆ. ಈ ಕಾರಣದಿಂದಾಗಿ ನಮ್ಮ ಮುಖವು ತುಂಬಾ ದೊಡ್ಡದಾಗಿ ಕಾಣಿಸುತ್ತದೆ. ದಪ್ಪ ಮತ್ತು ದುಂಡಗಿನ ಮುಖ ಉಳ್ಳವರು ಲೇಯರ್ಡ್ ಬ್ಯಾಂಗ್ಸ್ ಇತ್ಯಾದಿಗಳನ್ನು ಮಾಡಬಹುದು. ಇದಲ್ಲದೇ ತೂಕ ಹೆಚ್ಚಿರುವವರು ಯಾವ ಯಾವ ಹೇರ್ ಸ್ಟೈಲ್ ಮಾಡಬಹುದು ಎಂಬುವುದಕ್ಕೆ ಯೂಟ್ಯೂಬ್ ಮೊರೆ ಹೋಗಬಹುದು.

ಫೋಟೋಗಳನ್ನು ತೆಗೆಯುವಾಗ ಕಾಳಜಿ ವಹಿಸಿ
ಉಡುಗೆ ಮತ್ತು ಮೇಕ್ಅಪ್ ಹೊರತಾಗಿ, ನಿಮ್ಮ ಭಂಗಿಗಳು ನಿಮ್ಮನ್ನು ಸ್ಥೂಲವಾಗಿ ಕಾಣುವಂತೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಫೋಟೋ ತೆಗೆಯುವಾಗ ಒಂದು ಪಾದವನ್ನು ಇನ್ನೊಂದರ ಮುಂದೆ ಇರಿಸಿ ಮತ್ತು ಕ್ಯಾಮೆರಾದ ಕಡೆಗೆ ತಿರುಗಿ. ಇದಲ್ಲದೇ ಸ್ವಲ್ಪ ದೂರದಿಂದ ಫೋಟೋ ತೆಗೆಯಿರಿ. ಫೋಟೊವನ್ನು ಕ್ಲಿಕ್ಕಿಸುವ ಕಾಲಕ್ಕೆ ಹೊಟ್ಟೆಯ ಭಾಗವನ್ನು ಒಳ ಮಾಡಿಕೊಳ್ಳಿ ಮತ್ತು ಕೈಗಳನ್ನು ಮುಂದಕ್ಕೆ ಚಾಚಿ.

ಇದನ್ನೂ ಓದಿ:
Skin care Tips: ಚಳಿಗಾಲದಲ್ಲಿ ನಿಮ್ಮ ಚರ್ಮದ ಕಾಳಜಿ ಹೇಗಿರಬೇಕು? ಈ 4 ಸಲಹೆಗಳು ನಿಮಗಾಗಿ

ಇಷ್ಟಪಟ್ಟು ಕೊಂಡ ಪಾದರಕ್ಷೆ ನಿಮ್ಮ ಕಾಲಿಗೆ ಸರಿಹೊಂದುತ್ತಿಲ್ಲವೇ? ಈ ಟ್ರಿಕ್​ಗಳನ್ನು ಅನುಸರಿಸಿ