ಬಹುಬೇಗ ವಯಸ್ಸಾದವರಂತೆ ಕಾಣುತ್ತಿದ್ದೀರಾ? ಇಲ್ಲಿವೆ ಕೆಲವು ಸಲಹೆಗಳು
50 ವರ್ಷದ ಮೇಲ್ಪಟ್ಟಿದ್ದರೂ ನೀವು ಸದೃಢರಾಗಲು ಮತ್ತು ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳಿವೆ. ಇವುಗಳು ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ.
ಮಾಲಿನ್ಯ, ಮದ್ಯಪಾನ, ಧೂಮಪಾನ ಮತ್ತು ಒತ್ತಡ ನಿಮ್ಮ ಆರೋಗ್ಯವನ್ನು ಹಾನಿಗೊಳಗಾಗಿಸುತ್ತವೆ. ಇವುಗಳಿಂದ ನೀವು ಬಹುಬೇಗ ವಯಸ್ಸಾದವರಂತೆ ಕಾಣಿಸುತ್ತೀರಿ. ಕೆಲವು ಆಹಾರ ಪದಾರ್ಥಗಳೂ ಸಹ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅವುಗಳಲ್ಲಿ ಸಂಸ್ಕರಿಸಿದ ಆಹಾರ, ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುವ ಆಹಾರ ಪದಾರ್ಥವು ಸ್ಥೂಲಕಾಯದ ಅಪಾಯವನ್ನು ಹೆಚ್ಚಿಸುತ್ತವೆ. ನೀವು ಸೇವಿಸುವ ಅಪೌಷ್ಟಿಕ ಆಹಾರ ಪದಾರ್ಥಗಳು ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ನೀವು ಬೇಗ ವಯಸ್ಸಾದವರಂತೆ ಕಾಣಲು ಕಾರಣವಾಗುತ್ತದೆ. ಹಾಗಿರುವಾಗ ಈ ಕೆಲವು ವಯಸ್ಸಾಗಿದ್ದರೂ ಸದೃಢರಾಗಲು ಕೆಲವು ಪೌಷ್ಟಿಕಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಅಂತಹ ಆಹಾರ ಪದಾರ್ಥಗಳು ಯಾವುವು ಎಂಬುದು ಈ ಕೆಳಗಿನಂತಿದೆ ತಿಳಿಯಿರಿ.
50 ವರ್ಷದ ಮೇಲ್ಪಟ್ಟಿದ್ದರೂ ನೀವು ಸದೃಢರಾಗಲು ಮತ್ತು ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳಿವೆ. ಹಸಿರು ಸೊಪ್ಪು, ಬೆರಿಹಣ್ಣುಗಳು, ಬೀಜಗಳು, ಅವಕಾಡೊಗಳು ನಿಮ್ಮಲ್ಲಿ ಶಕ್ತಿಯನ್ನು ತುಂಬುತ್ತವೆ. ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಸೊಪ್ಪು ಪಾಲಾಕ್ ಸೇರಿದಂತೆ ಹಸಿರು ಸೊಪ್ಪು ನಿಮ್ಮ ಆರೋಗ್ಯ ಸುಧಾರಣೆಗೆ ಒಳ್ಳೆಯದು. ಇವು ಪ್ರೋಟೀನ್ಗಳು, ಅಗತ್ಯ ವಿಟಮಿನ್, ಕ್ಯಾಲ್ಸಿಯಂ, ಆರೋಗ್ಯಕರ ಕೊಬ್ಬುಗಳು, ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧ ಮೂಲಗಳಾಗಿವೆ. ಕಡಿಮೆ ಕ್ಯಾಲೊರಿ ಅಂಶವನ್ನು ಹೊಂದಿರುವುದರಿಂದ ಇವು ನಿಮ್ಮ ಆರೋಗ್ಯಕ್ಕೆ ಉತ್ತಮ ಆಯ್ಕೆ.
ಬೆರಿ ಹಣ್ಣುಗಳು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಕಗಳಿಂದ ಸಮೃದ್ಧವಾಗಿರುತ್ತದೆ. ಜೀವಕೋಶದ ಹಾನಿ ವೇಗವಾಗಿ ವಯಸ್ಸಾಗಲು ಕಾರಣವಾಗುತ್ತದೆ. ಹಾಗಾಗಿ ಜೀವಕೋಶಗಳ ರಕ್ಷಣೆಗೆ ಬೆರಿ ಹಣ್ಣುಗಳು ಸಹಾಯಕವಾಗಿದೆ. ಬೆರಿ ಹಣ್ಣುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ನೀವು ಬೇಗ ವಯಸ್ಸಾಗುವಂತೆ ಕಾಣಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಬೀಜಗಳು ಬಾದಾಮಿ, ವಾಲ್ನಟ್, ಗೋಡಂಬಿ ಹೀಗೆ ಡ್ರೈ ಫ್ರೂಟ್ಸ್ಗಳು ಆರೋಗ್ಯಕ್ಕೆ ಒಳ್ಳೆಯದು. ಇವು ಪ್ರೋಟೀನ್, ವಿಟಮಿನ್, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬಿನ ಮೂಲದಿಂದ ಸಮೃದ್ಧಿಯಾಗಿರುವುದರಿಂದ ಆರೋಗ್ಯಕ್ಕೆ ಉತ್ತಮ. ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಒಳ್ಳೆಯದು. ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಅವಕಾಡೊಗಳು ವಿಟಮಿನ್ ಬಿ, ಸಿ, ಆರೋಗ್ಯಕರ ಕೊಬ್ಬುಗಳು, ಮೆಗ್ನೀಶಿಯಮ್, ಉತ್ಕರ್ಷಣ ನಿರೋಧಕಗಳು ಆವಕಾಡೊದಲ್ಲಿ ಸಿಗುತ್ತವೆ. ಚರ್ಮದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮಲ್ಲಿ ಶಕ್ತಿ ತುಂಬುತ್ತದೆ. ಇದರಿಂದ ನೀವು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಜೊತೆಗೆ ಹೆಚ್ಚು ಚಟುವಟಿಕೆಯಿಂದ ಕೂಡಿರಲು ಸಹಾಯಕವಾಗಿದೆ.
ಇದನ್ನೂ ಓದಿ:
Health Tips: ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಇಲ್ಲಿವೆ ಸರಳ ಸಲಹೆಗಳು
Women Health: ಮುಟ್ಟಿನ ಸಮಯದಲ್ಲಿ ಮಹಿಳೆಯರು ರನ್ನಿಂಗ್ ಮಾಡಬಹುದೇ? ಆರೋಗ್ಯದಲ್ಲಿನ ಬದಲಾವಣೆ ಬಗ್ಗೆ ತಿಳಿಯಿರಿ