Pollution Side Effects: ನಿಮ್ಮ ಶ್ವಾಸಕೋಶವನ್ನು ಮಾಲಿನ್ಯದಿಂದ ರಕ್ಷಿಸಲು ಈ ಕ್ರಮಗಳನ್ನು ಅನುಸರಿಸಿ

ದೆಹಲಿ ಜನರು ಕಳೆದ ಕೆಲವು ದಿನಗಳಿಂದ ನಿರಂತರ ಮಾಲಿನ್ಯವನ್ನು ಎದುರಿಸುತ್ತಿದ್ದಾರೆ. ಅಲ್ಲಿನ ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿದೆ. ಇದು ಕೇವಲ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಹೀಗಾಗಿ ಮಾಲಿನ್ಯದಿಂದ ಉಂಟಾಗುವ ಶ್ವಾಸಕೋಶ ಸಮಸ್ಯೆ ದೂರ ಮಾಡುವ ಕ್ರಮದ ಬಗ್ಗೆ ಗಮನಹರಿಸುವುದು ಸೂಕ್ತ.

Pollution Side Effects: ನಿಮ್ಮ ಶ್ವಾಸಕೋಶವನ್ನು ಮಾಲಿನ್ಯದಿಂದ ರಕ್ಷಿಸಲು ಈ ಕ್ರಮಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Nov 23, 2021 | 8:07 AM

ಮಾಲಿನ್ಯವು ಶ್ವಾಸಕೋಶಕ್ಕೆ ತುಂಬಾ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಮಾಲಿನ್ಯದ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ದೇಹದ ಅನೇಕ ಭಾಗಗಳು ಹಾನಿಗೊಳಗಾಗುತ್ತವೆ. ಗಾಳಿಯಲ್ಲಿ ಕರಗಿರುವ ಮಾಲಿನ್ಯದ (Pollution) ಈ ಸಣ್ಣ ಕಣಗಳು ಶ್ವಾಸಕೋಶಗಳಿಗೆ ವಿಷವಾಗಿ ಪರಿಣಮಿಸಿದೆ. ಈ ಕಣಗಳು ಉಸಿರಾಟದ ಮೂಲಕ ನಮ್ಮ ದೇಹ ಮತ್ತು ಕರುಳಿನೊಳಗೆ ಪ್ರವೇಶಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಶ್ವಾಸಕೋಶ (Lungs), ಮೂತ್ರಪಿಂಡ, ಯಕೃತ್ತು, ನರಮಂಡಲ, ಕಣ್ಣುಗಳು, ಕೂದಲು, ಚರ್ಮ ಮುಂತಾದ ದೇಹದ ಎಲ್ಲಾ ಭಾಗಗಳ ಮೇಲೆ ಅವು ಪರಿಣಾಮ ಬೀರುತ್ತವೆ. ಅವುಗಳನ್ನು ರಕ್ಷಿಸುವುದು ಬಹಳ ಮುಖ್ಯ. ದೆಹಲಿ-ಎನ್‌ಸಿಆರ್‌ನ ಜನರು ಕಳೆದ ಕೆಲವು ದಿನಗಳಿಂದ ನಿರಂತರ ಮಾಲಿನ್ಯವನ್ನು ಎದುರಿಸುತ್ತಿದ್ದಾರೆ. ಅಲ್ಲಿನ ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿದೆ. ಇದು ಕೇವಲ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಹೀಗಾಗಿ ಮಾಲಿನ್ಯದಿಂದ ಉಂಟಾಗುವ ಶ್ವಾಸಕೋಶ ಸಮಸ್ಯೆ ದೂರ ಮಾಡುವ ಕ್ರಮದ ಬಗ್ಗೆ ಗಮನಹರಿಸುವುದು ಸೂಕ್ತ.

ಮಾಲಿನ್ಯ ಎಂದರೇನು? ಸ್ಮಾಗ್ ಎನ್ನುವುದು ಇಂದಿನ ಹೊಸ ತಲೆಮಾರಿನವರು ಹುಟ್ಟುಹಾಕಿದ ಪದ. ಸಾಮಾನ್ಯ ಭಾಷೆಯಲ್ಲಿ ಇದನ್ನು ಮಬ್ಬು ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಮಾಲಿನ್ಯದ ಸೂಕ್ಷ್ಮ ಕಣಗಳು ವಾತಾವರಣದಲ್ಲಿ ಅಂಟಿಕೊಂಡಾಗ, ವಾತಾವರಣವು ಮಬ್ಬಾಗಿ ಕಾಣಲು ಪ್ರಾರಂಭಿಸುತ್ತದೆ. ಇದನ್ನೇ ಸ್ಮಾಗ್ ಎಂದು ಕರೆಯುತ್ತಾರೆ. ಪಟಾಕಿ ಹೊಗೆ, ಕಲ್ಲಿದ್ದಲು ಸುಡುವಿಕೆ, ಕೈಗಾರಿಕಾ ಘಟಕಗಳಿಂದ ಹೊರಸೂಸುವ ಹೊಗೆ, ವಾಹನಗಳಿಂದ ಉಂಟಾದ ಹೊಗೆ ಮುಂತಾದ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ. ಅದು ವಾತಾವರಣದಲ್ಲಿ ಯಾವುದೇ ದ್ರವ ಅಥವಾ ಘನ ರೂಪದಲ್ಲಿರಬಹುದು. ಈ ಸೂಕ್ಷ್ಮ ಕಣಗಳ ವ್ಯಾಸವು 2.5 ಮೈಕ್ರೋಮೀಟರ್ ಅಥವಾ ಅದಕ್ಕಿಂತ ಕಡಿಮೆ ಇರಬಹುದು. ತೆರೆದ ಕಣ್ಣುಗಳಿಂದ ಅವುಗಳನ್ನು ನೋಡುವುದು ಅಸಾಧ್ಯ. ಈ ಕಣಗಳ ಸಂಖ್ಯೆಯು ನಿಗದಿತ ಮಿತಿಯನ್ನು ಮೀರಿದಾಗ, ಅವು ವಾತಾವರಣದಲ್ಲಿ ಮಬ್ಬು ರೂಪದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅವು ನಮ್ಮ ಶ್ವಾಸಕೋಶಗಳು, ಮೂತ್ರಪಿಂಡ, ಯಕೃತ್ತು, ಕಣ್ಣುಗಳು ಹೀಗೆ ಎಲ್ಲಾ ಅಂಗಗಳಿಗೆ ಅಪಾಯಕಾರಿ.

ಶ್ವಾಸಕೋಶದ ರಕ್ಷಣಾ ಕ್ರಮ ಹೇಗೆ? 1. ಹೊಗೆ ಹೆಚ್ಚಾಗಿ ಕಂಡುಬಂದ ಸಮಯದಲ್ಲಿ ವಾಕ್ ಮಾಡಲು ಹೋಗಬೇಡಿ. ನೀವು ಹೊರಗೆ ಹೋಗುವುದು ಅನಿವಾರ್ಯವಾದರೆ ಮಾಸ್ಕ್ ಬಳಸಿ ಅಥವಾ ನಿಮ್ಮ ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ಆದರೆ ಬಟ್ಟೆಯನ್ನು ಎರಡು ಪದರಗಳಲ್ಲಿ ಬಳಸಿ.

2. ಬೆಳಗಿನ ವಾಕಿಂಗ್ ತಪ್ಪಿಸಿ. ಹೋಗಬೇಕಾದರೂ ತಡವಾಗಿ ಹೊರಡಿ. ಖಾಲಿ ಹೊಟ್ಟೆಯಲ್ಲಿ ಹೋಗಬಾರದು ಎನ್ನುವುದನ್ನು ನೆನಪಿಡಿ. ಜತೆಗೆ ಬಾಯಿ ಮತ್ತು ಮೂಗನ್ನು ಚೆನ್ನಾಗಿ ಮುಚ್ಚಿಕೊಂಡು ವಾಕಿಂಗ್ ಹೋಗಿ.

3. ಹೊರಗೆ ಹೋಗುವಾಗ ಕಣ್ಣಿಗೆ ಕನ್ನಡಕವನ್ನು ಧರಿಸಿ ಮತ್ತು ಹೊರಗಿನಿಂದ ಬಂದ ನಂತರ, ತಣ್ಣನೆಯ ಮತ್ತು ಶುದ್ಧ ನೀರಿನಿಂದ ಕಣ್ಣುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

4. ಪರಿಸರದ ಶುದ್ಧೀಕರಣಕ್ಕಾಗಿ ತುಳಸಿ ಮತ್ತು ಮನಿ ಪ್ಲಾಂಟ್ ಇತ್ಯಾದಿ ಗಿಡಗಳನ್ನು ಮನೆ ಮತ್ತು ಸುತ್ತಮುತ್ತ ನೆಡಬೇಕು.

5. ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಿ. ಇದಕ್ಕಾಗಿ ಹೆಚ್ಚು ನೀರು ಕುಡಿಯಿರಿ. ಜತೆಗೆ ಬೆಲ್ಲ ತಿನ್ನಿ.

6. ಮನೆಯಲ್ಲಿ ಯೋಗ ಮತ್ತು ವ್ಯಾಯಾಮ ಮಾಡಿ. ಇದು ನಿಮ್ಮ ದೇಹದ ಎಲ್ಲಾ ಭಾಗಗಳನ್ನು ಶುದ್ಧೀಕರಿಸುತ್ತದೆ. ಆದರೆ ತೆರೆದ ಸ್ಥಳದಲ್ಲಿ ವ್ಯಾಯಾಮ ಮಾಡಬೇಡಿ, ಒಳಾಂಗಣದಲ್ಲಿ ಮಾಡಿ.

7. ಸಾಕಷ್ಟು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಿರಿ. ಆದರೆ ತಿನ್ನುವ ಮೊದಲು ಅವುಗಳನ್ನು ಸಂಪೂರ್ಣವಾಗಿ ತೊಳೆಯಿರಿ.

8. ನೀವು ಆಸ್ತಮಾ ಅಥವಾ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದರೆ, ಮನೆಯಿಂದ ಹೊರಗೆ ಹೋಗುವುದನ್ನು ಸಂಪೂರ್ಣವಾಗಿ ತಪ್ಪಿಸಿ.

9. ಪಾಲಿಥಿನ್, ಕಸ ಇತ್ಯಾದಿಗಳನ್ನು ಸುಡುವುದನ್ನು ನಿಲ್ಲಿಸಿ. ಮನೆಯ ಸುತ್ತಲೂ ಹೆಚ್ಚು ಗಿಡಗಳನ್ನು ನೆಡಿ ಮತ್ತು ಇನ್ನಿತರ ಜನರನ್ನು ಪ್ರೋತ್ಸಾಹಿಸಿ.

ಇದನ್ನೂ ಓದಿ: ಒಮೆಗಾ-3 ಸಮೃದ್ಧ ಆಹಾರಗಳು ಯಾವುದು ಗೊತ್ತಾ? ಆರೋಗ್ಯ ಕಾಳಜಿಗಾಗಿ ಇವುಗಳನ್ನು ಸೇವಿಸಿ

Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM