ಮೆಂತ್ಯೆಯೊಂದಿಗೆ ಈ ವಸ್ತುವನ್ನು ಬೆರೆಸಿ ಹಚ್ಚಿದರೆ ಕೂದಲು ಸೊಂಪಾಗಿ, ಉದ್ದವಾಗಿ ಬೆಳೆಯುತ್ತಂತೆ

ಪ್ರತಿಯೊಬ್ಬರೂ ಕೂದಲು ಉದ್ದವಾಗಿ ಬೆಳೆಯಬೇಕು, ರೇಷ್ಮೆಯಂತಹ ಕೂದಲು ತಮ್ಮದಾಗಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಹಲವಾರು ಕಸರತ್ತುಗಳನ್ನು ಮಾಡುತ್ತಿರುತ್ತಾರೆ, ರಾಸಾಯನಿಕಯುಕ್ತ ವಸ್ತುಗಳನ್ನು ಬಳಸಿ ಕೂದಲಿನ ಆರೋಗ್ಯವನ್ನೇ ಹಾಳುಮಾಡಿಬಿಡುತ್ತಾರೆ. ಇದರ ಬದಲಿಗೆ ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುವಂತಹ ಈ ಎರಡು ವಸ್ತುಗಳ ಪೇಸ್ಟ್‌ ತಯಾರಿಸಿ ಕೂದಲಿಗೆ ಹಚ್ಚಿ ನೋಡಿ, ಖಂಡಿತವಾಗಿಯೂ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.

ಮೆಂತ್ಯೆಯೊಂದಿಗೆ ಈ ವಸ್ತುವನ್ನು ಬೆರೆಸಿ ಹಚ್ಚಿದರೆ ಕೂದಲು ಸೊಂಪಾಗಿ, ಉದ್ದವಾಗಿ ಬೆಳೆಯುತ್ತಂತೆ
ಸಾಂದರ್ಭಿಕ ಚಿತ್ರ
Image Credit source: Freepik

Updated on: Oct 28, 2025 | 10:27 AM

ರೇಶ್ಮೆಯಂತಹ ದಟ್ಟವಾದ, ಉದ್ದವಾದ ಆರೋಗ್ಯ ಕೂದಲನ್ನು (hair) ಹೊಂದಲು ಪ್ರತಿಯೊಬ್ಬರೂ ಸಹ ಬಯಸುತ್ತಾರೆ. ಆದರೆ ಅನಾರೋಗ್ಯಕರ ಜೀವನಶೈಲಿಯ ಕಾರಣದಿಂದಾಗಿ ಇಂದು ಅನೇಕ ಜನರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಅನೇಕರು ದುಬಾರಿ ಉತ್ಪನ್ನ, ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಇದರ ಬದಲಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ಲಭ್ಯವಿರುವಂತಹ ವಸ್ತುಗಳಿಂದಲೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೌದು ದಟ್ಟವಾದ ಕೂದಲು ನಿಮ್ಮದಾಗಬೇಕೆಂದು ಬಯಸಿದರೆ ನೀವು ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವಂತಹ ಮೆಂತ್ಯ ಮತ್ತು ಈರುಳ್ಳಿಯ ಹೇರ್‌ ಮಾಸ್ಕ್‌ ತಯಾರಿಸಿ ಕೂದಲಿಗೆ ಹಚ್ಚಿ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.

ಕೂದಲಿನ ಬೆಳವಣಿಗೆಗೆ ಸಹಕಾರಿ ಮೆಂತ್ಯ ಈರುಳ್ಳಿ ಹೇರ್‌ಮಾಸ್ಕ್‌:

ಮೆಂತ್ಯ ಮತ್ತು ಈರುಳ್ಳಿ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಲು ತುಂಬಾನೇ ಸಹಕಾರಿಯಾಗಿದೆ. ಇವೆರಡೂ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿವೆ. ಈರುಳ್ಳಿಯಲ್ಲಿರುವ ಗಂಧಕವು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ನೆತ್ತಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಕೂದಲಿನ ಬೆಳವಣಿಗೆಯನ್ನು ಸಹ ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ, ಮೆಂತ್ಯದಲ್ಲಿರುವ ಅಗತ್ಯ ಪೋಷಕಾಂಶಗಳಾದ ಫೋಲಿಕ್ ಆಮ್ಲ, ಕಬ್ಬಿಣ ಮತ್ತು ಸತುವು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅದೇ ರೀತಿ, ಈರುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಲಕ್ಷಣಗಳು ತಲೆಹೊಟ್ಟು ಮತ್ತು ತುರಿಕೆಯಂತಹ  ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ಹೀಗೆ ಇದು ಕೂದಲು ಉದುರುವಿಕೆಯಂತಹ ಯಾವುದೇ ಸಮಸ್ಯೆಗಳಿಲ್ಲದೆ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೊಣಕೈ ಕಪ್ಪು ಕಲೆಯನ್ನು ಹೋಗಲಾಡಿಸಲು ಅಡುಗೆ ಮನೆಯಲ್ಲಿ ಲಭ್ಯವಿರುವ ವಸ್ತುಗಳೇ ಸಾಕು

ಇದಕ್ಕಾಗಿ ನೀವು ಈರುಳ್ಳಿ ಮತ್ತು ಮೆಂತ್ಯೆಯ ಹೇರ್‌ ಮಾಸ್ಕ್‌ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಹೇರ್‌ ಮಾಸ್ಕ್‌ ತಯಾರಿಸಲು ಮೊದಲು ಮೆಂತ್ಯವನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ನೆನೆಸಿಟ್ಟ ಮೆಂತ್ಯೆಗೆ ಈರುಳ್ಳಿಯನ್ನು ಸೇರಿಸಿ ನಯವಾದ ಪೇಸ್ಟ್‌ ತಯಾರಿಸಿ ನೆತ್ತಿ ಮತ್ತು ಕೂದಲಿನ ಬುಡಕ್ಕೆ ಹಚ್ಚಿ, ಚೆನ್ನಾಗಿ ಮಸಾಜ್‌ ಮಾಡಿಕೊಳ್ಳಿ. 30 ನಿಮಿಷಗಳ ಬಳಿಕ ಸಲ್ಫೇಟ್‌ ಮುಕ್ತ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಈ ಹೇರ್‌ ಮಾಸ್ಕನ್ನು ನೀವು ವಾರಕ್ಕೆ ಎರಡರಿಂದ ಮೂರು ಬಾರಿ ಕೂದಲಿಗೆ ಹಚ್ಚಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ