ಮೊಣಕೈ ಕಪ್ಪು ಕಲೆಯನ್ನು ಹೋಗಲಾಡಿಸಲು ಅಡುಗೆ ಮನೆಯಲ್ಲಿ ಲಭ್ಯವಿರುವ ಈ ವಸ್ತುಗಳೇ ಸಾಕು
ಮೊಣಕೈ ಮತ್ತು ಮೊಣಕಾಲು ಕಪ್ಪಗಾಗಿರುತ್ತವೆ ಎಂಬ ಕಾರಣಕ್ಕೆ ಅನೇಕರು ಶಾರ್ಟ್ ಡ್ರೆಸ್, ಸ್ಲೀವ್‌ಲೆಸ್ ಬಟ್ಟೆ ತೊಡಲು ಮುಜುಗರಪಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ಈ ಕಲೆಯನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದ್ರೆ ನಿಮ್ಗೊತ್ತಾ ಹಣವೇ ಖರ್ಚು ಮಾಡದೆ ಅಡುಗೆ ಮನೆಯಲ್ಲಿ ಲಭ್ಯವಿರುವ ಈ ಕೆಲವು ವಸ್ತುಗಳನ್ನು ಬಳಸಿ ಮೊಣ ಕೈ, ಮೊಣಕಾಲಿನ ಕಪ್ಪು ಕಲೆಯನ್ನು ಹೋಗಲಾಡಿಸಬಹುದು. ಆ ವಸ್ತುಗಳು ಯಾವುವು, ಅವುಗಳ ಮೂಲಕ ಕಪ್ಪಗಾದ ಮೊಣಕೈಯನ್ನು ಬೆಳ್ಳಗಾಗಿಸುವುದು ಹೇಗೆ ಎಂಬುದನ್ನು ನೋಡಿ.

ಸುಂದರ ತ್ವಚೆ ಬೇಕೆಂದು ಎಲ್ಲರೂ ಬಯಸುತ್ತಾರೆ. ಹಲವರ ಮೈ ಬಣ್ಣ ಎಷ್ಟೇ ಬಿಳಿಯಾಗಿದ್ದರೂ ಮೊಣಕೈ (dark elbows) ಮತ್ತು ಮೊಣಕಾಲು ಕಪ್ಪಗಾಗಿರುತ್ತವೆ. ಹೆಚ್ಚಿನವರು ಈ ಬಗ್ಗೆ ಗಮನವೇ ಕೊಡುವುದಿಲ್ಲ, ಆದರೆ ಈ ಕಪ್ಪು ಕಲೆಗಳು ಕೈ ಅಂದವನ್ನು ಹಾಳು ಮಾಡಿಬಿಡುತ್ತವೆ. ಇದಕ್ಕಾಗಿ ಮೊಣಕೈಯಲ್ಲಿನ ಕಪ್ಪು ಕಲೆಯನ್ನು ತೆಗೆದುಹಾಕುವುದು ಬಹಳ ಮುಖ್ಯವಾಗಿದೆ. ನೀವು ಇದಕ್ಕಾಗಿ ದುಬಾರಿ ಉತ್ಪನ್ನ, ಹಣ ಖರ್ಚು ಮಾಡಬೇಕೆಂದಿಲ್ಲ, ಅಡುಗೆ ಮನೆಯಲ್ಲಿ ಸಿಗುವ ಈ ವಸ್ತುಗಳಿದ್ದರೆ ಸಾಕು. ಆ ವಸ್ತುಗಳು ಯಾವುವು, ಅವುಗಳ ಮೂಲಕ ಕಪ್ಪಗಾದ ಮೊಣಕೈಯನ್ನು ಬೆಳ್ಳಗಾಗಿಸುವುದು ಹೇಗೆ ಎಂಬುದನ್ನು ನೋಡಿ.
ಮೊಣಕೈ ಕಪ್ಪು ಕಲೆಯನ್ನು ಹೋಗಲಾಡಿಸಲು ಮನೆಮದ್ದು:
ಆಲಿವ್ ಎಣ್ಣೆ ಮತ್ತು ಸಕ್ಕರೆ: ಮೊಣಕೈ ಮೊಣಕಾಲು ಕಪ್ಪುಕಲೆಗಳನ್ನು ತೊಡೆದುಹಾಕಲು, ನೀವು ನಿಯಮಿತವಾಗಿ ಸ್ಕ್ರಬ್ ಮಾಡಬೇಕಾಗುತ್ತದೆ. ಇದನ್ನು ಎಕ್ಸ್‌ಫೋಲಿಯೇಟಿಂಗ್ ಎಂದು ಕರೆಯಲಾಗುತ್ತದೆ. ಇದರರ್ಥ ಚರ್ಮದ ಮೇಲೆ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕುವುದು. ಹೀಗೆ ಮಾಡುವುದರಿಂದ ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮವು ಹೊಳೆಯುತ್ತದೆ. ಇದನ್ನು ಪರಿಣಾಮಕಾರಿಯಾಗಿ ಮಾಡಲು ಆಲಿವ್ ಎಣ್ಣೆಯನ್ನು ಉಪಯೋಗಿಸಬಹುದು. ಆಲಿವ್ ಎಣ್ಣೆಗೆ ಸಕ್ಕರೆ ಸೇರಿಸಿ ಸ್ಕ್ರಬ್ ಮಾಡಿ, ವಾರದಲ್ಲಿ ಎರಡರಿಂದ ಮೂರು ದಿನ ಹೀಗೆ ಮಾಡುವುದರಿಂದ ಮೊಣಕೈ ಕಪ್ಪು ಕಲೆಯನ್ನು ಹೋಗಲಾಡಿಸಬಹುದು.
ಅಡುಗೆ ಸೋಡಾ: ಮೊಣಕೈ, ಮೊಣಕಾಲು ಕಪ್ಪು ಕಲೆಯನ್ನು ತೊಡೆದುಹಾಕಲುಅಡುಗೆ ಸೋಡಾ ಕೂಡ ಪರಿಣಾಮಕಾರಿಯಾಗಿದೆ. ಅಡಿಗೆ ಸೋಡಾವನ್ನು ನೇರವಾಗಿ ಹಚ್ಚುವುದು ಒಳ್ಳೆಯದಲ್ಲ. ಬದಲಾಗಿ, ಅದನ್ನು ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಮೊಣಕೈಗೆ ಹಚ್ಚಿ. ಇದು ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಮತ್ತು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.
ನಿಂಬೆ ರಸ: ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ನಿಂಬೆಹಣ್ಣು ಸಹ ಮೊಣಕೈ ಕಪ್ಪು ಕಲೆಯನ್ನು ತೊಡೆದುಹಾಕಲು ಸಹಕಾರಿಯಾಗಿದೆ. ಇದು ಮೆಲನಿನ್ ಉತ್ಪಾದನೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ಮೆಲನಿನ್ ಅಧಿಕವಾಗಿ ಉತ್ಪತ್ತಿಯಾದಾಗ, ಚರ್ಮವು ಕಪ್ಪಾಗುತ್ತದೆ. ನಿಂಬೆ ಇದರ ಉತ್ಪಾದನೆಯನ್ನು ಪರಿಣಾಕಾರಿಯಾಗಿ ಕಡಿಮೆ ಮಾಡುತ್ತದೆ. ಇದಕ್ಕಾಗಿ ನಿಂಬೆ ರಸವನ್ನು ಸ್ವಲ್ಪ ಜೀನುತುಪ್ಪದೊಂದಿಗೆ ಬೆರೆಸಿ ಮೊಣಕೈಗೆ ಹಚ್ಚಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಕೈ ತೊಳೆಯಿರಿ.
ಇದನ್ನೂ ಓದಿ: ಮನೆ ತುಂಬಾ ಜಿರಳೆಗಳ ಕಾಟವೇ? ಕಾಕ್ರೋಜ್‌ಗಳನ್ನು ಓಡಿಸಲು ಇಲ್ಲಿವೆ ಸಿಂಪಲ್ ಟ್ರಿಕ್ಸ್
ಆಲೂಗಡ್ಡೆ: ಆಲೂಗಡ್ಡೆ ನೈಸರ್ಗಿಕ ಕಿಣ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇವು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಬಹಳ ಉಪಯುಕ್ತವಾಗಿವೆ. ಇದಕ್ಕಾಗಿ ನೀವು ಆಲೂಗಡ್ಡೆಯನ್ನು ನೇರವಾಗಿ ಕಪ್ಪು ಕಲೆಯಿರುವ ಜಾಗಕ್ಕೆ ಸ್ಕ್ರಬ್ ಮಾಡಿ. ಇದಲ್ಲದೆ ಅರಶಿನಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ ಇದನ್ನು ಕೂಡ ಮೊಣಕೈಗೆ ಹಚ್ಚಿಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




