AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇದೇ ಕಾರಣಕ್ಕಂತೆ ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಬಡವರಾಗಿಯೇ ಉಳಿಯುವುದು

ಜೀವನದಲ್ಲಿ ಪ್ರಗತಿ ಸಾಧಿಸಬೇಕು, ಹಣ, ಶ್ರೀಮಂತಿಕೆ ಗಳಿಸಬೇಕು ಎಂದು ಪ್ರತಿಯೊಬ್ಬರೂ ಸಹ ಕಠಿಣ ಶ್ರಮ ಪಡುತ್ತಾರೆ. ಹೀಗೆ ಹಗಲಿರುಳು ದುಡಿದರೂ, ಎಷ್ಟೇ ಸಂಪಾದನೆ ಮಾಡಿದರೂ ಕೆಲವರು ಜೀವನದಲ್ಲಿ ಪ್ರಗತಿಯನ್ನು ಹೊಂದುವುದಿಲ್ಲ, ಬಡವರಾಗಿಯೇ ಉಳಿದುಬಿಡುತ್ತಾರೆ. ಇದರ ಹಿಂದೆಯೂ ಒಂದಷ್ಟು ಕಾರಣಗಳಿವೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹಾಗಿದ್ರೆ ಯಾವ ಕಾರಣಗಳಿಗಾಗಿ ಕೆಲವರು ಕಠಿಣ ಪರಿಶ್ರಮದ ಹೊರತಾಗಿಯೂ ಬಡವರಾಗಿಯೇ ಉಳಿಯುತ್ತಾರೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಇದೇ ಕಾರಣಕ್ಕಂತೆ ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಬಡವರಾಗಿಯೇ ಉಳಿಯುವುದು
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Oct 28, 2025 | 5:19 PM

Share

ಸಾಕಷ್ಟು ಹಣ ಗಳಿಸಬೇಕು, ಶ್ರೀಮಂತರಾಗಬೇಕು, ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ಬಾಳಬೇಕು ಎಂಬುದು ಎಲ್ಲರ ಬಯಕೆ. ಇದಕ್ಕಾಗಿ ಕಠಿಣ ಪರಿಶ್ರಮವನ್ನೂ (Hard Work) ಪಡುತ್ತಾರೆ. ಹೀಗೆ ಕೆಲವರು ಕಠಿಣ ಪರಿಶ್ರಮಪಟ್ಟು ಯಶಸ್ಸಿನ ಹಾದಿಯತ್ತ ಸಾಗಿದರೆ, ಇನ್ನೂ ಕೆಲವರು ಎಷ್ಟೇ ಹಣ ಗಳಿಸಿದರೂ ಬಡವರಾಗಿಯೇ ಉಳಿದು ಬಿಡುತ್ತಾರೆ, ಅವರ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ. ಈ ರೀತಿ ಆಗುವುದಕ್ಕೂ ಒಂದಷ್ಟು ಕಾರಣಗಳಿವೆಯೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಕಠಿಣ ಪರಿಶ್ರಮದ ಹೊರತಾಗಿಯೂ ಒಬ್ಬ ವ್ಯಕ್ತಿ ಬಡವನಾಗಿಯೇ ಉಳಿಯಲು ಕಾರಣಗಳೇನು, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಕಠಿಣ ಪರಿಶ್ರಮದ ಹೊರತಾಗಿಯೂ ಕೆಲವರು ಬಡವರಾಗಿಯೇ ಉಳಿಯುವುದೇಕೆ?

ಸ್ನೇಹ: ದುರ್ಜನರ ಸಂಗವನ್ನು ಮಾಡಿದರೂ ನೀವು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗದು ಎನ್ನುತ್ತಾರೆ ಚಾಣಕ್ಯರು. ಇಂತಹ ಜನರಿಂದ ನಿಮಗೆ ಯಾವಾಗಲೂ ಸಮಸ್ಯೆಗಳೇ ಉಂಟಾಗುತ್ತವೆ, ಇವರುಗಳು ಪ್ರಗತಿಗೂ ಅಡ್ಡಿಯಾಗುತ್ತಾರೆ. ಹಾಗಾಗಿ ಜೀವನದಲ್ಲಿ ಪ್ರಗತಿ ಸಾಧಿಸಲು ಬಯಸಿದರೆ ಇಂತಹ ಜನರಿಂದ ಸಾಧ್ಯವಾದಷ್ಟು ದೂರವಿರಿ.

ದುರಭ್ಯಾಸಗಳು: ಮದ್ಯಪಾನ, ಧೂಮಪಾನ ಇತ್ಯಾದಿ ದುರಭ್ಯಾಸಗಳಿದ್ದರೂ ಗಳಿಸಿದ ಹಣ ನಿಮ್ಮ ಕೈಯಲ್ಲಿ ಉಳಿಯಲು ಸಾಧ್ಯವಿಲ್ಲ, ನೀವು ಬಡವರಾಗಿಯೇ ಉಳಿಯಬೇಕಾಗುತ್ತದೆ ಎಂದು ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ದುರಭ್ಯಾಸಗಳ ಬದಲಿಗೆ ಗಳಿಸಿದ ಹಣವನ್ನು ಉಳಿತಾಯ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಇದನ್ನೂ ಓದಿ
Image
ಕೆಲಸದ ಸ್ಥಳದಲ್ಲಿ ಇಂತಹ ಜನರಿಂದ ನೀವು ದೂರವಿದ್ದಷ್ಟು ಒಳ್ಳೆಯದು
Image
ಇತರರಿಗೆ ಸಹಾಯ ಮಾಡುವ ಮುನ್ನ, ಚಾಣಕ್ಯರ ಈ ಮಾತುಗಳನ್ನೊಮ್ಮೆ ಕೇಳಿ
Image
ಪುರುಷರ ವ್ಯಕ್ತಿತ್ವನ್ನು ಆಕರ್ಷಕಗೊಳಿಸುವ ಗುಣಗಳಿವು
Image
ಜೀವನದಲ್ಲಿ ಈ ಎರಡು ವಿಷಯಗಳಿಗೆ ಹೆದರಬಾರದು

ಆಲೋಚನೆಗಳು: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಜೀವನದಲ್ಲಿ ಪ್ರಗತಿ ಸಾಧಿಸಲು ಮತ್ತು ಹಣ ಗಳಿಸಲು ಬಯಸಿದರೆ, ನಿಮ್ಮ ಆಲೋಚನೆಗಳು ಸರಿಯಾಗಿರಬೇಕು ಮತ್ತು ಸರಿಯಾದ ದಿಕ್ಕಿನಲ್ಲಿ ಸಾಗಬೇಕು. ನೀವು ಹೀಗೆ ಮಾಡಿದಾಗ, ಮಾತ್ರ ತಪ್ಪು ದಾರಿಯನ್ನು ಹಿಡಿಯುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: ಕೆಲಸದ ಸ್ಥಳದಲ್ಲಿ ಇಂತಹ ಜನರಿಂದ ನೀವು ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ

ಸಮಯ ವ್ಯರ್ಥ ಮಾಡುವುದು: ಸಮಯವನ್ನು ವ್ಯರ್ಥ ಮಾಡಬಾರದು. ಜೀವನವನ್ನು ಅರ್ಥಪೂರ್ಣಗೊಳಿಸಲು ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು ಎಂದು  ಚಾಣಕ್ಯ ಸಲಹೆ ನೀಡುತ್ತಾರೆ. ನಿಮಗೆ ಸಮಯವಿದ್ದರೆ, ನೀವು ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು. ಹಾಗೆ ಮಾಡದಿದ್ದರೆ ನೀವು ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.

ಯಶಸ್ಸಿನ ಮೂಲ ಮಂತ್ರ: ಚಾಣಕ್ಯರ  ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಗಳಿಸಲು, ಹಣ ಸಂಪಾದನೆ ಮಾಡಲ ಕಠಿಣ ಪರಿಶ್ರಮ ಮಾತ್ರವಲ್ಲ, ಉತ್ತಮ ನಡವಳಿಕೆ ಮತ್ತು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯಗಳೂ ಅತ್ಯಗತ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ