AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಕೆಲಸದ ಸ್ಥಳದಲ್ಲಿ ಇಂತಹ ಜನರಿಂದ ನೀವು ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ

ಕೆಲಸದ ಸ್ಥಳದಲ್ಲಿ ಎಲ್ಲಾ ಸಹೋದ್ಯೋಗಿಗಳು ಮೇಲ್ನೋಟಕ್ಕೆ ಸ್ನೇಹಪರರಾಗಿ ಕಾಣಿಸಬಹುದು, ಆದರೆ ಎಲ್ಲರೂ ನಿಮ್ಮ ಒಳಿತನ್ನೇ ಬಯಸುತ್ತಾರೆ ಎನ್ನಲು ಸಾಧ್ಯವಿಲ್ಲ. ಕೆಲವೊದಿಷ್ಟು ಜನ ನಿಮ್ಮ ವೃತ್ತಿ ಜೀವನಕ್ಕೆ ಕುತ್ತು ತರುವಂತಹ ಕೆಲಸವನ್ನು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತಹ ಜನರಿಂದ ಸಾಧ್ಯವಾದಷ್ಟು ದೂರವಿರಿ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಎಂತಹ ಸಹದ್ಯೋಗಿಗಳಿಂದ ದೂರವಿರಬೇಕು ಎಂಬುದನ್ನು ತಿಳಿದುಕೊಳ್ಳಿ.

Chanakya Niti: ಕೆಲಸದ ಸ್ಥಳದಲ್ಲಿ ಇಂತಹ ಜನರಿಂದ ನೀವು ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Freepik
ಮಾಲಾಶ್ರೀ ಅಂಚನ್​
|

Updated on: Oct 27, 2025 | 5:20 PM

Share

ಮನೆಯವರು, ಸ್ನೇಹಿತರನ್ನು ನಂಬುವಂತೆ ಕೆಲಸದ ಸ್ಥಳದಲ್ಲಿ (workplace) ಎಲ್ಲರನ್ನೂ ಕುರುಡಾಗಿ ನಂಬಲು ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ಒಳ್ಳೆಯವರಾಗಿ ಕಂಡರೂ ಕೂಡ ತಮ್ಮ ಸ್ವಂತ ಲಾಭಕ್ಕಾಗಿ ರಾಜಕೀಯ ಮಾಡುವವರು, ನಿಮ್ಮ ಬೆನ್ನಹಿಂದೆ ಮಸಲತ್ತು ಮಾಡುವವರು ತುಂಬಾ ಜನ ಇರುತ್ತಾರೆ. ಅಂತಹ ಸಹದ್ಯೋಗಿಗಳನ್ನು ಕುರುಡಾಗಿ ನಂಬಿದರೆ ಖಂಡಿತವಾಗಿಯೂ ನಿಮ್ಮ ವೃತ್ತಿ ಜೀವನಕ್ಕೆ ಕುತ್ತು ಬರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಅದರಲ್ಲೂ ಈ ಒಂದಷ್ಟು ಜನರಿಂದ ಸಾಧ್ಯವಾದಷ್ಟು ದೂರವಿರಬೇಕಂತೆ, ಅಂತಹವರನ್ನು ಯಾವುದೇ ಕಾರಣಕ್ಕೂ ನಂಬಬಾರದಂತೆ. ಹಾಗಿದ್ದರೆ ಕೆಲಸದ ಸ್ಥಳದಲ್ಲಿ ಎಂತಹ ಜನರಿಂದ ದೂರವಿದ್ದಷ್ಟು ಒಳ್ಳೆಯದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಕೆಲಸದ ಸ್ಥಳದಲ್ಲಿ ಇಂತಹ ಜನರಿಂದ ದೂರವಿರಿ:

ಬೆನ್ನ ಹಿಂದೆ ಮಾತನಾಡುವ ಜನರಿಂದ ದೂರವಿರಿ: ನಿಮ್ಮ ಮುಂದೆ ಸಿಹಿಯಾದ ಮಾತುಗಳನ್ನಾಡುವ ಮತ್ತು ನಿಮ್ಮ ಬೆನ್ನ ಹಿಂದೆ ಇತರ ಸಹದ್ಯೋಗಿಗಳೊಂದಿಗೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರಿಂದ ನೀವು ಸಾಧ್ಯವಾದಷ್ಟು ದೂರವಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಏಕೆಂದರೆ ಇಂತಹ ಜನರು ನಿಮ್ಮ ಕೆಟ್ಟದ್ದನ್ನೇ ಬಯಸುತ್ತಾರೆ, ಅಂತಹವರು ಖಂಡಿತವಾಗಿಯೂ ನಿಮ್ಮ ವೃತ್ತಿ ಜೀವನದ ಏಳಿಗೆಗೆ ಮುಳುವಾಗುತ್ತಾರೆ. ಹಾಗಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ಅಂತಹ ಜನರಿದ್ದರೆ ಅವರಿಂದ ಸಾಧ್ಯವಾದಷ್ಟು ದೂರವಿರಿ.

ನಿಮ್ಮನ್ನು ಗೇಲಿ ಮಾಡುವವರಿಂದ ದೂರವಿರಿ: ಕಚೇರಿಯಲ್ಲಿ ಕೆಲವರು ಪ್ರತಿಯೊಂದು ಸಣ್ಣ ವಿಷಯಕ್ಕೂ ನಿಮ್ಮನ್ನೇ ಟಾರ್ಗೆಟ್‌ ಮಾಡಿ ಕಾಮೆಂಟ್‌ಗಳು ಅಥವಾ ತಮಾಷೆ ಮಾಡುತ್ತಾರೆ, ಅಂತಹ ಜನರಿಂದ ನೀವು ಅಂತರ ಕಾಯ್ದುಕೊಂಡಷ್ಟು ಒಳ್ಳೆಯದು. ಏಕೆಂದರೆ ಇವರ ಮಾತುಗಳಿಂದ ನಿಮ್ಮ ಮನಸ್ಸಿಗೂ ನೋವಾಗುವುದಲ್ಲೇ ಅವರು ನಿಮ್ಮ ಗೌರವಕ್ಕೂ ಧಕ್ಕೆ ತರುತ್ತಾರೆ. ಆದ್ದರಿಂದ, ಅಂತಹ ಜನರಿಂದ ದೂರವಿರುವುದು ನಿಮಗೆ ಮತ್ತು ನಿಮ್ಮ ವೃತ್ತಿಜೀವನಕ್ಕೆ ಉತ್ತಮ.

ಇದನ್ನೂ ಓದಿ
Image
ಇತರರಿಗೆ ಸಹಾಯ ಮಾಡುವ ಮುನ್ನ, ಚಾಣಕ್ಯರ ಈ ಮಾತುಗಳನ್ನೊಮ್ಮೆ ಕೇಳಿ
Image
ಪುರುಷರ ವ್ಯಕ್ತಿತ್ವನ್ನು ಆಕರ್ಷಕಗೊಳಿಸುವ ಗುಣಗಳಿವು
Image
ಜೀವನದಲ್ಲಿ ಈ ಎರಡು ವಿಷಯಗಳಿಗೆ ಹೆದರಬಾರದು
Image
ಈ ಗುಣಗಳನ್ನು ಹೊಂದಿರುವವರು ಸವಾಲುಗಳನ್ನು ಎದುರಿಸುವಲ್ಲಿ ನಿಸ್ಸಿಮರು

ನಿಮ್ಮನ್ನು ಕೀಳಾಗಿ ಕಾಣುವ ಜನರಿಂದ ದೂರವಿರಿ: ಕೆಲಸದ ಸ್ಥಳದಲ್ಲಿ ಕೆಲವೊಬ್ಬರು ನೀವು ಸಣ್ಣವರು ನಿಮಗೆ ಕೆಲಸದ ಅನುಭವವಿಲ್ಲ ಎಂದು ನಿಮ್ಮ ಕೀಳಾಗಿ ಕಾಣುತ್ತಾರೆ. ಅವರು ಸದಾ ನಿಮ್ಮಲ್ಲಿ ತಪ್ಪುಗಳನ್ನೇ ಹುಡುಕುತ್ತಿರುತ್ತಾರೆ. ಅಲ್ಲದೆ ಅಂತಹ ಜನರು ನಿಮ್ಮ ಕೆಲಸದ ದಕ್ಷತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಈ ಜನರಿಂದ ದೂರವಿರಿ.

ಇದನ್ನೂ ಓದಿ: ಇತರರಿಗೆ ಸಹಾಯ ಮಾಡುವ ಮುನ್ನ, ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಲು ಮರೆಯದಿರಿ

ಅಸೂಯೆಪಡುವ ಜನರಿಂದ ದೂರವಿರಿ: ನಿಮ್ಮ ಬಾಸ್ ಅಥವಾ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಹೊಗಳಿದರೆ, ಅದಕ್ಕೆ ಒಂದಷ್ಟು ಜನ ಅಸೂಯೆಪಟ್ಟುಕೊಳ್ಳುತ್ತಾರೆ. ಅಂತಹ ಜನರಿಂದ ಸಾಧ್ಯವಾದಷ್ಟು ದೂರವಿರಲು ಪ್ರಯತ್ನಿಸಿ, ಏಕೆಂದರೆ ಅವರು ನಿಮ್ಮ ಪ್ರಗತಿಯ ಬಗ್ಗೆ ಅಸೂಯೆಪಡುವುದು ಮಾತ್ರವಲ್ಲದೆ  ನಿಮ್ಮ ಯಶಸ್ಸಿಗೂ ಅಡ್ಡಿಯಾಗುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!