ಹಬ್ಬವೆಂದ ಮೇಲೆ ಮನೆ ಮಂದಿಯೆಲ್ಲಾ ಸೇರಿ ಹಬ್ಬದಡುಗೆಯನ್ನು ಮಾಡುತ್ತಾರೆ. ಬಹುತೇಕ ಹಬ್ಬಗಳಲ್ಲಿ ದೇವರಿಗೆ ಪ್ರಸಾದ ರೂಪದಲ್ಲಿ ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಇಡಲಾಗುತ್ತದೆ. ಆದರೆ ಈ ಸಮಯದಲ್ಲಿ ದಿಢೀರನೆ ಆರೋಗ್ಯಕರವಾದ ಈ ರೆಸಿಪಿಯನ್ನು ಟ್ರೈ ಮಾಡಬಹುದು. ಅದರಲ್ಲಿ ಈ ಬೇಸನ್ ಲಡ್ಡು, ರಾಗಿ ಖೀರ್ ಹಾಗೂ ನವಣೆ ತಂಬಿಟ್ಟನ್ನು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಈ ರೆಸಿಪಿಯು ಎಷ್ಟು ಸುಲಭವೋ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ.
* ಎರಡು ಕಪ್ ಕಡ್ಲೆಹಿಟ್ಟು
* ಮುಕ್ಕಾಲು ಕಪ್ ಸಕ್ಕರೆ ಪುಡಿ
* ತುಪ್ಪ
* ಏಲಕ್ಕಿ ಪುಡಿ
* ಪಿಸ್ತಾ ಹಾಗೂ ಗೋಡಂಬಿ
* ಮೊದಲಿಗೆ ಈ ಕಡ್ಲೆಹಿಟ್ಟನ್ನು ಜರಡಿ ಮಾಡಿಕೊಳ್ಳಿ. ಆ ಬಳಿಕ ಬಾಣಲೆಗೆ ಸ್ವಲ್ಪ ತುಪ್ಪ ಸೇರಿಸಿ ಈ ಕಡ್ಲೆಹಿಟ್ಟು ಸೇರಿಸಿ ಕಡಿಮೆ ಉರಿಯಲ್ಲಿ 15 ನಿಮಿಷಗಳ ಕಾಲ ಚೆನ್ನಾಗಿ ಹುರಿದು ಕೊಳ್ಳಿ.
* ಆದರೆ ಎರಡು ಮೂರು ನಿಮಿಷಕ್ಕೊಮ್ಮೆ ತುಪ್ಪ ಸೇರಿಸುತ್ತಾ ಕಡ್ಲೆಹಿಟ್ಟು ಹಸಿ ವಾಸನೆ ಹೋಗುವವರೇ ಫ್ರೈ ಮಾಡಿಕೊಳ್ಳಿ.
* ಈ ಮಿಶ್ರಣವನ್ನು ತಣ್ಣಗಾಗಲು ಬಿಟ್ಟು, ನಂತರದಲ್ಲಿ ಏಲಕ್ಕಿ ಪುಡಿ, ಸಕ್ಕರೆ ಪುಡಿ ಸೇರಿಸಿ ಕಲಸಿಕೊಳ್ಳಿ.
* ತದನಂತರದಲ್ಲಿ ಕೈಗೆ ತುಪ್ಪ ಸವರಿಕೊಂಡು ಉಂಡೆಗಳನ್ನು ಕಟ್ಟಿ. ಇದರ ಮೇಲೆ ಪಿಸ್ತಾ ಹಾಗೂ ಗೋಡಂಬಿಯಿಂದ ಅಲಂಕರಿಸಿದರೆ ರುಚಿಕರವಾದ ಬೇಸನ್ ಲಡ್ಡು ಸವಿಯಲು ಸಿದ್ಧ.
* ತುಪ್ಪ
* ಏಲಕ್ಕಿ
* ಅರ್ಧ ಕಪ್ ರಾಗಿ ಹಿಟ್ಟು
* ನೀರು
* ಒಂದು ಕಪ್ ಹಾಲು,
* ಬೆಲ್ಲ
* ಗೋಡಂಬಿ, ಪಿಸ್ತಾ, ಬಾದಾಮಿ
* ರುಚಿಗೆ ತಕ್ಕಷ್ಟು ಉಪ್ಪು
ರಾಗಿ ಖೀರ್ ರೆಸಿಪಿ ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಲೆಗೆ ನೀರು ಬೆರೆಸಿದ ಹಾಲು ಹಾಕಿ ಅದಕ್ಕೆ ರಾಗಿ ಹಿಟ್ಟು ಗಂಟಾಗದಂತೆ ಕಲಸಿಕೊಳ್ಳಿ.
* ಈ ಮಿಶ್ರಣಕ್ಕೆ ಬೆಲ್ಲ ಹಾಗೂ ದಪ್ಪ ಹಾಲು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕುದಿಸಿಕೊಳ್ಳಿ.
* ಈಗಾಗಲೇ ಕತ್ತರಿಸಿಟ್ಟ ಗೋಡಂಬಿ, ಪಿಸ್ತಾ, ಬಾದಾಮಿ, ಏಲಕ್ಕಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿಕೊಂಡರೆ ರಾಖಿ ಖೀರ್ ಸವಿಯಲು ಸಿದ್ಧ.
ನವಣೆ ತಂಬಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಒಂದು ಕಪ್ ನವಣೆ
* ಒಂದು ಚಮಚ ಅಕ್ಕಿ
* ಒಂದು ಚಮಚ ಕಡಲೆಬೇಳೆ
* ನೀರು
* ಬೆಲ್ಲ
* ಏಲಕ್ಕಿ
* ತುಪ್ಪ
ಇದನ್ನೂ ಓದಿ: ತುಳುವರಿಗೆ ಸಂತಸದ ಸುದ್ದಿ, ಯೂನಿಕೋಡ್ಗೆ ತುಳುಲಿಪಿ ಸೇರ್ಪಡೆ
* ನವಣೆ, ಅಕ್ಕಿ ಮತ್ತು ಕಡಲೇ ಬೇಳೆ ಈ ಮೂರನ್ನು ಒಟ್ಟಿಗೆ ಹುರಿದು, ಮಿಕ್ಸರ್ ಗೆ ಹಾಕಿ ಪುಡಿಮಾಡಿಕೊಳ್ಳಿ.
* ಸ್ಟವ್ ಮೇಲೆ ನೀರು ಕುದಿಯುತ್ತಿದ್ದಂತೆ ಬೆಲ್ಲ ಸೇರಿಸಿಕೊಳ್ಳಿ. ಬೆಲ್ಲ ಕರಗುವ ಮೊದಲು ಮಾಡಿಟ್ಟ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ
* ಈ ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಡಿ. * ಆ ಬಳಿಕ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿದರೆ ಈ ಸಿಹಿ ತಿನಿಸು ಸವಿಯಲು ಸಿದ್ಧವಾದಂತೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Tue, 10 September 24