Obesity: ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು ಕಡಿಮೆ ಮಾಡುವ ಸರಳ ವಿಧಾನಗಳು

| Updated By: Rakesh Nayak Manchi

Updated on: Nov 22, 2022 | 6:00 AM

ಮಕ್ಕಳಲ್ಲಿ ಸ್ಥೂಲಕಾಯತೆಯ ಸಮಸ್ಯೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಭಿವೃದ್ಧಿಪಡಿಸಲು ಪೋಷಕರು ಗಮನ ಹರಿಸುವುದು ಬಹಳ ಮುಖ್ಯ.

Obesity: ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು ಕಡಿಮೆ ಮಾಡುವ ಸರಳ ವಿಧಾನಗಳು
ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು ಕಡಿಮೆ ಮಾಡುವ ವಿಧಾನಗಳು
Follow us on

ಕೆಟ್ಟ ಜೀವನಶೈಲಿ (Lifestyle)ಯಿಂದ ಹಿರಿಯರು, ವಯಸ್ಕರು ಮಾತ್ರವಲ್ಲದೆ ಸಣ್ಣ ಮಕ್ಕಳಿಗೂ ಬೊಜ್ಜು ಬರುತ್ತದೆ. ಆದಾಗ್ಯೂ ಸರಿಯಾದ ಆಹಾರ ಮತ್ತು ಪಾನೀಯವು ಇದಕ್ಕೆ ಉತ್ತಮ ಪರಿಣಾಮವನ್ನು ನೀಡುತ್ತದೆ. ಮಕ್ಕಳು ಸಾಮಾನ್ಯವಾಗಿ ಜಂಕ್ ಫುಡ್ ಅಥವಾ ಇತರ ಪ್ಯಾಕ್ ಮಾಡಿದ ವಸ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಅವರ ಸ್ಥೂಲಕಾಯತೆಗೆ ಒಂದು ಕಾರಣವಾಗಿದೆ. ಇದಲ್ಲದೆ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯ ಕೊರತೆಯಿಂದ ಮಕ್ಕಳಲ್ಲಿ ಬೊಜ್ಜು (Obesity) ತುಂಬುತ್ತದೆ. ಮಕ್ಕಳಲ್ಲಿ ಸ್ಥೂಲಕಾಯತೆಯ ಸಮಸ್ಯೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವಂತೆ ಪೋಷಕರು ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಹಾಗಿದ್ದರೆ ಮಕ್ಕಳಲ್ಲಿ ಹೆಚ್ಚಾದ ಬೊಜ್ಜನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ನೋಡಿ.

ಮಕ್ಕಳಿಗೆ ಆರೋಗ್ಯಕರ ಆಹಾರವನ್ನು ನೀಡಿ: ಮಕ್ಕಳಿಗೆ ಚಿಕ್ಕಂದಿನಿಂದಲೇ ಪೌಷ್ಟಿಕಾಂಶಗಳಿರುವ ಆಹಾರ ನೀಡಲು ಪ್ರಯತ್ನಿಸಬೇಕು. ಹೀಗೆ ಮಾಡುವುದರಿಂದ ಮಕ್ಕಳು ಮುಂದೆ ಅಂತಹ ಆಹಾರವನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಮಕ್ಕಳು ಆರೋಗ್ಯಕರ ಮತ್ತು ಪೌಷ್ಟಿಕಾಂಶ ಭರಿತ ಆಹಾರವನ್ನು ಸೇವಿಸಬೇಕೆಂದು ನೀವು ಬಯಸಿದರೆ ಧಾನ್ಯಗಳು, ಹಸಿರು ತರಕಾರಿಗಳು, ಋತುಮಾನದ ಹಣ್ಣುಗಳು, ಬೀನ್ಸ್, ಮೊಟ್ಟೆಗಳು ಮತ್ತು ಹಾಲು ಉತ್ತಮ ಆಯ್ಕೆಯಾಗಿದೆ. ಈ ಎಲ್ಲಾ ಆಹಾರಗಳಲ್ಲಿ ಕೊಬ್ಬು ತುಂಬಾ ಕಡಿಮೆ. ಮಗುವಿಗೆ ಪ್ರತಿದಿನ 2 ಹಣ್ಣುಗಳು ಮತ್ತು ಒಂದು ಹಸಿರು ತರಕಾರಿಗಳನ್ನು ತಿನ್ನಿಸಬೇಕು.

ಇದನ್ನೂ ಓದಿ: Sweat: ಬೆವರುವುದು ಸಾಮಾನ್ಯ, ಆದರೆ ವಾಸನೆಯುಕ್ತವಾಗಿದ್ದರೆ ಕಡೆಗಣಿಸಬೇಡಿ, ಈ ಕಾಯಿಲೆಯ ಲಕ್ಷಣವೂ ಆಗಿರಬಹುದು

ಮಗುವನ್ನು ಹೈಡ್ರೀಕರಿಸಿಡಿ: ಮಕ್ಕಳನ್ನು ಹೈಡ್ರೇಟ್ ಆಗಿ ಇಡುವುದು ಬಹಳ ಮುಖ್ಯ. ದೇಹವನ್ನು ಹೈಡ್ರೇಟ್ ಆಗಿಡಲು ನೀರು ಕುಡಿಯುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಮಕ್ಕಳಲ್ಲೂ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ. ಶಾಲೆಗೆ ಹೋಗಲಿ ಅಥವಾ ಆಟವಾಡಲಿ ಮಕ್ಕಳಿಗೆ ನೀರಿನ ಬಾಟಲಿಗಳನ್ನು ಕೊಟ್ಟು ನೀರು ಸರಿಯಾಗಿ ನೀರು ಕುಡಿಯುವಂತೆ ಸೂಚಿಸಬೇಕು.

ಸಾಕಷ್ಟು ನಿದ್ರೆ: ಸರಿಯಾಗಿ ನಿದ್ದೆ ಮಾಡದಿದ್ದರೂ ನಿಮ್ಮ ಮಗುವಿನ ತೂಕದಲ್ಲಿ ಹೆಚ್ಚಾಗಬಹುದು. ನೀವು ಸಾಕಷ್ಟು ನಿದ್ದೆ ಮಾಡದಿದ್ದಾಗ ಹಸಿವನ್ನು ಹೆಚ್ಚಿಸುವ ಹಾರ್ಮೋನ್‌ಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಇದರಿಂದಾಗಿ ಹಸಿವು ಪ್ರಾರಂಭವಾಗುತ್ತದೆ. ಮಕ್ಕಳ ದೇಹವು ದಣಿದಾಗ ತುಂಬಾ ಚುರುಕಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಪ್ರತಿ ರಾತ್ರಿ ಕನಿಷ್ಠ 8 ಗಂಟೆಗಳ ನಿದ್ರೆ ಬೇಕಾಗುತ್ತದೆ.

(ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಟಿವಿ9 ಕನ್ನಡ ಅದನ್ನು ಖಚಿತಪಡಿಸುವುದಿಲ್ಲ. ತಜ್ಞರನ್ನು ಸಂಪರ್ಕಿಸಿದ ನಂತರವೇ ಅದನ್ನು ಅನುಸರಿಸಿ.)

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ