ಅಡುಗೆಮನೆಯಲ್ಲಿ ಕುಕ್ಕರ್​​ ನಿಮಗೆ ಕಾಟ ಕೊಡುತ್ತಿದೆಯಾ? ಹಾಗಾದರೆ ಇಲ್ಲಿದೆ ಕೆಲವು ಸೂಪರ್ ಟಿಪ್ಸ್!

|

Updated on: Nov 12, 2023 | 2:14 PM

Pressure Cooker Leakage: ಅಡುಗೆ ಮಾಡುವ ಕುಕ್ಕರ್ ಕುದಿಯುತ್ತಿರುವಾಗ ಆಗಾಗ್ಗೆ ನೀರು ಬರುತ್ತಿದ್ದರೆ ಮೊದಲು ಪ್ರೆಶರ್ ಕುಕ್ಕರ್ ವಿಷಲ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅನೇಕ ಬಾರಿ ಆಹಾರವು ಆ ವಿಷಲ್ ಸಂದಿನಲ್ಲಿ ಸಿಲುಕಿಕೊಂಡಿರುತ್ತದೆ. ಕುಕ್ಕರ್‌ ಸೀಟಿಯು ಕೊಳಕಾಗಿದ್ದರೆ, ಅದರಿಂದ ಸರಾಗವಾಗಿ ಉಗಿ ಹೊರಬರುವುದಿಲ್ಲ. ಆವಾಗಲೇ ಈ ಸಮಸ್ಯೆ ಉದ್ಭವಿಸುವುದು

ಅಡುಗೆಮನೆಯಲ್ಲಿ ಕುಕ್ಕರ್​​ ನಿಮಗೆ ಕಾಟ ಕೊಡುತ್ತಿದೆಯಾ? ಹಾಗಾದರೆ ಇಲ್ಲಿದೆ ಕೆಲವು ಸೂಪರ್ ಟಿಪ್ಸ್!
ಅಡುಗೆಮನೆಯಲ್ಲಿ ಕುಕ್ಕರ್​​ ನಿಮ್ಮನ್ನು ಹೀಗೆ ಗೋಳುಹೊಯ್ದುಕೊಳ್ಳುತ್ತಿದೆಯಾ?
Follow us on

ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಲಿಡ್​ ನಿಂದ ಬುರ್​​ ಎಂದು ಹಬೆನೀರು ಸೋರಿಕೆಯಾಗುವ (Leakage) ಸಮಸ್ಯೆ ಆಗಾಗ್ಗೆ ಕಂಡುಬರುತ್ತದೆ. ಕುಕ್ಕರ್​ ವಿಷಲ್ ಹಾಕಲು ಆರಂಭಿಸಿದಾಗ ಕುಕ್ಕರ್​ ಒಳಗಡೆಯಿಂದ ಹಬೆ ನೀರು ಬುರ್ ಬುರ್​ (Whistle sound) ಎಂದು ಹೆಚ್ಚಾಗಿ ಹೊರಬರುವುದುಂಟು (Pressure Cooker Leakage). ನಿಮ್ಮ ಮನೆಯಲ್ಲಿರುವ ಕುಕ್ಕರ್ ಕೂಡ ನಿಮಗೆ ಇದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದರೆ, ಆ ಸಮಸ್ಯೆ ನೀಗಿಸಲು ಇಲ್ಲಿರುವ ಕೆಲ ಸಲಹೆಗಳು ನಿಮಗೆ ಊರುಗೋಲಾಗಬಹುದು. ಪ್ರೆಶರ್ ಕುಕ್ಕರ್ ಸೋರಿಕೆ ಸಮಸ್ಯೆಗಳನ್ನು ಸರಿಪಡಿಸಲು ಇಲ್ಲಿ ಕೆಲವು ಸಲಹೆಗಳಿವೆ. ನೀವು ಅವುಗಳನ್ನು ಅನುಸರಿಸಿದರೆ, ಕುಕ್ಕರ್‌ನಲ್ಲಿ ಆಲೂಗಡ್ಡೆ ಅಥವಾ ಧಾನ್ಯಗಳನ್ನು ಬೇಯಿಸಿದಾಗ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ.

ಕುಕ್ಕರ್‌ನಿಂದ ನೀರು ಬರದಂತೆ ತಡೆಯಲು ಒಂದು ಹನಿ ಎಣ್ಣೆಯನ್ನು ಸೇರಿಸಿ. ಇದರಿಂದ ಕುಕ್ಕರ್‌ನಿಂದ ನೀರು ಸೋರಿಕೆಯಾಗದು. ಕುಕ್ಕರ್‌ನಲ್ಲಿ ಮಾಡಿರುವ ಆಹಾರವೂ ಸಹ ಅದಕ್ಕೆ ಅಂಟಿಕೊಳ್ಳದು. ಈ ರೀತಿಯಾಗಿ ಕುಕ್ಕರ್‌ನಲ್ಲಿ ಬೇಯಿಸಿದ ಆಹಾರವು ಹೆಚ್ಚು ಮೃದುವಾಗಿರುತ್ತದೆ.

ನಿಮ್ಮ ಕುಕ್ಕರ್‌ನಲ್ಲಿ ಹಬೆ ನೀರು ಸೋರಿಕೆಯಾಗುತ್ತಿದ್ದರೆ ಅಂದರೆ ಅಡುಗೆ ಮಾಡುವ ಕುಕ್ಕರ್ ಕುದಿಯುತ್ತಿರುವಾಗ ಆಗಾಗ್ಗೆ ನೀರು ಬರುತ್ತಿದ್ದರೆ, ನೀವು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಡುಗೆ ಮಾಡುವ ಮೊದಲು ಪ್ರೆಶರ್ ಕುಕ್ಕರ್ ವಿಷಲ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅನೇಕ ಬಾರಿ ಆಹಾರವು ಆ ವಿಷಲ್ ಸಂದಿನಲ್ಲಿ ಸಿಲುಕಿಕೊಂಡಿರುತ್ತದೆ. ಕುಕ್ಕರ್‌ ಸೀಟಿಯು (ವಿಷಲ್) ಕೊಳಕಾಗಿದ್ದರೆ, ಅದರಿಂದ ಸರಾಗವಾಗಿ ಉಗಿ ಹೊರಬರುವುದಿಲ್ಲ. ಆವಾಗಲೇ ಈ ಸಮಸ್ಯೆ ಉದ್ಭವಿಸುವುದು ಎಂಬುದನ್ನು ಅರಿತುಕೊಳ್ಳಿ.

ಮತ್ತಷ್ಟು ಓದಿ: ಬೇರೆಯವರ ದುರಾದೃಷ್ಟ ನಿಮಗೆ ತಗಲಬಾರದೆಂದರೆ ಇತರರಿಂದ ಈ ವಸ್ತುಗಳನ್ನು ಸ್ವೀಕರಿಸಬೇಡಿ

ಆಧುನಿಕ ಅಡುಗೆ ಮನೆಯಲ್ಲಿ ಪ್ರೆಶರ್ ಕುಕ್ಕರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಜನರು ಅನ್ನ, ಹುಳಿ, ಸಾಂಬಾರ್​, ತರಕಾರಿ ಪುಲಾವ್ ಎಲ್ಲವನ್ನೂ ಪ್ರೆಶರ್ ಕುಕ್ಕರ್‌ಗಳಲ್ಲಿ ಬೇಯಿಸುತ್ತಾರೆ. ಗ್ಯಾಸ್ ಉಳಿತಾಯ, ರುಚಿ ಮತ್ತು ಆರೋಗ್ಯದ ಜೊತೆಗೆ, ಇದು ತುಂಬಾ ಉತ್ತಮವಾದ ಅಡುಗೆ ವಿಧಾನವಾಗಿದೆ. ಆದರೆ ಕೆಲವೊಮ್ಮೆ ಕುಕ್ಕರ್ ಬಳಸುವಾಗ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕೆಲವೊಮ್ಮೆ ಕುಕ್ಕರ್​​ ಕೂಗುವುದೇ ಇಲ್ಲ. ಸಣ್ಣಗೆ ಬುರ್​ ಬುರ್ ಎಂದು ಸದ್ದು ಮಾಡುತ್ತದೆ ಅಷ್ಟೆ. ಅದರಿಂದ ಗೃಹಿಣಿಯರುನ ಯಾಮಾರುವುದೇ ಹೆಚ್ಚು. ಇದರಿಂದ ಕೆಲವೊಮ್ಮೆ ಆಹಾರವು ಹೆಚ್ಚಿಗೇ ಬೆಂದಿರುತ್ತದೆ. ಕೆಲವೊಮ್ಮೆ ಕುಕ್ಕರ್​ನಿಂದ ಸತತವಾಗಿ, ಅನಗತ್ಯವಾಗಿ ಸೀಟಿ ಕೇಳಿಬರುವುದುಂಟು.

ಸರಿಯಾದ ಅಳತೆಯಲ್ಲಿ ಕುಕ್ಕರ್​​ನಲ್ಲಿ ನೀರು ಇಡಬೇಕು.. ಅಡುಗೆ ಮಾಡುವಾಗ ಕುಕ್ಕರ್‌ನಲ್ಲಿ ಅಗತ್ಯ ಪ್ರಮಾಣದಲ್ಲಿ ಮಾತ್ರ ನೀರು ತುಂಬಿಸಿರಬೇಕು. ಇಲ್ಲದಿದ್ದಲ್ಲಿ ಕುಕ್ಕರ್​​ ಕೂಗಿದಾಗ, ಆ ಶಬ್ದದ ಜೊತೆಗೆ ನೀರು ಸಹ ಹೊರಬರುತ್ತದೆ. ಅದಕ್ಕಾಗಿಯೇ ಆಹಾರದಲ್ಲಿ ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಬೇಕು.

ರಬ್ಬರ್ (ಗ್ಯಾಸ್ಕೆಟ್​​) ಅನ್ನು ಪರೀಕ್ಷಿಸಬೇಕು.. ಕುಕ್ಕರ್‌ನಲ್ಲಿ ಆಹಾರವನ್ನು ಬೇಯಿಸುವ ಮೊದಲು, ರಬ್ಬರ್ ಅನ್ನು ಸಹ ಪರಿಶೀಲಿಸಬೇಕು. ಅಡುಗೆ ಮಾಡಿದ ನಂತರ, ರಬ್ಬರ್ ಅನ್ನು ತಣ್ಣನೆಯ ನೀರಿನಲ್ಲಿ ಅಥವಾ ಫ್ರೀಜರ್​​ನಲ್ಲಿ ಇಡುವುದು ಉತ್ತಮ. ಇದರಿಂದ ಗ್ಯಾಸ್ಕೆಟ್ ಸಹ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ