Deepavali: ಆಕಸ್ಮಿಕವಾಗಿ ಪಟಾಕಿ ಕಿಡಿ ಕಣ್ಣಿಗೆ ಬಿದ್ದರೆ ಏನು ಮಾಡಬೇಕು, ಏನು ಮಾಡಬಾರದು?
ಪಟಾಕಿ ಸುಡುವಾಗ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪಟಾಕಿಗಳಿಂದ ಹೊರಹೊಮ್ಮುವ ಹೊಗೆ ನಿಮ್ಮ ಶ್ವಾಸಕೋಶ ಮತ್ತು ಕಣ್ಣುಗಳಿಗೆ ಸಾಕಷ್ಟು ಹಾನಿಕಾರಕವಾಗಿದೆ. ಪಟಾಕಿ ಸುಡುವಾಗ ಆಕಸ್ಮಿಕವಾಗಿ ಪಟಾಕಿಯ ಕಿಡಿ ಕಣ್ಣಿಗೆ ಬಿದ್ದರೆ ಏನು ಮಾಡಬೇಕು, ಏನು ಮಾಡಬಾರದು ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದೀಪಾವಳಿ ಹಬ್ಬಕ್ಕೆ ಪಟಾಕಿ ಇಲ್ಲದಿದ್ದರೆ ಹಬ್ಬವೇ ಅಪೂರ್ಣ ಎಂದೆನಿಸಿ ಬಿಡುತ್ತದೆ. ಆದರೆ ಪಟಾಕಿ ಸುಟ್ಟು ಸಂಭ್ರಮಿಸುವಾಗ ಆದಷ್ಟು ಎಚ್ಚರದಿಂದಿರುವುದು ಅಗತ್ಯ. ಸಂಭ್ರಮದ ಮಧ್ಯೆ ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಅಪಾಯದ ಸಾಧ್ಯತೆ ಹೆಚ್ಚು. ಅದರಲ್ಲೂ ಪಟಾಕಿ ಸುಡುವಾಗ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪಟಾಕಿಗಳಿಂದ ಹೊರಹೊಮ್ಮುವ ಹೊಗೆ ನಿಮ್ಮ ಶ್ವಾಸಕೋಶ ಮತ್ತು ಕಣ್ಣುಗಳಿಗೆ ಸಾಕಷ್ಟು ಹಾನಿಕಾರಕವಾಗಿದೆ. ಪಟಾಕಿ ಸುಡುವಾಗ ಆಕಸ್ಮಿಕವಾಗಿ ಪಟಾಕಿಯ ಕಿಡಿ ಕಣ್ಣಿಗೆ ಬಿದ್ದರೆ ಏನು ಮಾಡಬೇಕು, ಏನು ಮಾಡಬಾರದು ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಏನು ಮಾಡಬೇಕು ಮತ್ತು ಏನು ಮಾಡಬಾರದು?
ಪಟಾಕಿಗಳನ್ನು ಸುಡುವಾಗ ಕಿಡಿಗಳು ಇತ್ಯಾದಿಗಳು ನಿಮ್ಮ ಕಣ್ಣುಗಳಿಗೆ ಪ್ರವೇಶಿಸಿದರೆ, ನಿಮ್ಮ ಕಣ್ಣುಗಳನ್ನು ಉಜ್ಜುವ ತಪ್ಪನ್ನು ಮಾಡಬೇಡಿ, ಏಕೆಂದರೆ ಸಣ್ಣ ಅಜಾಗರೂಕತೆಯು ನಿಮ್ಮ ದೃಷ್ಟಿಗೆ ಮಾರಕವಾಗಬಹುದು. ದೀಪಾವಳಿಯಂದು ನೀವು ಪಟಾಕಿಗಳನ್ನು ಸುಡುತ್ತಿದ್ದರೆ,ಸುಟ್ಟ ನಂತರ ನಿಮ್ಮ ಮತ್ತು ಮಕ್ಕಳ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಲು ಮರೆಯಬೇಡಿ, ಏಕೆಂದರೆ ಪಟಾಕಿ ತಯಾರಿಕೆಯಲ್ಲಿ ಹಲವಾರು ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅದೇ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸುವುದರಿಂದ ಉರಿ, ತುರಿಕೆ ಮತ್ತು ಕೆಂಪಾಗಬಹುದು ಮತ್ತು ಎಚ್ಚರಿಕೆ ವಹಿಸದಿದ್ದರೆ, ಸಮಸ್ಯೆ ಹೆಚ್ಚಾಗಬಹುದು.
ಇದನ್ನೂ ಓದಿ: ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವಾಗ ಮಕ್ಕಳ ಸುರಕ್ಷತೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳು
ಪಟಾಕಿ ಸುಡುವಾಗ ಕಣ್ಣಿಗೆ ಏನಾದರೂ ತೊಂದರೆಯಾದರೆ, ಮನೆಯಲ್ಲಿ ಯಾವುದೇ ರೀತಿಯ ಚಿಕಿತ್ಸೆ ಮಾಡುವುದನ್ನು ತಪ್ಪಿಸಿ ಮತ್ತು ತಜ್ಞರ ಸಮಾಲೋಚನೆಯಿಲ್ಲದೆ ಕಣ್ಣಿಗೆ ಯಾವುದೇ ಡ್ರಾಪ್ ಹಾಕಬೇಡಿ. ತಪ್ಪಾಗಿಯೂ ಮನೆಮದ್ದುಗಳನ್ನು ಪ್ರಯತ್ನಿಸಬೇಡಿ. ಯಾಕೆಂದರೆ ಕಣ್ಣು ಸಾಕಷ್ಟು ಸೂಕ್ಷ್ಮವಾಗಿರುವುದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯು ಹೆಚ್ಚಿದೆ. ಆದ್ದರಿಂದ ಎಲ್ಲಕ್ಕಿಂತ ಮೊದಲು ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಜೊತೆಗೆ ವೈದ್ಯರನ್ನು ಭೇಟಿಯಾಗುವುದು ಅಗತ್ಯ ಎಂದು ತಜ್ಞರಾದ ಡಾ ದೀಪಕ್ ಕುಮಾರ್ ಎಚ್ಚರಿಸುತ್ತಾರೆ.
ಪಟಾಕಿ ಸುಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
ನೀವು ಪಟಾಕಿಗಳನ್ನು ಸುಡುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಕಣ್ಣಿಗೆ ಕನ್ನಡಕವನ್ನು ಧರಿಸಿ, ಇದು ಪಟಾಕಿಯ ಹೊಗೆ ಮತ್ತು ಅವುಗಳಿಂದ ಹೊರಹೊಮ್ಮುವ ಕಿಡಿಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ, ಜೊತೆಗೆ, ಪಟಾಕಿಗಳನ್ನು ಸುಡುವಾಗ ಸಂಪೂರ್ಣ ಎಚ್ಚರಿಕೆ ವಹಿಸಿ. ನಿಮ್ಮ ಕೈಯಲ್ಲಿ ಪಟಾಕಿಗಳನ್ನು ಸುಡುವಂತಹ ತಪ್ಪುಗಳನ್ನು ಮಾಡಬೇಡಿ. ಮಕ್ಕಳನ್ನು ಮಾತ್ರ ಪಟಾಕಿ ಸುಡಲು ಬಿಡಬೇಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:00 pm, Sun, 12 November 23