Tampon Safety Tips: ಮುಟ್ಟಿನ ದಿನಗಳಲ್ಲಿ ಟಾಂಪೂನ್​ಗಳ ಬಳಕೆಯ ಮುನ್ನ ಈ ಅಂಶಗಳನ್ನು ಗಮನಿಸಿ

| Updated By: Pavitra Bhat Jigalemane

Updated on: Feb 09, 2022 | 2:27 PM

ಟಾಂಪೂನ್​ಗಳನ್ನು ಬಳಸುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.  ಕೈಗಳು ಸ್ವಚ್ಛವಾಗಿದ್ದರೆ ಟಾಂಪೂನ್​ಗಳನ್ನು ಬಳಸಿ. ಒಂದು ವೇಳೆ ಟಾಂಪೂನ್​ಗಳು ನೆಲಕ್ಕೆ ಬಿದ್ದರೆ ಅದನ್ನು ಬಳಸಬೇಡಿ.

Tampon Safety Tips: ಮುಟ್ಟಿನ ದಿನಗಳಲ್ಲಿ ಟಾಂಪೂನ್​ಗಳ ಬಳಕೆಯ ಮುನ್ನ ಈ ಅಂಶಗಳನ್ನು ಗಮನಿಸಿ
ಟಾಂಪೂನ್​
Follow us on

ಮಹಿಳೆಯರ ಮಾಸಿಕ ದಿನಗಳ (Periods) ಸುರಕ್ಷತೆಗೆ ಈಗಾಗಲೇ ಸಾಕಷ್ಟು ಹೊಸ ರೀತಿಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ನ್ಯಾಪ್ಕಿನ್​ಗಳ ಅಭಿವೃದ್ಧಿಯ ಬಳಿಕ ಮುಟ್ಟಿನ ಕಪ್​ಗಳನ್ನು ಪರಿಚಯಿಸಲಾಗಿತ್ತು. ಇದೀಗ ಟಾಂಪೂನ್​ಗಳು (Tampon)ಮಹಿಳೆಯರ ಮಾಸಿಕ ದಿನಗಳಿಗೆ ಸಂಗಾತಿಯಾಗುತ್ತಿದೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಸ್ವಚ್ಛತೆ ಮೊದಲ ಆದ್ಯತೆಯಾಗಿರುತ್ತದೆ. ಇಲ್ಲವಾದರೆ ಹಲವು ರೀತಿಯ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ನ್ಯಾಪ್ಕಿನ್​, ಮೆನ್ಸ್ಟುವಲ್​ ಕಪ್ (Menstruval Cup)​ ಅಥವಾ ಟಾಂಫೂನ್​ಗಳಾಗಿರಲಿ ಯಾವುದನ್ನೇ ಬಳಸುವಾಗಲೂ ಸುರಕ್ಷತೆಯಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನೀವು ಮೊದಲ ಬಾರಿಗೆ ಟಾಂಪೂನ್​ಗಳನ್ನು ಬಳಸುತ್ತಿದ್ದರೆ ಹೆಚ್ಚು ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಟಾಂಪೂನ್​ಗಳನ್ನು ಮೆನ್ಸ್ಟುವಲ್​ ಕಪ್​ಗಳ ರೀತಿಯಲ್ಲಿಯೇ ಬಳಸಲಾಗುತ್ತದೆ.  ಆದರೆ ಮೆನ್ಸ್ಟುವಲ್​ ಕಪ್​ಗಳನ್ನು ಮರುಬಳಕೆ ಮಾಡಬಹುದು, ಟಾಂಪೂನ್​ಗಳನ್ನು ಒಂದು ಬಾರಿ ಮಾತ್ರ ಬಳಸಬಹುದಾಗಿದೆ. ಹೀಗಾಗಿ  ಹೆಚ್ಚು ಜಾಗೃತರಾಗಿರುವುದು ಉತ್ತಮ. ಹೀಗಾಗಿ ಈ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಟಾಂಪೂನ್​ಗಳನ್ನು ಬಳಸಿ

ಬಳಸುವ ಮುನ್ನ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ:
ಟಾಂಪೂನ್​ಗಳನ್ನು ಬಳಸುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.  ಕೈಗಳು ಸ್ವಚ್ಛವಾಗಿದ್ದರೆ ಟಾಂಪೂನ್​ಗಳನ್ನು ಬಳಸಿ . ಒಂದು ವೇಳೆ ಟಾಂಪೂನ್​ಗಳು ನೆಲಕ್ಕೆ ಬಿದ್ದರೆ, ಅದನ್ನು ಬಳಸಬೇಡಿ, ಬದಲಾಗಿ ಎಸೆದುಬಿಡಿ. ಒಂದು ಸಣ್ಣ ಮಲೀನತೆಯೂ ದೊಡ್ಡ ಅಪಾಯವನ್ನು ತಂದೊಡ್ಡಬಹುದು.

4-6 ಗಂಟೆಗಳಿಗೊಮ್ಮೆ ಬದಲಾಯಿಸಿ:
ಟಾಂಪೂನ್​ಗಳನ್ನು ಹೆಚ್ಚು ಕಾಲ ಬಳಸಬೇಡಿ. ಕನಿಷ್ಠ 4 ಗಂಟೆಗಳಿಗೊಮ್ಮೆಯಾದರೂ ಬದಲಾಯಿಸಿ. 8 ಗಂಟೆಗಳಿಗಿಂತ ಹೆಚ್ಚು ಕಾಲ ಯೋನಿಯಲ್ಲಿ ಟಾಂಪೂನ್​ಗಳನ್ನು ಇಟ್ಟುಕೊಳ್ಳುವುದರಿಂದ ಅತಿಯಾದ ನೋವು ಕಾಣಿಸಿಕೊಳ್ಳಬಹುದು. ಜತೆಗೆ ಸೋಂಕು ಹರಡುವ ಸಾಧ್ಯತರ ಇರುತ್ತದೆ. ಹೀಗಾಗಿ 4 ರಿಂದ 6 ಗಂಟೆಗಳಿಗೊಮ್ಮೆ ಬದಲಾಯಿಸಿ.

ಮುಟ್ಟಿನ ದಿನಗಳಲ್ಲಿ ಮಾತ್ರ ಬಳಸಿ:
ಟಾಂಪೂನ್​ಗಳು ಚರ್ಮ ಮಾಯ್ಚಿರೈಸ್​ ಆದಾಗ ಮಾತ್ರ ಸರಿಯಾಗಿ ಬಳಕೆಯಾಗುತ್ತದೆ. ಹೀಗಾಗಿ ರಕ್ತಸ್ರವಾವವಾಗುವ ವೇಳೆ ಮಾತ್ರ ಬಳಸಿ. ಇಲ್ಲವಾದರೆ ನೋವು ಕಾಣಿಸಿಕೊಳ್ಳಬಹುದು. ಹೀಗಾಗಿ ಮಾಸಿಕ ದಿನಗಳಿಗಿಂತ ಮೊದಲು ಅಥವಾ ನಂತರ ಬಳಕೆ ಬೇಡ.

ಸರಿಯಾಗಿ ಅಳವಡಿಸಿಕೊಳ್ಳಿ:
ಟಾಂಪೂನ್​ ಯೋನಿಯೊಳಗೆ ಸರಿಯಾದ ರೀತಿಯಲ್ಲಿ ಅಳವಡಿಕೆಯಾದರೆ ನಿಮಗೆ ಯಾವುದೇ ರೀತಿಯ ಅಹಿತಕರ ಅನುಭವವಾಗುವುದಿಲ್ಲ.  ಟಾಂಪೂನ್​ ಸರಿಯಾಗಿ ಕೂರದಿದ್ದರೆ ನೀವು ನಡೆಯುವಾಗ, ಕುಳಿತುಕೊಳ್ಳುವಾಗ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಸರಿಯಾಗಿ ಅಳವಡಿಕೆಯಾಗದಿದ್ದರೆ ಅದನ್ನು ತೆಗೆದು ಬೇರೆಯದನ್ನು ಹಾಕಿಕೊಳ್ಳಿ.

ಕಡಿಮೆ ಹೀರಿಕೊಳ್ಳುವ ಟಾಂಪೂನ್​ ಆಯ್ಕೆ ಮಾಡಿಕೊಳ್ಳಿ:
ದೀರ್ಘಕಾಲ ಟಾಂಪೂನ್​ಗಳನ್ನು ಹಾಕಿಕೊಳ್ಳುವುದರಿಂದ ಸಮಸ್ಯೆ ಉಂಟಾಗಬಹುದು. ಅಲ್ಲದೆ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆಯ್ಕೆ ಮಾಡಿಕೊಳ್ಳುವಾಗಲೇ ಕಡಿಮೆ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಟಾಂಪೂನ್​ಗಳನ್ನು ಖರೀದಿಸಿ. ಇದರಿಂದ ಸರಿಯಾದ ಸಮಯಕ್ಕೆ ಅದನ್ನು ಬದಲಾಯಿಸಬಹುದು.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಬಳಕೆಯ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ)

ಇದನ್ನೂ ಓದಿ:

ದೇಹಕ್ಕೆ ಬೇಕಾದ ಪ್ರೋಟೀನ್​ ಅಂಶಗಳನ್ನು ಪೂರೈಸಲು ಡಯೆಟ್​ ಪಟ್ಟಿಯಲ್ಲಿ ಈ ಆಹಾರಗಳಿರಲಿ

Published On - 1:05 pm, Wed, 9 February 22