ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಈ ಸರಳ ಸಲಹೆಯನ್ನು ಪಾಲಿಸಿ
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ಉರಿ ಬರುವುದು ಮತ್ತು ಕಣ್ಣಲ್ಲಿ ನೀರು ಬರುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕಣ್ಣೀರು ತರಿಸುವುದರ ಜೊತೆಗೆ ಸ್ವಲ್ಪ ಕಿರಿಕಿರಿಯನ್ನೂ ಉಂಟು ಮಾಡುತ್ತದೆ. ಹಾಗಾಗಿ ಹಲವರಿಗೆ ಈರುಳ್ಳಿ ಹೆಚ್ಚೋದು ತುಂಬಾನೇ ಕಷ್ಟದ ಕೆಲಸ. ಹೀಗಿರುವಾಗ ಕಣ್ಣಲ್ಲಿ ನೀರು ಬರದಂತೆ, ಆರಾಮದಾಯಕವಾಗಿ ಈರುಳ್ಳಿ ಹೆಚ್ಚಲು ಈ ಸರಳ ಸಲಹೆಯನ್ನು ಪಾಲಿಸಿದರೆ ಸಾಕು.

ಈರುಳ್ಳಿ (onions) ಹಾಕಿದ್ರೆ ಅಡುಗೆಯ ರುಚಿ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಪ್ರತಿ ಅಡುಗೆಯಲ್ಲೂ ಈರುಳ್ಳಿಯನ್ನು ಬಳಕೆ ಮಾಡಲಾಗುತ್ತದೆ. ಆದ್ರೆ ಕಣ್ಣಲ್ಲಿ ನೀರು ಬರುವ ಕಾರಣ, ಕಿರಿಕಿರಿ ಉಂಟಾಗುವ ಕಾರಣ ಈರುಳ್ಳಿಯನ್ನು ಕತ್ತರಿಸುವುದೇ ಹಲವರಿಗೆ ತುಂಬಾನೇ ಕಷ್ಟದ ಕೆಲಸವಾಗಿಬಿಟ್ಟಿದೆ. ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರಲು ಅದರಲ್ಲಿರುವ ಸಲ್ಫರ್ ಸಂಯುಕ್ತಗಳು ಕಾರಣ. ಹೌದು ಈರುಳ್ಳಿ ಕಟ್ ಮಾಡುವಾಗ ಸಲ್ಫರ್ ಸಂಯುಕ್ತಗಳು ಗಾಳಿಯಲ್ಲಿ ಬಿಡುಗಡೆಯಾಗಿ ಕಣ್ಣುಗಳಲ್ಲಿನ ತೇವಾಂಶದೊಂದಿಗೆ ಸೇರಿಕೊಂಡು ಕಿರಿಕಿರಿ ಮತ್ತು ಕಣ್ಣೀರನ್ನು ಉಂಟುಮಾಡುತ್ತದೆ. ಹೀಗಿರುವಾಗ ಈ ಒಂದಷ್ಟು ತಂತ್ರಗಳನ್ನು ಪಾಲಿಸುವ ಮೂಲಕ ಯಾವುದೇ ಕಿರಿಕಿರಿ, ಕಣ್ಣಿನ ಉರಿ ಇಲ್ಲದೆ ಆರಾಮದಾಯಕವಾಗಿ ಈರುಳ್ಳಿ ಕತ್ತರಿಸಬಹುದು.
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರದೆಂದರೆ ಈ ಸಲಹೆ ಪಾಲಿಸಿ:
ಈರುಳ್ಳಿಯನ್ನು ನೀರಲ್ಲಿ ನೆನೆಸಿ: ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಅವುಗಳನ್ನು ಸಿಪ್ಪೆ ತೆಗೆದು ಕತ್ತರಿಸುವ ಅರ್ಧ ಗಂಟೆ ಮೊದಲು ನೀರಿನಲ್ಲಿ ನೆನೆಸಿಡಿ. ನೀವು ಹೀಗೆ ಮಾಡುವುದರಿಂದ, ಈರುಳ್ಳಿಯಲ್ಲಿರುವ ಅನಿಲಗಳು ನೀರಿನೊಂದಿಗೆ ಚೆನ್ನಾಗಿ ಬೆರೆತು ನಿಮ್ಮ ಕಣ್ಣುಗಳಲ್ಲಿ ನೀರು ಬರದಂತೆ ತಡೆಯುತ್ತದೆ.
ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಡಿ: ನೀವು ಬಯಸಿದರೆ, ಕತ್ತರಿಸುವ ಮೊದಲು ಈರುಳ್ಳಿಯನ್ನು 10 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡಬಹುದು. ಹೀಗೆ ಈರುಳ್ಳಿಯನ್ನು ತಂಪಾಗಿಸುವುದರಿಂದ ಸಲ್ಫರ್ ಸಂಯುಕ್ತಗಳ ಪರಿಣಾಮವನ್ನು ಕಡಿಮೆಯಾಗುತ್ತದೆ ಮತ್ತು ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಿಲ್ಲ.
ಫ್ಯಾನ್ ಅಡಿಯಲ್ಲಿ ಈರುಳ್ಳಿ ಕತ್ತರಿಸಿ: ಫ್ಯಾನ್ ಆನ್ ಮಾಡಿ ಈರುಳ್ಳಿ ಕತ್ತರಿಸಲು ಪ್ರಯತ್ನಿಸಿ. ಏಕೆಂದರೆ ಗಾಳಿಯ ಹರಿವು ಸಲ್ಫರ್ ಸಂಯುಕ್ತಗಳು ಕಣ್ಣುಗಳನ್ನು ತಲುಪುವುದನ್ನು ತಡೆಯುತ್ತದೆ.
ಚಾಕುವಿನ ಮೇಲೆ ನಿಂಬೆ ರಸವನ್ನು ಹಚ್ಚಿ: ಈರುಳ್ಳಿ ಕ್ತರಿಸುವಾಗ ಕಣ್ಣುಗಳಲ್ಲಿ ನೀರು ಬರುವುದನ್ನು ತಡೆಯಲು ಒಂದು ಉತ್ತಮ ಮಾರ್ಗವೆಂದರೆ ಈರುಳ್ಳಿ ಕತ್ತರಿಸುವ ಮೊದಲು ಚಾಕುವಿಗೆ ನಿಂಬೆ ರಸವನ್ನು ಹಚ್ಚುವುದು. ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಬೆಳಗ್ಗೆ, ರಾತ್ರಿ; ಸ್ನಾನ ಮಾಡಲು ಸೂಕ್ತ ಸಮಯ ಯಾವುದು ಗೊತ್ತಾ?
ಬಿಸಿ ನೀರು ಹತ್ತಿರದಲ್ಲಿಡಿ: ಈರುಳ್ಳಿ ಕತ್ತರಿಸುವಾಗ ಬಿಸಿನೀರನ್ನು ನಿಮ್ಮ ಹತ್ತಿರದಲ್ಲಿ ಇರಿಸಿ. ಇದು ಈರುಳ್ಳಿಯಿಂದ ಆವಿಯನ್ನು ಹೊರಹಾಕುವ ಮೂಲಕ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಇದರಿಂದ ತಡೆಯಬಹುದು.
ಇದಲ್ಲದೆ ಈರುಳ್ಳಿ ಕತ್ತರಿಸುವಾಗ ಆಗಾಗ್ಗೆ ಕಣ್ಣುಗಳನ್ನು ಸ್ವಚ್ಛ ನೀರಿನಿಂದ ತೊಳೆಯುವುದರಿಂದಲೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Sat, 20 December 25




