ಪ್ರಾತಿನಿಧಿಕ ಚಿತ್ರ
ಮನೆ ಆಹಾರಕ್ಕಿಂತ ಹೆಚ್ಚಾಗಿ ಹೋಟೆಲ್ಗಳಲ್ಲಿ ಅಥವಾ ರಸ್ತೆ ಬದಿಯ ಆಹಾರವನ್ನು ಸೇವಿಸುವುದರಿಂದ ಫುಡ್ ಪಾಯ್ಸನ್ (Food Poison) ಉಂಟಾಗುತ್ತದೆ. ಪರಿಣಾಮವಾಗಿ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು ಸಂಭವಿಸುತ್ತದೆ. ತೀವ್ರತೆ ಹೆಚ್ಚಿದ್ದರೆ ಕೆಲವೊಮ್ಮೆ ಸಾವು ಕೂಡ ಸಂಭವಿಸುತ್ತದೆ. ಈ ಫುಡ್ ಪಾಯ್ಸನ್ ಎಂಬುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ನೀವು ಆರೋಗ್ಯಕರ ಆಹಾರವನ್ನು ಸೇವಿಸದಿದ್ದಾಗ ಇದು ಸಂಭವಿಸುತ್ತದೆ. ಈ ಫುಡ್ ಪಾಯ್ಸನ್ ಎಂಬುದು ಜೀವಕ್ಕೆ ಕುತ್ತು ತರುವ ಸಮಸ್ಯೆಯಲ್ಲದಿದ್ದರೂ ನಿಶ್ಯಕ್ತಿಯನ್ನುಂಟು ಮಾಡುತ್ತದೆ. ಕೆಲವೊಮ್ಮೆ ನಮಗಿಷ್ಟವಾದ ಆಹಾರವನ್ನು ಸೇವಿಸಿದಾಗಲೂ ಫುಡ್ ಪಾಯ್ಸನ್ ಆಗಬಹುದು. ನೈರ್ಮಲ್ಯವಿಲ್ಲದ ಆಹಾರ, ಸಿಹಿ ತಿನಿಸು, ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದಾಗ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಈ ಫುಡ್ ಪಾಯ್ಸನ್ ಸಮಸ್ಯೆಯಿಂದ ಪಾರಾಗಲು ಕೆಲ ಸಲಹೆಗಳು ಇಲ್ಲಿವೆ.
- ಒಂದು ಕಪ್ ಬಿಸಿ ನೀರಿಗೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕುಡಿದರೆ ಫುಡ್ ಪಾಯ್ಸನ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
- ಒಂದು ಚಿಟಿಕೆ ಸಕ್ಕರೆಗೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಮತ್ತು ದಿನಕ್ಕೆ 2 ರಿಂದ 3 ಬಾರಿ ತಿನ್ನಿರಿ. ಇದನ್ನು ಸೇವಿಸುವುದರಿಂದ ಆಹಾರ ವಿಷದ ಸಮಸ್ಯೆ ದೂರವಾಗುತ್ತದೆ.
- ಒಂದು ಬಟ್ಟಲಿನಲ್ಲಿ ಚಮಚ ಮೊಸರು. ಇದಕ್ಕೆ ಒಂದು ಚಮಚ ಮೆಂತ್ಯ ಬೀಜಗಳನ್ನು ಸೇರಿಸಿ. ನಂತರ ಈ ಮಿಶ್ರಣವನ್ನು ಜಗಿಯದೆ ನುಂಗಿ. ಇದು ಹೊಟ್ಟೆ ನೋವು ಮತ್ತು ವಾಂತಿ ಸಮಸ್ಯೆಯನ್ನು ನಿವಾರಿಸುತ್ತದೆ.
- ಶುಂಠಿ ಮತ್ತು ಜೇನುತುಪ್ಪವನ್ನು ಬಳಸುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ದೂರವಾಗುತ್ತವೆ. ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ಶುಂಠಿ ರಸವನ್ನು ಸೇರಿಸಿ. ನಂತರ ಅದನ್ನು ಕುಡಿಯಿರಿ. ಈ ಸಲಹೆಯು ಹೊಟ್ಟೆ ನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತದೆ.
- ಬಾಣಲೆಯಲ್ಲಿ ಜೀರಿಗೆಯನ್ನು ಹುರಿದು ಪುಡಿಮಾಡಿ, ಈ ಹುರಿದ ಜೀರಿಗೆ ಪುಡಿಯನ್ನು ಸೂಪ್ಗೆ ಸೇರಿಸಿ ತಿಂದರೆ ಹೊಟ್ಟೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ.
- ಒಂದು ಬಟ್ಟಲಿನಲ್ಲಿ ತುಳಸಿ ಎಲೆಗಳ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಇದನ್ನು ಕುಡಿಯುವುದರಿಂದ ಹೊಟ್ಟೆನೋವಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ.
- ಬಾಳೆಹಣ್ಣು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಬಾಳೆಹಣ್ಣನ್ನು ಮೊಸರಿನಲ್ಲಿ ಮ್ಯಾಶ್ ಮಾಡಿ ನಂತರ ತಿನ್ನಿರಿ. ಆಹಾರ ವಿಷದ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಸಲಹೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.