ಇನ್ನೂ ಮದುವೆಯಾಗಿಲ್ಲ ಒಂಟಿಯಾಗಿದ್ದೇನೆ ಎಂದು ಬೇಸರ ಪಡಬೇಡಿ ಈ ಸುದ್ದಿ ಓದಿ

ಯಾರನ್ನಾದರೂ ಪ್ರೀತಿಸುವುದು ಹಾಗೂ ಅವರೊಂದಿಗೆ ರಿಲೇಷನ್​ಶಿಪ್​ನಲ್ಲಿರುವುದು ಸಾಮಾನ್ಯ, ಕೆಲವರು ಪ್ರೀತಿಸುತ್ತಾರೆ ಆದರೆ ಮನಸ್ಸನ್ನು ಗೆಲ್ಲಲಾಗದೆ ಸೋತು ಬಿಡುತ್ತಾರೆ,

ಇನ್ನೂ ಮದುವೆಯಾಗಿಲ್ಲ ಒಂಟಿಯಾಗಿದ್ದೇನೆ ಎಂದು ಬೇಸರ ಪಡಬೇಡಿ ಈ ಸುದ್ದಿ ಓದಿ
Relationship
Follow us
TV9 Web
| Updated By: ನಯನಾ ರಾಜೀವ್

Updated on: Aug 26, 2022 | 2:28 PM

ಪ್ರೀತಿ, ಮದುವೆ, ಸಂಸಾರ, ಜವಾಬ್ದಾರಿ ಇವೆಲ್ಲವೂ ನಮ್ಮ ಜೀವನದ ಹಂತಗಳು ಇವ್ಯಾವುದರಿಂದಲೂ ನೀವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಯಾರನ್ನಾದರೂ ಪ್ರೀತಿಸುವುದು ಹಾಗೂ ಅವರೊಂದಿಗೆ ರಿಲೇಷನ್​ಶಿಪ್​ನಲ್ಲಿರುವುದು ಸಾಮಾನ್ಯ, ಕೆಲವರು ಪ್ರೀತಿಸುತ್ತಾರೆ ಆದರೆ ಮನಸ್ಸನ್ನು ಗೆಲ್ಲಲಾಗದೆ ಸೋತು ಬಿಡುತ್ತಾರೆ.

ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಪ್ರೀತಿ ಹುಟ್ಟುತ್ತದೆ ಕೆಲವರು ಆತ/ ಆಕೆಯ ಬಳಿ ಹೇಳಿಕೊಳ್ಳುತ್ತಾರೆ, ಕೆಲವು ಸಕ್ಸಸ್ ಆಗುತ್ತೆ ಇನ್ನೂ ಕೆಲವು ಪ್ರೀತಿಗಳು ನೆಲಕಚ್ಚುತ್ತೆ. ಆದರೆ ಅದೇ ಪ್ರೀತಿಯ ಕೊರಗಿನಲ್ಲಿರುವವರು ಕೆಲವೇ ಕೆಲವು ಮಂದಿ, ಎಲ್ಲವನ್ನೂ ಮರೆತು ಜೀವನದಲ್ಲಿ ಮುಂದೆ ಸಾಗುವವರು ಬಹಳ ಮಂದಿ. ಇದೆಲ್ಲವೂ ಜೀವನದ ಒಂದು ಭಾಗವಷ್ಟೇ.

ಎಲ್ಲರೂ ಕೈಕೈ ಹಿಡಿದು ಸುತ್ತಾಡುವಾಗ ನನಗೂ ಒಂದು ಸಂಗಾತಿ ಇರಬಾರದಿತ್ತೇ ಎಂದು ಮನಸ್ಸಿನಲ್ಲೇ ಅಂದುಕೊಳ್ಳುವುದು ಸಹಜ, ಆದರೆ ಬೇಸರ ಪಡಬೇಡಿ, ಮದುವೆಯಾಗದೆ ಒಂಟಿಯಾಗಿರುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ಇನ್‌ಸೈಡರ್‌ ವೆಬ್‌ಸೈಟ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಒಂಟಿಯಾಗಿರುವವರು ತಮಗಾಗಿ ಸಾಕಷ್ಟು ಸಮಯವನ್ನು ಮೀಸಲಿಡುತ್ತಾರೆ, ಸಂಬಂಧ ಅಥವಾ ಮದುವೆಯ ನಂತರ, ಜನರು ತಮ್ಮ ಸಂಗಾತಿಗೆ ಸಮಯವನ್ನು ನೀಡಬೇಕು. ಅಂತಹ ಪರಿಸ್ಥಿತಿಯಲ್ಲಿ, ಅನೇಕರು ಕೆಲಸ ಮತ್ತು ಸಂಬಂಧಗಳನ್ನು ಎರಡನ್ನೂ ಒಟ್ಟಾಗಿ ನೋಡಿಕೊಳ್ಳುವಾಗ ತಮಗಾಗಿ ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಮನರಂಜನೆಯೆಂಬುದನ್ನೇ ಮರೆತುಬಿಡುತ್ತಾರೆ, ಆದರೆ ಒಂಟಿಯಾಗಿರುವವರು ತಮಗಾಗಿ ಹೆಚ್ಚು ಸಮಯವನ್ನು ಮೀಸಲಿಡಬಹುದು, ಜೀವನವನ್ನು ಆನಂದಿಸಬಹುದು.

ಮದುವೆ ಅಥವಾ ರಿಲೇಷನ್​ಶಿಪ್​ನಲ್ಲಿರುವವರಿಗೆ ಜವಾಬ್ದಾರಿ ಹೆಚ್ಚುತ್ತಲೇ ಇರುತ್ತದೆ

ಕಚೇರಿ, ಮನೆ, ಕುಟುಂಬದ ಜವಾಬ್ದಾರಿಗಳು ಹೆಚ್ಚಾದ ನಂತರ ಒತ್ತಡವೂ ಹೆಚ್ಚುತ್ತದೆ. ಆದರೆ ಬ್ಯಾಚ್ಯುಲರ್ಸ್ ಜೀವನ ಹಾಗಿರುವುದಿಲ್ಲ, ಯಾವುದೇ ಒತ್ತಡವಿರುವುದಿಲ್ಲ, ಸ್ನೇಹಿತರೊಂದಿಗೆ ಊರು ಊರು ಸುತ್ತಿದರೂ ಯಾವುದೇ ನಿರ್ಬಂಧವಿರುವುದಿಲ್ಲ, ಅದಕ್ಕೂ ಮಿಗಿಲಾಗಿ ಕಮಿಟ್​ಮೆಂಟ್ಸ್​ ಇರುವುದಿಲ್ಲ.

ಸಂಗಾತಿಗೆ ಸಮಯ ನೀಡಲು ಆಗುವುದೇ ಇಲ್ಲ ಕೆಲಸದ ಒತ್ತಡದಿಂದಾಗಿ ಸಂಗಾತಿಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ, ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದು ಸಾಮಾನ್ಯ. ಒತ್ತಡವು ನಿದ್ರೆಯ ಮೇಲೆ ಹೆಚ್ಚಿನ ಪರಿಣಾಮವನ್ನು ನೀಡುತ್ತದೆ. ಅದರಿಂದ ಮಾನಸಿಕ ಹಾಗೂ ದೈಹಿಕವಾಗಿ ಘಾಸಿಗೊಳ್ಳುವಿರಿ.

ಒಂಟಿಯಾಗಿರುವವರು ವೃತ್ತಿ ಜೀವನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಒಂಟಿಯಾಗಿರುವವರು ತಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಇದು ವೃತ್ತಿ ಬೆಳವಣಿಗೆಗೆ ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?