ಇನ್ಮುಂದೆ ಮಧ್ಯಮ ವರ್ಗದ ಯುವಕರು ಬ್ರ್ಯಾಂಡ್​​ ಶೂ, ಸನ್ ಗ್ಲಾಸ್ ಹಾಕಿಕೊಳ್ಳಬಹುದು, ಇದಕ್ಕೆಲ್ಲ ಹೊಸ ಜಿಎಸ್​​​ಟಿ ನೀತಿ ಕಾರಣ

ಕೇಂದ್ರ ಸರ್ಕಾರ ತಂದಿರುವ ಹೊಸ ಜಿಎಸ್‌ಟಿ ರೀಫಾರ್ಮ್, ಈ ಬದಲಾವಣೆಯಿಂದ ಮಾಧ್ಯಮ ಜನರಿಗೆ ತುಂಬಾ ಅನುಕೂಲ ಆಗಲಿದೆ. ಇನ್ನು ಫ್ಯಾಶನ್​​ ಜಗತ್ತಿನ ಯುವಕರಿಗೆ ಇದು ತುಂಬಾ ಖುಷಿಯನ್ನು ನೀಡಿದೆ. ನೀವು ಬಳಸುವ ಶೂ, ಚಪ್ಪಲಿ, ಸನ್ಗ್ಲಾಸ್ ಇನ್ನೂ ಕಡಿಮೆ ಬೆಲೆಗೆ ಸಿಗಲಿದೆ. ಈ ಬಗ್ಗೆ ರಸ್ತೋಗಿ ಚೇಂಬರ್ಸ್‌ನ ಸಂಸ್ಥಾಪಕ ಅಭಿಷೇಕ್ ರಸ್ತೋಗಿ ಅವರು ತುಂಬಾ ಸರಳವಾಗಿ ವಿವರಿಸಿದ್ದಾರೆ.

ಇನ್ಮುಂದೆ ಮಧ್ಯಮ ವರ್ಗದ ಯುವಕರು ಬ್ರ್ಯಾಂಡ್​​ ಶೂ, ಸನ್ ಗ್ಲಾಸ್ ಹಾಕಿಕೊಳ್ಳಬಹುದು, ಇದಕ್ಕೆಲ್ಲ ಹೊಸ ಜಿಎಸ್​​​ಟಿ ನೀತಿ ಕಾರಣ
ಸಾಂದರ್ಭಿಕ ಚಿತ್ರ

Updated on: Sep 12, 2025 | 5:20 PM

ಇತ್ತೀಚೆಗಷ್ಟೇ ಕೇಂದ್ರದ ಮೋದಿ ಸರ್ಕಾರ ಜಿಎಸ್​​​ಟಿಯಲ್ಲಿ ದೊಡ್ಡ ಬದಲಾವಣೆ (GST Relief) ತಂದಿದೆ. ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಅವರು ದೀಪಾವಳಿ ಹಬ್ಬಕ್ಕೆ ದೇಶದ ಜನರಿಗೆ ಸಿಹಿ ಸುದ್ದಿಯನ್ನು ನೀಡುತ್ತೇವೆ ಎಂದು ಹೇಳಿದ್ದರು. ನಂತರ ಕೇಂದ್ರ ಹಣಕಾಸು ಸಚಿವಾಲಯ ಕೆಲವೊಂದು ವಸ್ತುಗಳ ಜಿಎಸ್​​​ಟಿ ಬದಲಾವಣೆಯನ್ನು ತಂದಿದೆ. ಇದು ಫ್ಯಾಶನ್ ಪ್ರೀಯರಿಗೂ ಕೂಡ ದೊಡ್ಡ ಮಟ್ಟದ ಗುಡ್​​​​ ನ್ಯೂಸ್​​​ನ್ನು ನೀಡಿದೆ. ಈ ಜಿಎಸ್​​ಟಿ ಬದಲಾವಣೆ ಪಾದರಕ್ಷೆಗಳು ಮತ್ತು ಸನ್ಗ್ಲಾಸ್‌ಗಳಂತಹ ಫ್ಯಾಶನ್ ವಸ್ತುಗಳ ಮೇಲೂ ಪರಿಣಾಮ ಬೀರಿದೆ. ರಸ್ತೋಗಿ ಚೇಂಬರ್ಸ್‌ನ ಸಂಸ್ಥಾಪಕ ಅಭಿಷೇಕ್ ರಸ್ತೋಗಿ ಈ ಬಗ್ಗೆ ಸುಂದರವಾಗಿ ವಿವರಿಸಿದ್ದಾರೆ. ಈ ಬಗ್ಗೆ ಎನ್​​​ಡಿಟಿವಿ ವರದಿಯನ್ನು ಕೂಡ ಮಾಡಿದೆ. 56 ನೇ ಜಿಎಸ್‌ಟಿ ಮಂಡಳಿಯು ಭಾರತವನ್ನು ಸ್ಥಿರ ದರ ರಚನೆಯತ್ತ ಕೊಂಡೊಯ್ದಿದೆ, ಇದು ಐಷಾರಾಮಿ ವಸ್ತುಗಳ ಮೇಲೆ ಹಲವಾರು ಪ್ರತಿಶತದಷ್ಟು ರಿಯಾಯಿತಿಗಳನ್ನು ನೀಡಿದೆ ಎಂದು ಅಭಿಷೇಕ್ ಹೇಳಿದ್ದಾರೆ. ಹಾಗಾದರೆ ಪಾದರಕ್ಷೆಗಳು ಮತ್ತು ಇತರ ಐಷಾರಾಮಿ ವಸ್ತುಗಳ ಬೆಲೆಗಳ ಮೇಲೆ ಅದು ಎಷ್ಟು ಪರಿಣಾಮ ಬೀರುತ್ತದೆ.

ಪಾದರಕ್ಷೆಗಳ ಮೇಲಿನ GST

ಮೊದಲು ಶೂಗಳು ಮತ್ತು ಚಪ್ಪಲಿಗಳ ಮೇಲಿನ ತೆರಿಗೆ ದರ 12% ಅಥವಾ 18% ಆಗಿತ್ತು. ಈಗ ಹೊಸ ನಿಯಮಗಳ ಪ್ರಕಾರ, 2,500 ರೂ.ವರೆಗಿನ ಪಾದರಕ್ಷೆಗಳ ಮೇಲೆ ಕೇವಲ 5% ಜಿಎಸ್‌ಟಿ ವಿಧಿಸಲಾಗುವುದು. ಮೊದಲಿನಂತೆ, 2,500 ರೂ.ಗಿಂತ ಹೆಚ್ಚಿನ ಬೆಲೆಯ ಶೂ ಮತ್ತು ಚಪ್ಪಲಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಲಾಗುವುದು. ಈ ಕ್ರಮವು ಈಗ ಸಾಮಾನ್ಯ ಜನರಿಗೆ ಅಗ್ಗದ ಶೂಗಳು ಮತ್ತು ಚಪ್ಪಲಿಗಳನ್ನು ಖರೀದಿಸುವುದು ಸುಲಭವಾಗುತ್ತದೆ. ಕಂಪನಿಗಳು ಬೆಲೆಗಳನ್ನು ಕಡಿಮೆ ಮಾಡಬಹುದು, ಇದು ಮಾರಾಟವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಸನ್‌ ಗ್ಲಾಸ್‌ ಮತ್ತು ಕನ್ನಡಕ

ಕನ್ನಡಕ ಸಂಬಂಧಿತ ವಸ್ತುಗಳಾದ ಲೆನ್ಸ್‌ಗಳು, ಫ್ರೇಮ್‌ಗಳು, ಆಪ್ಟಿಕಲ್ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಜಿಎಸ್‌ಟಿ ಕೌನ್ಸಿಲ್ 12% ರಿಂದ 5% ಕ್ಕೆ ಇಳಿಸಿದೆ. ಇದರರ್ಥ ಪ್ರಿಸ್ಕ್ರಿಪ್ಷನ್ ಕನ್ನಡಕಗಳು ಈಗ ಅಗ್ಗದ ದರದಲ್ಲಿ ಲಭ್ಯವಿರುತ್ತವೆ. ಫ್ಯಾಷನ್ ಬ್ರಾಂಡ್ ಸನ್ ಗ್ಲಾಸ್‌ಗಳು ಇನ್ನೂ ಹೆಚ್ಚಿನ ತೆರಿಗೆಗಳನ್ನು (12%-18%) ಆಕರ್ಷಿಸಬಹುದು. ಆದರೆ ಅವು HSN ಕೋಡ್ 9003 ಅಥವಾ 9004 ರ ಅಡಿಯಲ್ಲಿ ಬಂದರೆ, ಅವುಗಳಿಗೆ 5% ತೆರಿಗೆ ವಿಧಿಸಬಹುದು. ಜತೆಗೆ ಇದನ್ನು ಫ್ಯಾಷನ್‌ಗಾಗಿ ಅಥವಾ ದೃಷ್ಟಿ ಅಗತ್ಯಗಳಿಗಾಗಿ ಎಂಬುದರ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ
ಕೇವಲ 4 ದಿನದಲ್ಲಿ 164 ಕಿ.ಮೀ ನಡಿಗೆ, ಇದು ವಿನೋದ್ ಕೃಷ್ಣನ್ ಸಾಧನೆ
ಪುರುಷರೇ... ನಿಮ್ಮ ಈ ಅಭ್ಯಾಸಗಳು ಮಹಿಳೆಯರ ಆರೋಗ್ಯವನ್ನೇ ಹಾಳು ಮಾಡುತ್ತೆ!
ಚರ್ಮದ ಆರೈಕೆಗೆ ಪತಂಜಲಿಯ ದಿವ್ಯ ಕಾಯಕಲ್ಪ ತೈಲ
ಪತಂಜಲಿ ಉತ್ಪನ್ನದ ಸಹಾಯದಿಂದ 70 ಕೆಜಿ ತೂಕ ಇಳಿಸಿಕೊಂಡ ಯುವತಿ

ಇದನ್ನೂ ಓದಿ: ಈ ಮೂರು ಎಣ್ಣೆಯಲ್ಲಿ ಕೂದಲು ಬೆಳೆಸಿಕೊಳ್ಳುವ ಶಕ್ತಿಯಿದೆ, ಆದರೆ ಉಪಯೋಗಿಸುವಾಗ ಎಚ್ಚರ

ಆದರೆ ಕೆಲವೊಂದು ಬ್ರ್ಯಾಂಡ್​​ ಶೂಗಳು ಹಾಗೂ ಸನ್‌ ಗ್ಲಾಸ್‌​​ಗಳಿಗೆ 18% ಅಥವಾ 40% ವರೆಗೆ ತೆರಿಗೆ ವಿಧಿಸಬಹುದು ಎಂದು ಹೇಳಲಾಗಿದೆ. ತೆರಿಗೆ ಕಡಿತವು ಅಗ್ಗದ ಬ್ರ್ಯಾಂಡ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ, ಇದು ಅಂತಾರಾಷ್ಟ್ರೀಯ ಮತ್ತು ಪ್ರೀಮಿಯಂ ಬ್ರ್ಯಾಂಡ್‌ಗಳ ಮಾರಾಟದ ಮೇಲೆ ಪರಿಣಾಮ ಬೀರಬಹುದು. ಅಗ್ಗದ ಶೂಗಳು ಮತ್ತು ಕನ್ನಡಕಗಳು ಈಗ ಇನ್ನಷ್ಟು ಅಗ್ಗವಾಗಬಹುದು. ಕಡಿಮೆ ತೆರಿಗೆ ಇರುವ ವಸ್ತುಗಳೊಂದಿಗೆ ಸ್ಪರ್ಧಿಸಲು ಬ್ರ್ಯಾಂಡ್‌ಗಳು ತಮ್ಮ ತಂತ್ರವನ್ನು ಬದಲಾಯಿಸಬೇಕಾಗುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಮಾರುಕಟ್ಟೆಗೆ ಹೋದಾಗ, ನಿಮ್ಮ ನೆಚ್ಚಿನ ಶೂಗಳು ಅಥವಾ ಕನ್ನಡಕಗಳು ಮೊದಲಿಗಿಂತ ಕಡಿಮೆ ಬೆಲೆಗೆ ಸಿಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:20 pm, Fri, 12 September 25