Kannada News Lifestyle Ganesh Chaturthi 2024: How to prepare modaka for Ganesha festival? Kannada News
Ganesh Chaturthi 2024: ಗಣೇಶನಿಗೆ ಬಲುಪ್ರಿಯ ಈ ಮೋದಕ, ಮಾಡೋದು ಹೇಗೆ?
ಗಣೇಶನಿಗೆ ಪ್ರಿಯವಾದ ತಿನಿಸುಗಳಲ್ಲಿ ಮೋದಕ ಕೂಡ ಒಂದು. ಹೀಗಾಗಿ ಚೌತಿ ಹಬ್ಬವು ಮೋದಕವಿಲ್ಲದೇ ಪೂರ್ಣವಾಗುವುದಿಲ್ಲ. ಏಕದಂತನಿಗೆ ಬಲುಪ್ರಿಯವಾದ ಮೋದಕವನ್ನು ನೈವೇದ್ಯವಾಗಿ ಇಡಲಾಗುತ್ತದೆ. ಆವಿಯಲ್ಲಿ ಬೇಯಿಸಿದ ಮೋದಕವು ನೋಡುವುದಕ್ಕೆ ಎಷ್ಟು ಆಕರ್ಷಕವೋ ಅಷ್ಟೇ ರುಚಿಕರವಾಗಿರುತ್ತದೆ. ಹಾಗಾದ್ರೆ ಈ ಮೋದಕ ರೆಸಿಪಿ ಮಾಡೋದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.
ಗಣಪತಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳು ಗಣೇಶನ ಹಬ್ಬಕ್ಕೆ ನೈವೇದ್ಯವಿಡಲು ಏನೇನು ಸಿಹಿತಿಂಡಿಗಳನ್ನು ಮಾಡುವ ಬಗ್ಗೆ ಸಿದ್ಧತೆ ಮಾಡಿಕೊಂಡಾಗಿದೆ. ಗಣೇಶ ಚತುರ್ಥಿಯಂದು ಗಣೇಶನಿಗೆ ಚಕ್ಕುಲಿ, ಉಂಡೆ, ಎಳ್ಳುಂಡೆ, ಕರ್ಜಿಕಾಯಿ, ಕಡುಬು, ಸಿಹಿ ಕಡುಬು, ಖಾರ ಕಡುಬು ಈ ರೀತಿ ಅನೇಕ ತಿಂಡಿಗಳನ್ನು ಮಾಡಿ ನೈವೇದ್ಯಗೆ ಇಡಲಾಗುತ್ತದೆ. ಹೀಗಾಗಿ ಮನೆಯಲ್ಲೇ ಈ ವಸ್ತುಗಳಿದ್ದರೆ ಗಣಪನಿಗೆ ನೈವೇದ್ಯವಿಡಲು ಸುಲಭವಾಗಿ ಮೋದಕವನ್ನು ಮಾಡಬಹುದು.
ಮೊದಲನೆಯದಾಗಿ, ದೊಡ್ಡ ಬಾಣಲೆಗೆ ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಎರಡು ಕಪ್ ತೆಂಗಿನಕಾಯಿ ಸೇರಿಸಿಕೊಂಡು ಪರಿಮಳ ಬರುವವರೆಗೆ ಹುರಿದುಕೊಳ್ಳಿ.
ಆ ಬಳಿಕ ಅದಕ್ಕೆ ಒಂದು ಕಪ್ ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಮೋದಕ ಹಿಟ್ಟು ತಯಾರಿಸಲು ಬಾಣಲೆಗೆ ಎರಡು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕುದಿಸಿ.
ಈ ನೀರಿಗೆ ಎರಡು ಅಕ್ಕಿ ಹಿಟ್ಟು ಸೇರಿಸಿ ನೀರನ್ನು ಹೀರಿಕೊಳ್ಳುವವರೆಗೆ ಚೆನ್ನಾಗಿ ಕಲಸಿಕೊಳ್ಳಿ.
ಐದು ನಿಮಿಷಗಳ ಕಾಲ ತಣ್ಣಾಗಲು ಬಿಟ್ಟು ಮೃದುವಾಗುವವರೆಗೆ ಚೆನ್ನಾಗಿದೆ ನಾದಿಕೊಳ್ಳಿ.
ಚೆಂಡಿನ ಗಾತ್ರದ ಅಕ್ಕಿ ಹಿಟ್ಟಿನ ಹಿಟ್ಟನ್ನು ತೆಗೆದುಕೊಂಡು ಅದನ್ನು ಚಪ್ಪಟೆ ಮಾಡಿ. ಬೆಲ್ಲ ಹಾಗೂ ತೆಂಗಿನಕಾಯಿ ಮಿಶ್ರಣವನ್ನು ಅದರೊಳಗೆ ಹಾಕಿ ಎಲ್ಲ ಬದಿಗಳಿಂದ ಮೋದಕದ ಆಕಾರದಲ್ಲಿ ಒತ್ತಿರಿ.
ಇದನ್ನು ಇಡ್ಲಿ ಪಾತ್ರೆಯಲ್ಲಿ ಹತ್ತು ನಿಮಿಷಗಳ ಕಾಲ ಬೇಯಿಸಿದರೆ ಗಣೇಶನಿಗೆ ಪ್ರಿಯವಾದ ಮೋದಕ ಸವಿಯಲು ಸಿದ್ಧ.