Ganesha Chaturthi Wishes 2024 : ಗಣೇಶನ ಹಬ್ಬದಂದು ನಿಮ್ಮ ಆತ್ಮೀಯರಿಗೆ ಈ ರೀತಿ ಶುಭಾಶಯ ಕೋರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 07, 2024 | 6:00 AM

ಹಿಂದೂಗಳ ಮಂಗಳಕರವಾದ ಹಬ್ಬದಲ್ಲಿ ಗಣೇಶ ಚತುರ್ಥಿಯೂ ಒಂದಾಗಿದ್ದು ಈ ಬಾರಿ ಸೆಪ್ಟೆಂಬರ್‌ 7 ರಂದು ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬದ ಶುಭ ಸಂದರ್ಭದಲ್ಲಿ ಸ್ನೇಹಿತರೊಂದಿಗೆ, ಪ್ರೀತಿ ಪಾತ್ರರೊಂದಿಗೆ ಶುಭಾಶಯಗಳನ್ನು ಬಯಸುತ್ತೇವೆ. ನಿಮ್ಮ ಪ್ರೀತಿಯ ಶುಭಾಶಯಗಳು ನಿಮ್ಮ ಆತ್ಮೀಯರಿಗೆ ಖುಷಿ ತರುತ್ತದೆ. ಹೀಗಾಗಿ ಗಣೇಶ ಚತುರ್ಥಿ ಹಬ್ಬದಂದು ಶುಭಾಶಯಗಳನ್ನು ಕೋರಲು ಸಂದೇಶಗಳು ಇಲ್ಲಿದೆ.

Ganesha Chaturthi Wishes 2024 : ಗಣೇಶನ ಹಬ್ಬದಂದು ನಿಮ್ಮ ಆತ್ಮೀಯರಿಗೆ ಈ ರೀತಿ ಶುಭಾಶಯ ಕೋರಿ
Follow us on

ಗಣೇಶನ ಹಬ್ಬಕ್ಕೆ ಒಂದೇ ದಿನವಷ್ಟೇ ಬಾಕಿಯಿದ್ದು, ನಾಳೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಈಗಾಗಲೇ ಎಲ್ಲರ ಮನೆಯಲ್ಲಿ ಹಬ್ಬಕ್ಕೆ ತಯಾರಿಯು ಜೋರಾಗಿ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ ಎಲ್ಲಾ ಪೂಜೆಗಳಲ್ಲಿ ಗಣಪನಿಗೆ ಮೊದಲು ಪೂಜೆ ಮಾಡುತ್ತಾರೆ. ವಿಘ್ನವನ್ನು ನಿವಾರಿಸುವ ವಿನಾಯಕ ಜನ್ಮ ದಿನದಂದು ನಿಮ್ಮ ಆತ್ಮೀಯರಿಗೆ, ಕುಟುಂಬದವರಿಗೆ ಈ ರೀತಿಯ ಸಂದೇಶಗಳನ್ನು ಕಳುಹಿಸಿ ಶುಭಾಶಯಗಳನ್ನು ತಿಳಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು.

  • ವಿಘ್ನ ನಿವಾರಕ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡಲಿ. ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳಲಿ. ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು.
  • ಚೌತಿ ಎಲ್ಲರ ಬಾಳಿಗೂ ಶುಭದಾಯಕವಾಗಿರಲಿ. ಗಣಪತಿ ನಿಮಗೆ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.
  • ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭಾಶಯಗಳು.
  • ಗಣೇಶ ಭಗವಂತ ನಿಮಗೆ ಎಲ್ಲಾ ಸಂತೋಷ ಮತ್ತು ಯಶಸ್ಸನ್ನು ನೀಡಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
  • ಗಣಪನ ಹುಟ್ಟಿದ ದಿನದಂದು ವಿನಾಯಕನು ನಿಮಗೆ ಸಕಲ ಐಶ್ವರ್ಯ, ಆರೋಗ್ಯ ನೀಡಿ ಹಾರೈಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ. ಗಣೇಶ ಚತುರ್ಥಿಯ ಶುಭಾಶಯಗಳು.
  • ಮೊದಲ ಪೂಜೆ ಸ್ವೀಕರಿಸುವ ಭಗವಾನ್ ಗಣೇಶನು ನಿಮಗೆ ಬುದ್ಧಿವಂತಿಕೆ, ಸಮೃದ್ಧಿ ಮತ್ತು ಸಮೃದ್ಧಿಯಲ್ಲಿ ಸಂತೋಷವನ್ನು ನೀಡಲಿ, ಗಣೇಶ ಹಬ್ಬದ ಶುಭಾಶಯಗಳು.
  • ಗಣೇಶನ ಅನುಗ್ರಹವು ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ನಿಮ್ಮ ಜೀವನವನ್ನು ಬೆಳಗಲಿ. ಗಣೇಶ ಹಬ್ಬದ ಹಾರ್ಥಿಕ ಶುಭಾಶಯಗಳು.
  • ಗೌರಿಪುತ್ರ ಗಣೇಶನು ನಿಮ್ಮ ದುಃಖಗಳನ್ನು ಕಳೆದು ಶಕ್ತಿಯನ್ನು ದಯಪಾಲಿಸಲಿ. ಜೀವನದಲ್ಲಿ ಸದಾ ಸಂತೋಷವೇ ತುಬಿರಲಿ. ಗಣೇಶನ ಹಬ್ಬದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ