ತುಪ್ಪ ನಕಲಿಯೋ, ಅಸಲಿಯೋ ಎಂದು ಈ ಸಿಂಪಲ್​ ವಿಧಾನದ ಮೂಲಕ ತಿಳಿದುಕೊಳ್ಳಿ

| Updated By: ಅಕ್ಷತಾ ವರ್ಕಾಡಿ

Updated on: Aug 09, 2023 | 7:15 PM

ತುಪ್ಪ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂಬುದು ಈಗಾಗಲೇ ತಿಳಿದಿರುವ ವಿಷಯ. ಆದರೆ ನೀವು ಸೇವಿಸುವ ತುಪ್ಪ ಅಸಲಿಯೋ? ನಕಲಿಯೋ ಎಂದು ಮೊದಲು ತಿಳಿದು ಕೊಳ್ಳುವುದು ಅಗತ್ಯ.

ತುಪ್ಪ ನಕಲಿಯೋ, ಅಸಲಿಯೋ ಎಂದು ಈ ಸಿಂಪಲ್​ ವಿಧಾನದ ಮೂಲಕ ತಿಳಿದುಕೊಳ್ಳಿ
Ghee Adulteration
Follow us on

ತುಪ್ಪ(Ghee) ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂಬುದು ಈಗಾಗಲೇ ತಿಳಿದಿರುವ ವಿಷಯ. ಆದರೆ ನೀವು ಸೇವಿಸುವ ತುಪ್ಪ ಅಸಲಿಯೋ? ನಕಲಿಯೋ ಎಂದು ಮೊದಲು ತಿಳಿದು ಕೊಳ್ಳುವುದು ಅಗತ್ಯ. ಯಾಕೆಂದರೆ ನಗರ ಪ್ರದೇಶದಲ್ಲಿ ವಾಸಿಸುವುದರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ತುಪ್ಪಗಳನ್ನೇ ಖರೀದಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ನೀವು ಖರೀದಿಸುವ ತುಪ್ಪ ನಕಲಿಯೋ, ಅಸಲಿಯೋ ಎಂದು ಈ ಸಿಂಪಲ್​ ವಿಧಾನದ ಮೂಲಕ ತಿಳಿದುಕೊಳ್ಳಿ. ಶುದ್ಧ ತುಪ್ಪದ ಹೆಸರಿನಲ್ಲಿ ಕಲಬೆರಕೆ ತುಪ್ಪವನ್ನು ಮಾರಾಟ ಮಾಡುವುದು ಕಂಡು ಬರುತ್ತಿದೆ. ಈ ತುಪ್ಪವನ್ನು ಸೇವಿಸುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.

ಸಾಮಾನ್ಯವಾಗಿ ತುಪ್ಪದೊಂದಿಗೆ ಕಲಬೆರಕೆ ಮಾಡುವ ಪದಾರ್ಥಗಳು:

  • ಕಳಪೆ ಗುಣಮಟ್ಟದ ತೈಲ
  • ಸಸ್ಯಜನ್ಯ ಎಣ್ಣೆ
  • ಕರಗಿದ ಬೆಣ್ಣೆ
  • ಡಾಲ್ಡಾ
  • ಹೈಡ್ರೋಜನೀಕರಿಸಿದ ತೈಲ ಇತ್ಯಾದಿ.

ಇದನ್ನೂ ಓದಿ: ಹಳ್ಳಿ ಮನೆ ಪಾಕವಿಧಾನ ನಿಮ್ಮ ಆರೋಗ್ಯಕ್ಕೆ ಉತ್ತಮ, ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ನೀವು ನಿಜವಾದ ಮತ್ತು ನಕಲಿ ತುಪ್ಪದ ನಡುವೆ ವ್ಯತ್ಯಾಸವನ್ನು ಹೇಗೆ ತಿಳಿದುಕೊಳ್ಳುವುದು?

ಹಂತ 1:
ನಿಮ್ಮ ತುಪ್ಪದಲ್ಲಿ ಕಲಬೆರಕೆ ಇದೆಯೇ ಎಂದು ತಿಳಿಯಬೇಕಾದರೆ, ಇದಕ್ಕೆ ಉಪ್ಪು ಬೇಕು. ನೀವು ಮಾಡಬೇಕಾಗಿರುವುದು ಮೊದಲು ಒಂದು ಪಾತ್ರೆಯಲ್ಲಿ ಎರಡು ಚಮಚ ತುಪ್ಪವನ್ನು ಹಾಕುವುದು.

ಹಂತ 2:

ನಂತರ ನೀವು ತುಪ್ಪದಲ್ಲಿ 1/2 ಚಮಚ ಉಪ್ಪು ಮತ್ತು ಒಂದು ಅಥವಾ ಎರಡು ಹನಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಮಿಶ್ರಣ ಮಾಡಬೇಕು. ಅವೆಲ್ಲವನ್ನೂ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು 20 ನಿಮಿಷಗಳ ಕಾಲ ಬಿಡಿ.

ಹಂತ 3:

20 ನಿಮಿಷಗಳ ನಂತರ ನೀವು ಸಿದ್ಧಪಡಿಸಿದ ಮಿಶ್ರಣದ ಬಣ್ಣ ಬದಲಾಗಿದೆ ಎಂದು ನೋಡಬೇಕು, ಅದರ ಬಣ್ಣ ಬದಲಾಯಿದ್ದರೆ ಆಗ ಅದು ಕಲಬೆರಕೆಯಿಂದ ತುಂಬಿದೆ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ ಅದನ್ನು ಸೇವಿಸಬೇಡಿ, ಏಕೆಂದರೆ ಅದು ನಿಮ್ಮ ದೇಹಕ್ಕೆ ಹಾನಿ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: